Alia Bhatt: ಬಾಲಿವುಡ್ ಸ್ಟಾರ್ ನಟರ ಸಾಂಪತ್ಯದ ಕುರಿತಾದ ವಿಚಾರಗಳು ದಿನಕ್ಕೊಂದು ಹೊರಬರುತ್ತಲೇ ಇರುತ್ತದೆ. ಐಶ್ವರ್ಯ ರೈ ಅವರು ಅಭಿಷೇಕ್ ಬಚ್ಚನ್ ಅವರೊಂದಿಗೆ ವಿಚ್ಛೇದನ ಪಡೆಯಲಿದ್ದಾರೆ ಎನ್ನುವ ಸುದ್ದಿ ಎಲ್ಲೆಡೆ ಸಿಕ್ಕಾಪಟ್ಟೆ ಚರ್ಚೆಯಾಗುತ್ತಿದೆ. ಇದೀಗ ಇದರ ಬೆನ್ನಲ್ಲೆ ಮತ್ತೊಬ್ಬ ಬಾಲಿವುಡ್ ಸ್ಟಾರ್ ಕುಟುಂಬದಲ್ಲಿ ಬಿರುಕು ಕಾಣಿಸಿಕೊಂಡಿದೆ.
ಡಿಸೆಂಬರ್ 14 ರಂದು, ಕಪೂರ್ ಕುಟುಂಬವು ರಾಜ್ ಕಪೂರ್ ಅವರ ಜನ್ಮದಿನದ ಪ್ರಯುಕ್ತ ಶತಮಾನೋತ್ಸವವನ್ನು ಬಹಳ ಸಂಭ್ರಮದಿಂದ ಆಚರಿಸಲಾಯಿತು. ಈ ಕಾರ್ಯಕ್ರಮಕ್ಕೆ ಸದಸ್ಯರು ಸೇರಿದಂತೆ ಇಡೀ ಕಪೂರ್ ಕುಟುಂಬವು ಅಷ್ಟೆ ಅಲ್ಲದೆ ಬಾಲಿವುಡ್ ಸ್ಟಾರ್ಸ್ ಭಾಗಿಯಾಗಿದ್ದರು. ಇದಕ್ಕೆ ಸಂಬಂಧ ಪಟ್ಟ ಹಲವು ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದವು. ಇದೀಗ ಈ ಸಮಾರಂಭಕ್ಕೆ ಸಂಬಂಧ ಪಟ್ಟ ಮತ್ತೊಂದು ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ರಾಜ್ ಕಪೂರ್ ಫಿಲ್ಮ್ ಫೆಸ್ಟಿವಲ್ ಸಮಯದಲ್ಲಿ, ಕಪೂರ್ ಕುಟುಂಬವು ಸಂಭ್ರಮಾಚರಣೆಯನ್ನು ಅದ್ಭುತವಾಗಿ ಆಚರಿಸಿತ್ತು. ಇದಕ್ಕೆ ಸಂಬಂಧ ಪಟ್ಟ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ್ದವು. ಆದರೆ, ಇದೀಗ ಆಲಿಯಾ ಭಟ್ ಹಾಗೂ ಅವರ ಅತ್ತೆ ನೀತು ಕಪೂರ್ ಅವರಿಗೆ ಸಂಬಂಧ ಪಟ್ಟ ವಿಡಿಯೋಗಳು ಇದೀಗ ಸೋಷಿಯಲ್ ಮಿಡಿಯಾದಲ್ಲಿ ಬಜ್ ಕ್ರಿಯೇಟ್ ಮಾಡಿದೆ.
ವೈರಲ್ ಆಗುತ್ತಿರುವ ಈ ವಿಡಿಯೋದಲ್ಲಿ, ರಣಬೀರ್ ಕಪೂರ್ ಅವರು ಆಲಿಯಾ ಭಟ್ ಅವರಿಗೆ ಏನನ್ನೋ ಹೇಳುತ್ತಾರೆ, ಪತಿಯ ಮಾತು ಕೇಳುತ್ತಿದ್ದಂತೆ ಆಲಿಯಾ ಕೂಡ ರಣಬೀರ್ ಕಪೂರ್ ಅವರ ತಾಯಿಯ ಬಳಿಗೆ ಧಾವಿಸುತ್ತಾರೆ. ಆದರೆ ನೀತು ಕಪೂರ್ ಮಾತ್ರ ತಮ್ಮ ಸೊಸೆಯ ಕಡೆಗೆ ತಿರುಗೂ ನೋಡದೆ ಅವಳನ್ನು ಕಡೆಗಣಿಸಿ ಮುಂದೆ ಸಾಗುತ್ತಾರೆ. ಸದ್ಯ ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಈ ವಿಡಿಯೋವನ್ನು ನೋಡಿದ ನಂತರ ನೆಟ್ಟಿಗರು, ಇವರ ನಡುವೆ ಏನೋ ಸರಿಯಿಲ್ಲ ಎಂದು ಮಾತನಾಡಿಕೊಳ್ಳಲು ಆರಂಭಿಸಿದ್ದಾರೆ.
#NeetuKapoor always humiliates #AliaBhatt publicly.pic.twitter.com/ABA6y1qugm
— AnsHussain (@Ansh19957487) December 17, 2024