ಕರೋನಾ ವೈರಸ್ ಪ್ರಕೋಪದ ಹಿನ್ನೆಲೆ ಲಾಕ್ಡೌನ್ ಘೋಷಿಸಲಾಗಿರುವ ಮಧ್ಯೆ, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ತನ್ನ ಹಿರಿಯ ನಾಗರಿಕ ಗ್ರಾಹಕರಿಗೆ ದೊಡ್ಡ ಉಡುಗೊರೆಯೊಂದನ್ನು ನೀಡಿದೆ. ಇದರಿಂದ ಇದೀಗ ಹಿರಿಯ ನಾಗರಿಕರು ತಮ್ಮ ಠೇವಣಿಗಳ ಮೇಲೆ ಹೆಚ್ಚಿನ ಬಡ್ಡಿಯನ್ನು ಪಡೆಯಬಹುದಾಗಿದೆ. ವಾಸ್ತವವಾಗಿ, ಹಿರಿಯ ನಾಗರಿಕ ಗ್ರಾಹಕರಿಗೆ ಎಸ್ಬಿಐ ನೂತನ ಸ್ಕೀಮ್ ವೊಂದನ್ನು ಬಿಡುಗಡೆ ಮಾಡಿದೆ. ರಿಟೇಲ್ ಟರ್ಮ್ ಡಿಪಾಸಿಟ್ ಸೆಗ್ಮೆಂಟ್ ವಿಭಾಗದಲ್ಲಿ, ಎಸ್ಬಿಐ Wecare Deposit ಹೆಸರಿನ ಹೊಸ ಠೇವಣಿ ಯೋಜನೆಯನ್ನು ಪರಿಚಯಿಸಿದೆ. ಈ ಯೋಜನೆಯಲ್ಲಿ, ಹಿರಿಯ ನಾಗರಿಕರಿಗೆ 5 ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ಅವಧಿಯ ಮೇಲಿನ ಸ್ಥಿರ ಠೇವಣಿಗಳ ಮೇಲೆ ಹೆಚ್ಚುವರಿ ಬಡ್ಡಿ ನೀಡಲಾಗುತ್ತಿದೆ.
Wecare Deposit ಯೋಜನೆ
ಎಸ್ಬಿಐನ ಹೊಸ Wecare Deposit ಯೋಜನೆಯು 5 ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ಅವಧಿಯ ಠೇವಣಿಗಳ (ಎಫ್ಡಿ) ಮೇಲೆ ಹೆಚ್ಚುವರಿ 30 ಬಿಪಿಎಸ್ ಪ್ರೀಮಿಯಂ ಬಡ್ಡಿಯನ್ನು ಒದಗಿಸುತ್ತದೆ. ಇದು ಹಿರಿಯ ನಾಗರಿಕರ ಹೂಡಿಕೆಯ ಮೇಲೆ ಮಾತ್ರ ಲಭ್ಯವಿರುತ್ತದೆ. ಎಸ್ಬಿಐನ ಈ ವಿಶೇಷ ಯೋಜನೆ 2020 ಸೆಪ್ಟೆಂಬರ್ 30 ರವರೆಗೆ ಮಾತ್ರ ಜಾರಿಯಲಿರಲಿದೆ. ಈ ಯೋಜನೆಯಡಿ ನೋಂದಾಯಿಸುವ ಗ್ರಾಹಕರಿಗೆ ಮಾತ್ರ ನಿಗದಿತ ಅವಧಿಯಲ್ಲಿ ಲಾಭ ಸಿಗಲಿದೆ.
ಹಿರಿಯ ನಾಗರಿಕರ ಟರ್ಮ್ ಡಿಪಾಸಿಟ್ ಮೇಲೆ ಬಡ್ಡಿ
ಹಿರಿಯ ನಾಗರಿಕರಿಗೆ 5 ವರ್ಷಕ್ಕಿಂತ ಕಡಿಮೆ ಅವಧಿಯ ರಿಟೇಲ್ ಟರ್ಮ್ ಡಿಪಾಸಿಟ್ ಮೇಲೆ ಸಾಮಾನ್ಯ ನಾಗರಿಕರ ಹೋಲಿಕೆಯಲ್ಲಿ ಶೇ.೦.50 ರಷ್ಟು ಹೆಚ್ಚೂವರಿ ಬಡ್ಡಿ ಸಿಗಲಿದೆ.
5 ವರ್ಷಕ್ಕಿಂತ ಹೆಚ್ಚಿನ ಅವಧಿಯ ರಿಟೇಲ್ ಟರ್ಮ್ ಡಿಪಾಸಿಟ್ ಮೇಲೆ ಶೇ.೦.80 ರಷ್ಟು ಬಡ್ಡಿ ಸಿಗಲಿದೆ. ಇದರಲ್ಲಿ ಶೇ.30 ರಷ್ಟು ಹೆಚ್ಚೂವರಿ ಬಡ್ಡಿ ಸಿಗಲಿದೆ.
ಆದರೆ, ಮ್ಯಾಚ್ಯೂರಿಟಿಗಿಂತಲೂ ಮೊದಲು ಒಂದು ವೇಳೆ ಹಿರಿಯ ನಾಗರಿಕರು ತಮ್ಮ ಠೇವಣಿಯನ್ನು ವಾಪಸ್ ಪಡೆದರೆ ಹೆಚ್ಚೂವರಿ ಬಡ್ಡಿಯ ಲಾಭ ಸಿಗುವುದಿಲ್ಲ.
ಸ್ಥಿರ ಠೇವಣಿಗಳ ಮೇಲಿನ ಬಡ್ಡಿ ದರ ಇಳಿಕೆ
ಇದಕ್ಕೂ ಮೊದಲು ಎಸ್ಬಿಐ ತನ್ನ ರಿಟೇಲ್ ಟರ್ಮ್ ಡಿಪಾಸಿಟ್ ಗಳ ಮೇಲಿನ ಬಡ್ಡಿ ದರವನ್ನು ಕಡಿತಗೊಳಿಸಿದೆ. ಈ ಹಿನ್ನೆಲೆಯಲ್ಲಿ ಎಸ್ಬಿಐ ಹಾಗೂ ಸಿಸ್ಟಮ್ ಬಳಿ ಸಾಕಷ್ಟು ಲಿಕ್ವಿಡ್ ಫಂಡ್ ಇರುವ ಕಾರಣ 3 ವರ್ಷದ ರಿಟೇಲ್ ಟರ್ಮ್ ಡಿಪಾಸಿಟ್ ಗಳ ಮೇಲಿನ ಬಡ್ಡಿ ದರಗಳನ್ನು 20 ಬಿಪಿಎಸ್ ಪಾಯಿಂಟ್ಗಳಿಂದ ಕಡಿಮೆ ಮಾಡಿದೆ. ರಿಟೇಲ್ ಟರ್ಮ್ ಡಿಪಾಸಿಟ್ ಮೇಲೆ ಈ ದರಗಳು ಮೇ 12, 2020 ರಿಂದ ಅನ್ವಯಿಸಲಿವೆ.