Post Office Monthly Income Scheme: ಈ ಯೋಜನೆಯಡಿ ಪ್ರಸ್ತುತ ಬಡ್ಡಿ ದರವು 7.40% ಇದೆ. ಬಡ್ಡಿಯನ್ನು ಪ್ರತಿ ತಿಂಗಳು ನೀಡಲಾಗುತ್ತದೆ. ಈ ಯೋಜನೆಯ ಅವಧಿ 5 ವರ್ಷಗಳು, ಅಂದರೆ ನೀವು ₹9 ಲಕ್ಷ ಹೂಡಿಕೆ ಮಾಡಿದರೆ ಪ್ರತಿ ತಿಂಗಳೂ ₹5,550 ಪಡೆಯಬಹುದು. 15 ಲಕ್ಷ ರೂ.ನ ಜಂಟಿ ಖಾತೆ ತೆರೆದರೆ ಪ್ರತಿ ವ್ಯಕ್ತಿಗೆ ₹9,250 ಸಿಗುತ್ತದೆ.
Post Office Monthly Income Scheme: ನಾವು ದುಡಿಯುತ್ತೀರುವ ಹಣ ಉಳಿಸುವುದು ಬಹುಮುಖ್ಯ ಕೆಲಸ. ಉಳಿತಾಯ ಮಾತ್ರವಲ್ಲದೆ ಕೆಲವು ಸರ್ಕಾರಿ ಯೋಜನೆಗಳಲ್ಲಿ ಹೂಡಿಕೆ ಮಾಡುವ ಮೂಲಕ ಹೆಚ್ಚಿನ ಆದಾಯವನ್ನು ನೀವು ಗಳಿಸಬಹುದು. ಆದರೆ ಅನೇಕರಿಗೆ ನಾವು ಎಲ್ಲಿ ಹೂಡಿಕೆ ಮಾಡಬೇಕು? ತಿಂಗಳು ತಿಂಗಳು ಆದಾಯ ಬರುವ ಯೋಜನೆ ಯಾವುದು ಇದೆ? ಅನ್ನೋದರ ಮಾಹಿತಿ ತಿಳಿದಿರುವುದಿಲ್ಲ. ಇದಕ್ಕೆ ಇಂದು ನಾವು ನಿಮಗೆ ಮಾಹಿತಿ ತಿಳಿಸಿಕೊಡಲಿದ್ದೇವೆ. ತಿಂಗಳು ತಿಂಗಳು ಆದಾಯಕ್ಕೆ ಪೋಸ್ಟ್ ಆಫೀಸ್ ಮಾಸಿಕ ಆದಾಯ ಯೋಜನೆ ಉತ್ತಮ ಆಯ್ಕೆಯಾಗಿದೆ. ಇದು ಸುರಕ್ಷಿತ ಹೂಡಿಕೆ ಯೋಜನೆಯಾಗಿದ್ದು, ನಿಮಗೆ ಉತ್ತಮ ಆದಾಯವನ್ನು ನೀಡುತ್ತದೆ. ಇದರಲ್ಲಿ ನಿಮಗೆ ಯಾವುದೇ ರೀತಿ ಅಪಾಯವಿರುವುದಿಲ್ಲ. ಇದರ ಬಗ್ಗೆ ಮತ್ತಷ್ಟು ಮಾಹಿತಿ ಇಲ್ಲಿದೆ ನೋಡಿ...
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.
ಪೋಸ್ಟ್ ಆಫೀಸ್ನ ಈ ಮಾಸಿಕ ಆದಾಯ ಯೋಜನೆಯಲ್ಲಿ ನೀವು ಹೂಡಿಕೆ ಮಾಡಿದ್ರೆ ನಿವೃತ್ತಿಯ ನಂತರ ಹಣಕಾಸು ಸಮಸ್ಯೆಗಳನ್ನು ಎದುರಿಸದೇ, ವೃದ್ಧಾಪ್ಯದಲ್ಲೂ ವೈಫಲ್ಯಗಳನ್ನು ತಪ್ಪಿಸಬಹುದು. ಹೂಡಿಕೆ ಮಾಡುವ ಹಲವಾರು ಯೋಜನೆಗಳು ಇದ್ದರೂ ಸಹ ಪೋಸ್ಟ್ ಆಫೀಸ್ ಮಾಸಿಕ ಆದಾಯ ಯೋಜನೆ ಒಂದು ಶ್ರೇಷ್ಠ ಆಯ್ಕೆಯಾಗಿದೆ.
ಈ ಯೋಜನೆಯು ಸರಳ ಮತ್ತು ಸುರಕ್ಷಿತ ಹೂಡಿಕೆ ಆಯ್ಕೆಯಾಗಿದೆ. ಈ ಸ್ಕೀಮ್ನಲ್ಲಿ ನೀವು ಹೂಡಿಕೆ ಮಾಡುವ ಮೂಲಕ ನಿಮಗೆ ನಿರ್ದಿಷ್ಟ ಮತ್ತು ಖಾತರಿಯ ಆದಾಯವನ್ನು ಪಡೆಯಬಹುದು. ಇದು ವಿಶೇಷವಾಗಿ ನಿವೃತ್ತಿಯ ನಂತರದವರಿಗೆ ಸೂಕ್ತವಾಗಿದೆ. ಏಕೆಂದರೆ ಅವರು ಹೊಸ ಆದಾಯದ ಮೂಲದ ಬಗ್ಗೆ ಹುಡುಕುತ್ತಿರುತ್ತಾರೆ. ತಿಂಗಳು ತಿಂಗಳು ಒಂದಷ್ಟು ಹಣ ನಮ್ಮ ಕೈಸೇರಲಪ್ಪ ಅನ್ನೋರಿಗೆ ಇದು ಉತ್ತಮ ಹೂಡಿಕೆ ಆಯ್ಕೆಯಾಗಿದೆ.
ಈ ಯೋಜನೆಯಲ್ಲಿ ನೀವು ಒಂದು ಬಾರಿ ಹೂಡಿಕೆ ಮಾಡಿದ ಮೇಲೆ, ನಿರ್ದಿಷ್ಟ ಬಡ್ಡಿದರದ ಮೇಲೆ ತಿಂಗಳು ತಿಂಗಳು ಹಣ ಪಡೆಯಬಹುದು. ಈ ಯೋಜನೆಗೆ ಹೂಡಿಕೆ ಮತ್ತು ಮಾರುಕಟ್ಟೆ ಯಾವುದೂ ಸಹ ಸಂಬಂಧಿಸಿದುದಿಲ್ಲ. ಆದ್ದರಿಂದ ಇಲ್ಲಿ ನಿಮಗೆ ಯಾವುದೇ ರೀತಿಯ ಅಪಾಯವಿರುವುದಿಲ್ಲ. ಇದು ಕೇಂದ್ರ ಸರ್ಕಾರದಿಂದ ಬೆಂಬಲಿತ ಯೋಜನೆಯಾಗಿದ್ದು, ನಿರ್ದಿಷ್ಟವಾದ ಆದಾಯವನ್ನು ನೀಡುತ್ತದೆ.
ಪೋಸ್ಟ್ ಆಫೀಸ್ನ ಈ ಮಾಸಿಕ ಆದಾಯ ಯೋಜನೆಯು ಎಲ್ಲರಿಗೂ ಲಭ್ಯವಿದೆ. ಮೂರು ಜನರು ಜಂಟಿಯಾಗಿಯೂ ಖಾತೆಯನ್ನು ತೆರೆಯಬಹುದು. ಹತ್ತು ವರ್ಷದ ಮಕ್ಕಳ ಹೆಸರಿನಲ್ಲಿ, ಅವರ ಪಾಲಕರ ಹೆಸರಿನಲ್ಲಿ ಖಾತೆ ತೆರೆಯಬಹುದು. ಇಲ್ಲಿ ನೀವು ಕನಿಷ್ಠ ₹1,000 ಹೂಡಿಕೆ ಮಾಡಬಹುದು. ಗರಿಷ್ಠ ₹9 ಲಕ್ಷ ಹೂಡಿಕೆ ಮಾಡಲು ಅವಕಾಶವಿದೆ. ಜಂಟಿ ಖಾತೆಗೆ ₹15 ಲಕ್ಷವರೆಗೆ ಹೂಡಿಕೆ ಮಾಡಬಹುದು.
ಈ ಯೋಜನೆಯಡಿ ಪ್ರಸ್ತುತ ಬಡ್ಡಿ ದರವು 7.40% ಇದೆ. ಬಡ್ಡಿಯನ್ನು ಪ್ರತಿ ತಿಂಗಳು ನೀಡಲಾಗುತ್ತದೆ. ಈ ಯೋಜನೆಯ ಅವಧಿ ಐದು ವರ್ಷಗಳು, ಅಂದರೆ ನೀವು ₹9 ಲಕ್ಷ ಹೂಡಿಕೆ ಮಾಡಿದರೆ ಪ್ರತಿ ತಿಂಗಳೂ ₹5,550 ಪಡೆಯಬಹುದು. 15 ಲಕ್ಷ ರೂ.ನ ಜಂಟಿ ಖಾತೆ ತೆರೆದರೆ ಪ್ರತಿ ವ್ಯಕ್ತಿಗೆ ₹9,250 ಸಿಗುತ್ತದೆ.
ನಿಮ್ಮ ₹1 ಲಕ್ಷ ಹೂಡಿಕೆಗೆ ಪ್ರತಿ ತಿಂಗಳೂ ₹617 ಬಡ್ಡಿ ಸಿಗುತ್ತದೆ. ಈ ಯೋಜನೆಯಲ್ಲಿ ನೀವು ಹೂಡಿಕೆ ಮಾಡುವ ಮೂಲಕ ಯಾವುದೇ ಅಪಾಯವಿಲ್ಲದೆ ನಿರ್ಧಿಷ್ಟ ಮಾಸಿಕ ಆದಾಯ ಪಡೆಯಬಹುದು. ಹೆಚ್ಚಿನ ಮಾಹಿತಿಗೆ ಹತ್ತಿರದ ಪೋಸ್ಟ್ ಆಫೀಸ್ ಸಂಪರ್ಕಿಸಬಹುದು.