Duniya Vijay: ದುನಿಯಾ ವಿಜಿ ಅವರು ಸ್ಟಂಟ್ ಮ್ಯಾನ್ ಆಗಿ ಇಂಡಸ್ಟ್ರಿಗೆ ಎಂಟ್ರಿ ಕೊಟ್ಟವರು, 200 ಸಂಭಾವನೆಯ ಮೂಲಕ ತಮ್ಮ ಜೀವನವನ್ನು ರೂಪಿಸಿಕೊಂಡವರು. ಸದ್ಯ ಇನ್ನೂ ಯಂಗ್ ಅಂಡ್ ಎನರ್ಜಿಟಿಕ್ ಆಗಿ ಕಾಣುವ ಇವರಿಗೆ ಇಬ್ಬರು ಮದುವೆ ವಯಸ್ಸಿನ ಹೆಣ್ಣು ಮಕ್ಕಳಿದ್ದಾರೆ ಎನ್ನುವುದು ಹಲವರಿಗೆ ಗೊತ್ತಿಲ್ಲ. ಇದೀಗ ವಿಜಿ ಅವರ ಆ ಇಬ್ಬರು ಹೆಣ್ಣು ಮಕ್ಕಳು ಸಿನಿಮಾ ಇಂಡಸ್ಟ್ರಿಗೆ ಎಂಟ್ರಿ ಕೊಡಲು ಸಜ್ಜಾಗಿದ್ದಾರೆ.

ಸಾಲು ಸಾಲು ಹಿಟ್ ಸಿನಿಮಾಗಳನ್ನು ಸ್ಯಾಂಡಲ್ವುಡ್ಗೆ ನೀಡಿರುವ ದುನಿಯಾ ವಿಜಯ್ ಅವರಿಗೆ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ನೋಡುವುದಕ್ಕೆ ಯಾವ ಹೀರೋಯಿನ್ಗಳಿಗಿಂತಲೂ ಇವರೇನು ಕಮ್ಮಿ ಇಲ್ಲ ಅಂತಲೇ ಹೇಳಬಹುದು.
ಸದ್ಯ ದುನಿಯಾ ವಿಜಿ ಅವರು ನಿರ್ಮಾಪಕರಾಗಿಯೂ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದ್ದಾರೆ, ಇವರ ನಿರ್ಮಾಣದ ಭೀಮಾ ಸಿನಿಮಾ ಇತ್ತೀಚೆಗಷ್ಟೆ ರಿಲೀಸ್ ಆಗಿ ಸ್ಯಾಂಡಲ್ವುಡ್ನಲ್ಲಿ ಬಾರಿ ಸಂಚಲನ ಸೃಷ್ಟಿಸಿತ್ತು.
ಇದೀಗ, ದುನಿಯಾ ವಿಜಿ ಅವರ ಇಬ್ಬರು ಹೆಣ್ಣು ಮಕ್ಕಳು ಕೂಡ ಸಿನಿಮಾಗೆ ಎಂಟ್ರಿ ಕೊಡಲು ಸಿದ್ದತೆ ನಡೆಸಿದ್ದಾರೆ. ದುನಿಯಾ ವಿಜಿ ಅವರ ಇಬ್ಬರು ಹೆಣ್ಣು ಮಕ್ಕಳು ಕೂಡ ಒಬ್ಬರಿಗಿಂತಲೂ ಒಬ್ಬರು ಅಂದದಲ್ಲೂ, ತಮ್ಮ ಲುಕ್ನಲ್ಲೂ ಸ್ಟಾರ್ ಹೀರೋಯಿನ್ಗಳನ್ನು ಮೀರಿಸುವಂತಿದ್ದಾರೆ.
ಇದೀಗ, ತಮ್ಮ ಮಕ್ಕಳಿಬ್ಬರು ಸಿನಿಮಾ ಇಂಡಸ್ಟ್ರಿಗೆ ಎಂಟ್ರಿ ಕೊಡಲು ರೆಡಿಯಾಗಿರುವ ಬೆನ್ನಲ್ಲೆ, ದುನಿಯಾ ವಿಜಯ್ ಅವರು ತಮ್ಮ ಹೆಣ್ಣು ಮಕ್ಕಳಿಗೆ ಕಿವಿ ಮಾತನ್ನು ಹೇಳಿದ್ದಾರೆ.
ಸಿನಿಮಾ ಇಂಡಸ್ಟ್ರಿಯಲ್ಲಿ ಸೋಲು ಗೆಲುವು ಎನ್ನುವುದು ಸಾಮಾನ್ಯ ಅವೆಲ್ಲವನ್ನು ಸಮಾನವಾಗಿ ತೆಗೆದುಕೊಳ್ಳಬೇಕು ಎಂದಿದ್ದಾರೆ.
ಅಷ್ಟೆ ಅಲ್ಲ, ಸಿನಿಮಾ ಎನ್ನುವುದು ಒಂದು ದಿನ ಇದ್ದಂತೆ ನಾಳೆ ಇರುವುದಿಲ್ಲ, ಅದೊಂದು ಮಾಯೆ, ಇಲ್ಲಿ ಏನೇ ಆದರೂ ಅದನ್ನು ಎದುರಿಸುವ ಶಕ್ತಿ ಇರಬೇಕು ಎಂದು ದುನಿಯಾ ವಿಜಿ ತಮ್ಮ ಇಬ್ಬರು ಹೆಣ್ಣು ಮಕ್ಕಳಿಗೆ ಕಿವಿ ಮಾತನ್ನು ಹೇಳಿದ್ದಾರೆ.
ಇನ್ನೂ, ಮೋನಿಷಾ ವಿಜಯ್ ಹಾಗೂ ಮೋನಿಕಾ ವಿಜಯ್ ಅವರು ಸಿನಿಮಾ ಇಂಡಸ್ಟ್ರಿಗೆ ಎಂಟ್ರಿ ಕೊಡಲಿದ್ದು, ತಮ್ಮ ತಂದೆಯಂತಯೇ ಸ್ಯಾಂಡಲ್ವುಡ್ನಲ್ಲಿ ಒಳ್ಳೆಯ ಹೆಸರು ಸಂಪಾದಿಸುತ್ತಾರಾ ಎಲ್ವಾ ಎಂಬುವುದನ್ನುಕಾದು ನೋಡಬೇಕಿದೆ.