Age difference between husband and wife: ಅನೇಕರು ಪ್ರೀತಿ ಮಾಡುವಾಗ ವಯಸ್ಸನ್ನು ಯಾವುದೇ ರೀತಿಯೂ ಲೆಕ್ಕಕ್ಕೆ ತೆಗೆದುಕೊಳ್ಳುವುದಿಲ್ಲ. ಮದುವೆಯಾಗುವ ಗಂಡು-ಹೆಣ್ಣಿನ ನಡುವೆ ವಯಸ್ಸಿನ ನಡುವಿನ ಅಂತ ಕೊಂಚ ವ್ಯತ್ಯಾಸವಿದ್ದರಷ್ಟೇ ಅವರ ಜೀವನ ಸುಖಕರವಾಗಿರುತ್ತದೆ ಅಂತಾ ಆಚಾರ್ಯ ಚಾಣಕ್ಯರು ತಿಳಿಸಿದ್ದಾರೆ.
Age gap between husband and wife: ಯಾರೇ ಆಗಲಿ ಮದುವೆಗೆ ಗಂಡು-ಹೆಣ್ಣು ಹುಡುಕುವಾಗ ಅವರ ವಯಸ್ಸನ್ನೂ ಪರಿಗಣಿಸಲಾಗುತ್ತದೆ. ಹಿಂದೆ ಹುಡುಗ ಹುಡುಗಿಗಿಂತ ದೊಡ್ಡವನಾಗಿರಬೇಕೆಂದು ಹಿರಿಯರು ಪರಿಗಣಿಸುತ್ತಿದ್ದರು. ಆತ ಒಂದೇ ವರ್ಷ ದೊಡ್ಡವನಾಗಿರಲಿ ಅಥವಾ 10 ವರ್ಷ ದೊಡ್ಡವನಾಗಿರಲಿ, ತಮಗಿಂತ 10 ವರ್ಷ ದೊಡ್ಡವರನ್ನೂ ಮದುವೆಯಾದವರೂ ಇದ್ದಾರೆ. ಕೆಲವರು ಎರಡ್ಮೂರು ವರ್ಷ ದೊಡ್ಡವರನ್ನ ಮದುವೆಯಾದರೆ, ಕೆಲವರು ಸಮಾನ ವಯಸ್ಕರನ್ನು ಮದುವೆಯಾಗುತ್ತಾರೆ. ಕೆಲವರ ವಿಯದಲ್ಲಿ ಗಂಡಿಗಿಂತಲೂ ಹೆಣ್ಣು ಒಂದೆರಡು ವರ್ಷ ದೊಡ್ಡವರಾಗಿರುತ್ತಾರೆ. ಗಂಡ-ಹೆಂಡತಿ ನಡುವೆ ವಯಸ್ಸಿನ ಅಂತರದ ಆಚಾರ್ಯ ಚಾಣಕ್ಯರು ಬಹುಮುಖ್ಯ ಮಾಹಿತಿಯನ್ನು ತಮ್ಮ ಚಾಣಕ್ಯ ನೀತಿಯಲ್ಲಿ ತಿಳಿಸಿದ್ದಾರೆ. ಈ ಬಗ್ಗೆ ಅವರು ಏನು ಹೇಳಿದ್ದಾರೆ? ಅವರ ಪ್ರಕಾರ, ಪತಿ-ಪತ್ನಿಯ ನಡುವೆ ಎಷ್ಟು ವಯಸ್ಸಿನ ಅಂತರವಿರಬೇಕು? ಅನ್ನೋದರ ಮಾಹಿತಿ ಇಲ್ಲಿದೆ ನೋಡಿ..
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.
ಹುಡುಗಿಯ ವಯಸ್ಸು ಹೆಚ್ಚು ಇರುವ ಜೋಡಿಗಳನ್ನ ನೋಡಿದಾಗ ನಮ್ಮ ಮನಸ್ಸಿನಲ್ಲಿ ಹಲವಾರು ಪ್ರಶ್ನೆಗಳು ಬರುವುದು ಸಹಜ. ಕ್ರಿಕೆಟ್ ದೇವರು ಖ್ಯಾತಿಯ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ಗಿಂತಲೂ ಅವರ ಪತ್ನಿ ಅಂಜಲಿ ದೊಡ್ಡವರು, ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ಅವರು ನಿಕ್ ಜೋನಾಸ್ಗಿಂತ 10 ವರ್ಷ ದೊಡ್ಡವರು. ದಂಪತಿ ನಡುವೆ ಇಷ್ಟು ದೊಡ್ಡ ವಯಸ್ಸಿನ ವ್ಯತ್ಯಾಸವಿದೆಯೇ ಅಥವಾ ಇಲ್ಲವೇ ಅಂತಾ ಜನರು ಆಶ್ಚರ್ಯ ಪಡುತ್ತಾರೆ. ನೀವೂ ಈ ರೀತಿಯ ಗೊಂದಲದಲ್ಲಿದ್ದರೆ ಚಾಣಕ್ಯ ನೀತಿಯ ಬಗ್ಗೆ ತಿಳಿದುಕೊಳ್ಳಬೇಕು. ಜೀವನದಲ್ಲಿ ಯಶಸ್ಸನ್ನು ಸಾಧಿಸಲು ಜನರು ಹೆಚ್ಚಾಗಿ ಆಚಾರ್ಯ ಚಾಣಕ್ಯರ ಸಲಹೆಗಳನ್ನು ಅನುಸರಿಸುತ್ತಾರೆ. ಚಾಣಕ್ಯ ನೀತಿಯಲ್ಲಿ ಪತಿ-ಪತ್ನಿಯರ ನಡುವಿನ ನಿಖರ ವಯಸ್ಸಿನ ವ್ಯತ್ಯಾಸ ತಿಳಿಸಲಾಗಿದೆ.
ಚಾಣಕ್ಯರ ನೀತಿಯ ಪ್ರಕಾರ, ಪತಿ-ಪತ್ನಿಯ ನಡುವಿನ ವಯಸ್ಸಿನ ವ್ಯತ್ಯಾಸವು ಕಡಿಮೆ ಇರಬೇಕು. 3 ರಿಂದ 5 ವರ್ಷಗಳ ಅಂತರ ಉತ್ತಮವೆಂದು ಪರಿಗಣಿಸಲಾಗುತ್ತದೆ. ಆಚಾರ್ಯ ಚಾಣಕ್ಯ ಹೇಳುವ ಪ್ರಕಾರ, ಕಡಿಮೆ ವಯಸ್ಸಿನ ವ್ಯತ್ಯಾಸದಿಂದ ಪತಿ-ಪತ್ನಿ ಪರಸ್ಪರ ಚೆನ್ನಾಗಿ ಅರ್ಥಮಾಡಿಕೊಳ್ಳಲು ಸಾಧ್ಯವಾಗುತ್ತದೆ. ಇದರಿಂದ ಅವರ ದಾಂಪತ್ಯ ಜೀವನವೂ ಸುಖಮಯವಾಗಿರುತ್ತದೆ. ಹೀಗಾಗಿ ಮದುವೆಗೆ ವಯಸ್ಸಿನ ವ್ಯತ್ಯಾಸವನ್ನು ನೆನಪಿನಲ್ಲಿಟ್ಟುಕೊಳ್ಳಬೇಕು.
ಆಚಾರ್ಯ ಚಾಣಕ್ಯರ ಪ್ರಕಾರ, ಪತಿ-ಪತ್ನಿಯರ ನಡುವಿನ ಸಂಬಂಧವು ಮಾನಸಿಕ ಮತ್ತು ದೈಹಿಕ ಆರೋಗ್ಯಕ್ಕೆ ಬಹಳ ಮುಖ್ಯ. ಗಂಡ-ಹೆಂಡತಿಯ ನಡುವಿನ ದೊಡ್ಡ ವಯಸ್ಸಿನ ವ್ಯತ್ಯಾಸವು ಅನೇಕ ಸಮಸ್ಯೆಗಳನ್ನು ಉಂಟುಮಾಡಬಹುದು. ಇಬ್ಬರ ನಡುವಿನ ಭಿನ್ನಾಭಿಪ್ರಾಯಗಳಿಂದ ಜಗಳ ಹೆಚ್ಚಾಗುತ್ತದೆ. ದಿನನಿತ್ಯದ ಸಂಘರ್ಷದಿಂದ ಇಬ್ಬರ ಸಂಬಂಧ ದುರ್ಬಲವಾಗುತ್ತದೆ. ಬಳಿಕ ದಂಪತಿ ಒಬ್ಬರನ್ನೊಬ್ಬರು ಅರ್ಥಮಾಡಿಕೊಳ್ಳಲು ಸಾಧ್ಯವುದಿಲ್ಲವಂತೆ.
ಚಾಣಕ್ಯ ನೀತಿಯಲ್ಲಿ ಹುಡುಗ-ಹುಡುಗಿಯ ವಯಸ್ಸನ್ನು ಸಹ ಉಲ್ಲೇಖಿಸಲಾಗಿದೆ. ಅದರ ಪ್ರಕಾರ, ಹಿರಿಯ ಹುಡುಗ ಹೆಚ್ಚು ಕಿರಿಯ ಹುಡುಗಿಯನ್ನು ಮದುವೆಯಾಗಬಾರದು ಅಂತಾ ಹೇಳಲಾಗಿದೆ. ಹೀಗೆ ಮಾಡಿದ್ರೆ ಅವರ ದಾಂಪತ್ಯ ಜೀವನ ಹೆಚ್ಚು ಕಾಲ ಉಳಿಯುವುದಿಲ್ಲ. ಆದ್ದರಿಂದ ನೀವು 3 ರಿಂದ 5 ವರ್ಷ ವ್ಯತ್ಯಾಸದ ಪ್ರಕಾರ ನಿಮ್ಮ ಸಂಗಾತಿಯನ್ನು ಆಯ್ಕೆ ಮಾಡಬೇಕು. ಇದರಿಂದ ಮದುವೆಯ ನಂತರ ಯಾವುದೇ ಸಮಸ್ಯೆ ನಿಮ್ಮನ್ನು ಕಾಡುವುದಿಲ್ಲ.
ಚಾಣಕ್ಯ ನೀತಿಯ ಪ್ರಕಾರ, ವಯಸ್ಸಾದ ವ್ಯಕ್ತಿಯನ್ನು ಪ್ರೀತಿಸಿದರೆ ಏನು ಮಾಡಬೇಕು? ಅನ್ನೋದರ ಬಗ್ಗೆಯೂ ತಿಳಿಸಲಾಗಿದೆ. ಇಂತಹ ಪರಿಸ್ಥಿತಿಯಲ್ಲಿ ನೀವು ಸಂಬಂಧವನ್ನು ಅರ್ಥಮಾಡಿಕೊಳ್ಳಬೇಕು. ಇದರಿಂದ ಮದುವೆಗೆ ಮುಂಚೆ ಒಬ್ಬರನ್ನೊಬ್ಬರು ಅರ್ಥ ಮಾಡಿಕೊಳ್ಳುವುದು ಸುಲಭವಾಗುತ್ತದೆ. ವಯಸ್ಸಿನ ವ್ಯತ್ಯಾಸವು ನಿಮ್ಮ ಸಂಬಂಧದಲ್ಲಿ ಉದ್ವಿಗ್ನತೆ ತರುತ್ತಿದೆಯೋ ಇಲ್ಲವೋ ಎಂಬುದನ್ನು ಇದು ನಿಮಗೆ ತಿಳಿಸುತ್ತದೆ. ನಿಮ್ಮ ನಡುವೆ ಉತ್ತಮ ಬಾಂಧವ್ಯವಿದ್ದರೆ ವಯಸ್ಸಾದ ವ್ಯಕ್ತಿಯನ್ನು ಮದುವೆಯಾಗುವುದು ತಪ್ಪು ನಿರ್ಧಾರ ಎನಿಸುವುದಿಲ್ಲ. ಹೀಗಾಗಿ ಮದುವೆಗೂ ಮೊದಲೇ ಒಬ್ಬರನ್ನೊಬ್ಬರು ಸಂಪೂರ್ಣವಾಗಿ ಅರ್ಥಮಾಡಿಕೊಳ್ಳುವುದು ಮುಖ್ಯ.