Ayurvedic Hair Dye: ಬಿಳಿ ಕೂದಲನ್ನು ಕಪ್ಪಾಗಿಸಲು ಬಹುತೇಕ ಮಂದಿ ಮಾರುಕಟ್ಟೆಯಲ್ಲಿ ಸಿಗುವ ಹೇರ್ ಡೈಯನ್ನೆ ಅವಲಂಬಿಸಿರುತ್ತಾರೆ.
Best Ayurvedic Hair Dye: ಮಾರುಕಟ್ಟೆಯಲ್ಲಿ ಸಿಗುವ ಹೇರ್ ಡೈ ಕೆಲವರಲ್ಲಿ ಕೂದಲು ಉದುರುವಿಕೆ, ತಲೆಯಲ್ಲಿ ತುರಿಕೆ, ತಲೆ ನೋವಿನಂತಹ ಹಲವು ಸಮಸ್ಯೆಗಳಿಗೆ ಕಾರಣವಾಗುತ್ತದೆ.
ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ಅಕಾಲಿಕ ಬಿಳಿ ಕೂದಲು ಕೆಲವರ ಆತ್ಮ ವಿಶ್ವಾಸವನ್ನೇ ಕಸಿಯುತ್ತದೆ. ಆದಾಗ್ಯೂ, ಅಡ್ಡಪರಿಣಾಮಗಳ ಭಯದಿಂದಾಗಿ ಕೆಲವರು ಮಾರುಕಟ್ಟೆಯಲ್ಲಿ ದೊರೆಯುವ ಹೇರ್ ಡೈ ಬಳಸಲು ಹಿಂಜರಿಯುತ್ತಾರೆ.
ನೀವೂ ಕೂಡ ಬಿಳಿ ಕೂದಲಿಗೆ ಪರಿಹಾರ ಹುಡುಕುತ್ತಿದ್ದು, ಮಾರುಕಟ್ಟೆಯ ಹೇರ್ ಡೈ ಬಳಸಲು ಹಿಂಜರಿಯುವವರಾದರೆ, ನಿಮಗಾಗಿ ಮೊಸರಿನಿಂದ ತಯಾರಿಸಬಹುದಾದ ಆಯುರ್ವೇದಿಕ್ ಹೇರ್ ಡೈ ಪ್ರಯೋಜನಕಾರಿ ಆಗಿದೆ.
ಮನೆಯಲ್ಲಿರುವ ನೈಸರ್ಗಿಕ ಪದಾರ್ಥಗಳನ್ನು ಬಳಸಿ ಆಯುರ್ವೇದಿಕ್ ಹೇರ್ ಡೈ ತಯಾರಿಸಬಹುದು. ಇದಕ್ಕಾಗಿ ಬೇಕಾಗಿರುವ ಪದಾರ್ಥಗಳೆಂದರೆ:- ಟೀ ಪುಡಿ, ಕಲೋಂಜಿ, ಆಮ್ಲಾ ಪುಡಿ, ಮೊಸರು, ಆಲೋವೆರಾ ಜೆಲ್ ಮತ್ತು ಮೆಹಂದಿ.
ಮೊದಲಿಗೆ ಒಂದೊಂದು ಸ್ಪೂನ್ ಟೀ ಪುಡಿ, ಕಲೋಂಜಿ, ಆಮ್ಲಾ ಪುಡಿಯನ್ನು ಒಂದು ಪಾತ್ರೆಯಲ್ಲಿ ಹಾಕಿ ಒಂದು ಲೋಟ ನೀರು ಹಾಕಿ ಐದಾರು ನಿಮಿಷ ಚೆನ್ನಾಗಿ ಕುದಿಸಿ. ಡಿಕಾಕ್ಷನ್ ತಣ್ಣಗಾದ ಬಳಿಕ ಒಂದು ಬಾಣಲೆಯಲ್ಲಿ ಮೊಸರು, ಆಲೋವೆರಾ ಜೆಲ್, ಮೆಹಂದಿಯನ್ನು ಡಿಕಾಕ್ಷನ್ ಬೆರೆಸುತ್ತಾ ಹದವಾಗಿ ಕಲಸಿ. ಇದನ್ನು ಮುಚ್ಚಿ ರಾತ್ರಿಯಿಡೀ ಹಾಗೆ ಬಿಡಿ.
ಕಬ್ಬಿಣದ ಬಾಣಲೆಯಲ್ಲಿ ರಾತ್ರಿ ಕಲಸಿಟ್ಟಾಗ ಹಸಿರು ಬಣ್ಣಕ್ಕಿದ್ದ ಹೇರ್ ಡೈ ಬೆಳಗಾಗುವಷ್ಟರಲ್ಲಿ ಗಾಢ ಕಪ್ಪು ಬಣ್ಣಕ್ಕೆ ತಿರುಗಿರುತ್ತದೆ. ಇದನ್ನು ಕೂದಲಿನ ಬುಡದಿಂದ ತುದಿವರೆಗೂ ಹಚ್ಚಿ ಒಂದೆರಡು ಗಂಟೆ ಹಾಗೆ ಬಿಡಿ. ನಂತರ ಸೌಮ್ಯ ಶಾಂಪೂವಿನಿಂದ ಹೇರ್ ವಾಶ್ ಮಾಡಿ.
ಈ ಆಯುರ್ವೇದಿಕ್ ಹೇರ್ ಡೈ ಅನ್ನು ನಿಯಮಿತವಾಗಿ ಬಳಸುವುದರಿಂದ ಬಿಳಿ ಕೂದಲಿನಿಂದ ಮುಕ್ತಿ ಪಡೆಯುವುದರ ಜೊತೆಗೆ ಕಾಂತಿಯುತ ಉದ್ದ ಕೂದಲು ನಿಮ್ಮದಾಗುತ್ತದೆ. ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.