ಸಿನಿ ರಂಗದಲ್ಲಿ ಗ್ಲಾಮರ್ ಗರ್ಲ್, ರಾಜಕೀಯದಲ್ಲಿ ರಾಣಿ, ಇಡೀ ನಾಡಿಗೆ 'ಅಮ್ಮ'ನಾಗಿದ್ದ ಹೃದಯವಂತೆ ಈಕೆ ಯಾರು ಗೊತ್ತಾ..!

Jayalalitha Life Story: ಬಾಲ್ಯದಲ್ಲೇ ತಂದೆಯನ್ನು ಕಳೆದುಕೊಂಡರು. ತಾಯಿ ಒಬ್ಬರೇ ಕುಟುಂಬ ನಿಭಾಯಿಸಲು ಸಾಧ್ಯವಾಗದಿದ್ದಾಗ ವಿಧ್ಯಾಭಾಸ ಮೊಟಕುಗೊಳಿಸಿ ಸಿನಿಮಾ ರಂಗದತ್ತ ಪಯಣ ಬೆಳೆಸಿದರು. ಚಿತ್ರರಂಗದಲ್ಲಿ ಇನ್ನೊಂಥರ ಹೋರಾಟ. ನಂತರ ರಾಜಕೀಯ ಪ್ರವೇಶ. ಅಲ್ಲಿ ಮತ್ತೊಂದು ರೀತಿಯ ಹೋರಾಟ.

Written by - Yashaswini V | Last Updated : Dec 5, 2024, 01:32 PM IST
  • 1961ರಲ್ಲಿ ‘ಶ್ರೀ ಶೈಲ ಮಹಾತ್ಮೆ’ ಸಿನಿಮಾ ಮೂಲಕ ಕನ್ನಡ ಚಿತ್ರರಂಗ ಪ್ರವೇಶ.
  • 1965ರಲ್ಲಿ ‘ವೆನ್ನಿರ ಆಡೈ’ ಸಿನಿಮಾ ಮೂಲಕ ತಮಿಳು ಚಿತ್ರರಂಗ ಪ್ರವೇಶ.
  • 1987ರಲ್ಲಿ ರಾಜಕೀಯ ಪಕ್ಷದ ನೇತೃತ್ವ ವಹಿಸಿಕೊಂಡ ಈಕೆ 1991ರಲ್ಲಿ ಮೊದಲ ಬಾರಿಗೆ ಮುಖ್ಯಮಂತ್ರಿಯಾಗಿ ಪದಗ್ರಹಣ ಮಾಡಿದರು.
ಸಿನಿ ರಂಗದಲ್ಲಿ ಗ್ಲಾಮರ್ ಗರ್ಲ್, ರಾಜಕೀಯದಲ್ಲಿ ರಾಣಿ, ಇಡೀ ನಾಡಿಗೆ 'ಅಮ್ಮ'ನಾಗಿದ್ದ ಹೃದಯವಂತೆ ಈಕೆ ಯಾರು ಗೊತ್ತಾ..!  title=

Jayalalitha: 15ನೇ ವಯಸ್ಸಿಗೆ ಸ್ಕೂಲ್ ಟಾಪರ್, 18ನೇ ವಯಸ್ಸಿಗೆ ಸೂಪರ್ ಸ್ಟಾರ್, 40ನೇ ವಯಸ್ಸಿಗೆ ದ್ರಾವಿಡ ನೆಲ ತಮಿಳುನಾಡಿನ ಮುಖ್ಯಮಂತ್ರಿ- ಇದು ಜೆ. ಜಯಲಲಿತಾ. ದಕ್ಷಿಣ ಭಾರತದ ರಾಜಕೀಯ ಮತ್ತು ಚಿತ್ರರಂಗ ಎರಡರಲ್ಲೂ ತನ್ನ ಛಾಪು ಮೂಡಿಸಿದ್ದ ಜಯಲಲಿತಾ ಅವರದು ಹೋರಾಟದ ಬದುಕು. ಬಾಲ್ಯದಲ್ಲೇ ತಂದೆಯನ್ನು ಕಳೆದುಕೊಂಡರು. ತಾಯಿ ಒಬ್ಬರೇ ಕುಟುಂಬ ನಿಭಾಯಿಸಲು ಸಾಧ್ಯವಾಗದಿದ್ದಾಗ ವಿಧ್ಯಾಭಾಸ ಮೊಟಕುಗೊಳಿಸಿ ಸಿನಿಮಾ ರಂಗದತ್ತ ಪಯಣ ಬೆಳೆಸಿದರು. ಚಿತ್ರರಂಗದಲ್ಲಿ ಇನ್ನೊಂಥರ ಹೋರಾಟ. ನಂತರ ರಾಜಕೀಯ ಪ್ರವೇಶ. ಅಲ್ಲಿ ಮತ್ತೊಂದು ರೀತಿಯ ಹೋರಾಟ. 

1948 ಫೆಬ್ರವರಿ 24ರಂದು ಮೈಸೂರಿನಲ್ಲಿ ಜನಿಸಿದ ಜಯಲಲಿತಾ ತಂದೆಯ ಮರಣದ ನಂತರ ಚೆನ್ನೈಗೆ ಶಿಫ್ಟ್ ಆದರು. 10ನೇ ತರಗತಿಯಲ್ಲಿ ಚೆನ್ನೈನ ಚರ್ಚ್ ಪಾರ್ಕ್ ಕಾನ್ವೆಂಟ್ ನಲ್ಲಿ ಸ್ಕೂಲ್ ಟಾಪರ್ ಆದರು. ವಕೀಲರಾಗಬೇಕು ಎಂಬ ಆಸೆ ಇತ್ತಾದರೂ ಕುಟುಂಬದ ಆರ್ಥಿಕ ಸಮಸ್ಯೆಯಿಂದಾಗಿ ವಿದ್ಯಾಭ್ಯಾಸ ಬಿಟ್ಟು 1961ರಲ್ಲಿ ‘ಶ್ರೀ ಶೈಲ ಮಹಾತ್ಮೆ’ ಎಂಬ ಕನ್ನಡ ಸಿನಿಮಾ ಮೂಲಕ ಚಿತ್ರರಂಗ ಪ್ರವೇಶಿಸಿದರು. 1965ರಲ್ಲಿ ‘ವೆನ್ನಿರ ಆಡೈ’ ಸಿನಿಮಾ ಮೂಲಕ ತಮಿಳು ಚಿತ್ರರಂಗಕ್ಕೆ ಕಾಲಿಟ್ಟರು. ಸೂಪರ್ ಹಿಟ್ ಆದ ಈ ಚಿತ್ರದಲ್ಲಿ ಜಯಲಲಿತಾ ಚಿಕ್ಕ ಸ್ಕರ್ಟ್ ಧರಿಸಿದ್ದರು. ಸ್ಕರ್ಟ್ ಧರಿಸಿದ ತಮಿಳು ಚಿತ್ರರಂಗದ ಮೊದಲ ನಟಿ ಎನಿಸಿಕೊಂಡರು. ‘ಗ್ಲಾಮರ್ ಗರ್ಲ್’ ಎಂದು ಹೆಸರುವಾಸಿಯಾದರು. 140ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ ಅವರ ಖ್ಯಾತಿ ದಕ್ಷಿಣ ಭಾರತಕ್ಕೆಲ್ಲಾ ವಿಸ್ತರಿಸಿತು.

ಇದನ್ನೂ ಓದಿ- ಸಖತ್ ಸೌಂಡ್ ಮಾಡುತ್ತಿರುವ ಪುಷ್ಪಾ-2 ಸಿನಿಮಾವನ್ನು ಈ ಐದು ಕಾರಣಗಳಿಗಾಗಿ ನೋಡಲೇಬೇಕು..!

ತಮಿಳಿನ ಜನಪ್ರಿಯ ನಟ ಎಂಜಿ ರಾಮಚಂದ್ರನ್ ಜೊತೆ 28 ಸಿನಿಮಾಗಳಲ್ಲಿ ನಟಿಸಿದ ಜಯಲಲಿತಾ 1982ರಲ್ಲಿ ಎಐಎಡಿಎಂಕೆ ಸೇರಿದರು. 1987ರಲ್ಲಿ ಎಂಜಿಆರ್ ನಿಧನದ ನಂತರ ಎಐಎಡಿಎಂಕೆ ನೇತೃತ್ವ ವಹಿಸಿಕೊಂಡರು. 1989ರಲ್ಲಿ ವಿರೋಧ ಪಕ್ಷದ ನಾಯಕಿಯಾಗಿ ಆಯ್ಕೆಯಾದರು. 1991ರಲ್ಲಿ ಮೊದಲ ಬಾರಿಗೆ ತಮಿಳುನಾಡಿನ ಸಿಎಂ ಆದರು. ತಮ್ಮ ಅವಧಿಯಲ್ಲಿ ‘ಅಮ್ಮ ಕ್ಯಾಂಟೀನ್’, ‘ಅಮ್ಮ ಪಾನಿ’ ಮತ್ತು ‘ಅಮ್ಮ ಮೆಡಿಸಿನ್’ ಯೋಜನೆಗಳನ್ನು ಜಾರಿಗೆ ತಂದು ‘ಅಮ್ಮ’ ಎಂದೇ ಖ್ಯಾತರಾದರು. ಒಟ್ಟು 6 ಬಾರಿ ಮುಖ್ಯಮಂತ್ರಿಯಾಗಿ ದಕ್ಷಿಣ ಭಾರತದ ರಾಜಕೀಯ ರಂಗದಲ್ಲೂ ಹೆಸರು ಮಾಡಿದರು.

ಜಯಲಲಿತಾ ಅವರ ರಾಜಕೀಯದ ಹಾದಿ ಸುಗಮವಾಗಿರಲಿಲ್ಲ. ಆದಾಯ ಮೀರಿದ ಆಸ್ತಿ ಪ್ರಕರಣದಲ್ಲಿ ಅವರು ಜೈಲಿಗೆ ಹೋಗಬೇಕಾಯಿತು. ತಮಿಳುನಾಡು ವಿಧಾನಸಭೆಯಲ್ಲೇ ಜಯಲಲಿತಾ ಅವರ ಸೀರೆಯನ್ನು ಎಳೆಯಲಾಗಿತ್ತು. ಪ್ರತಿಪಕ್ಷ ಡಿಎಂಕೆ ಜಯಲಲಿತಾ ವಿರುದ್ಧ ಸದಾ ಸೇಡಿನ ರಾಜಕೀಯ ಮಾಡಿತು. ಎಂಜಿಆರ್ ಜೊತೆ ಲಿವಿಂಗ್ ಟುಗೆದರ್ ನಲ್ಲಿ ಇದ್ದರೆಂದು ಎಐಎಡಿಎಂಕೆಯಲ್ಲೂ ಜಯಲಲಿತಾ ಹಲವು ರೀತಿಯ ವಿರೋಧಗಳನ್ನು ಎದುರಿಸಬೇಕಾಯಿತು.

ಇದನ್ನೂ ಓದಿ- Pushpa 2: ಸಕತ್ ಸದ್ದು ಮಾಡ್ತಿರೋ ಶ್ರೀಲೀಲಾರ ಐಟಂ ಸಾಂಗ್ ‘ಕಿಸಕ್’ ಬಗ್ಗೆ ‘ಊ ಅಂಟಾವಾ’ ಹಾಡಿಗೆ ಸೊಂಟ ಬಳುಕಿಸಿದ್ದ ಸಮಂತಾ ಏನೇಳಿದ್ದಾರೆ ಗೊತ್ತಾ?

2016ರಲ್ಲಿ ಜಯಲಲಿತಾ ಅವರ ಅರೋಗ್ಯ ತೀವ್ರವಾಗಿ ಕೆಟ್ಟಿತ್ತು. 75 ದಿನ ಆಸ್ಪತ್ರೆಯಲ್ಲಿ ಸಾವು-ಬದುಕಿನೊಂದಿಗೆ ಹೋರಾಡಿದ ಜಯಲಲಿತಾ ಅವರು 2016ರ ಡಿಸಂಬರ್ 5ರಂದು ಕೊನೆಯುಸಿರೆಳೆದರು. ಅವರ ಅಂತಿಮ ಯಾತ್ರೆಯಲ್ಲಿ ಲಕ್ಷಾಂತರ ಜನ ಪಾಲ್ಗೊಂಡಿದ್ದರು. ಎಂಜಿಆರ್ ಸಮಾಧಿಯ ಪಕ್ಕದಲ್ಲೇ ಜಯಲಲಿತಾ ಅವರ ಅಂತ್ಯಕ್ರಿಯೆ ಮಾಡಲಾಯಿತು.

ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News