Cheapest Recharge Plan: ದೇಶದ ಪ್ರಮುಖ ಉದ್ಯಮಿ ಮುಖೇಶ್ ಅಂಬಾನಿ ಒಡೆತನದ ಜಿಯೋ ಕಂಪನಿ ಟೆಲಿಕಾಂ ಮಾರುಕಟ್ಟೆ ಪ್ರವೇಶಿಸಿದ ನಂತರ ಉದ್ಯಮದಲ್ಲಿ ಭಾರಿ ಬದಲಾವಣೆಯಾಗಿದೆ. ಅಲ್ಲಿಯವರೆಗೆ ಏಕಸಾಮ್ಯ ಮೆರೆದಿದ್ದ ಏರ್ ಟೆಲ್ ಮತ್ತು ವೊಡಾಫೋನ್ ಐಡಿಯಾ ಕಂಪನಿಗಳು ಜಿಯೋ ಕಂಪನಿಗೆ ಅನುಗುಣವಾಗಿ ತನ್ನ ಪ್ಲಾನ್ ಗಳಲ್ಲಿ ಮಹತ್ವದ ಬದಲಾವಣೆ ಮಾಡಬೇಕಾಯಿತು. ಇದರಿಂದಾಗಿ ಮೊಬೈಲ್ ಬಳಕೆದಾರರಿಗೆ ಅತಿ ಕೆಮ್ಮಿ ಬೆಲೆಗೆ ಪ್ಲಾನ್ ಗಳು ದೊರೆಯುವಂತಾಯಿತು. ಆದರೆ, ಜುಲೈ ತಿಂಗಳಿನಲ್ಲಿ ಜಿಯೋ, ಏರ್ ಟೆಲ್ ಮತ್ತು ವೊಡಾಫೋನ್ ಐಡಿಯಾ ಕಂಪನಿಗಳು ಟ್ಯಾರೀಫ್ ಬೆಲೆ ಹೆಚ್ಚಿಸಿದ್ದವು. ಇದರ ಬೆನ್ನಲ್ಲೇ ಬಿಎಸ್‌ಎನ್‌ಎಲ್ ಕಂಪನಿ ಅಗ್ಗದ ಬೆಲೆಯ ರಿಚಾರ್ಜ್ ಪ್ಲಾನ್ ಗಳನ್ನು ಬಿಡುಗಡೆ ಮಾಡಿದ್ದರಿಂದ ಹಲವು ಆಕರ್ಷಕ ಪ್ಲಾನ್ ಗಳನ್ನು ಬಿಡುಗಡೆ ಮಾಡಿದ್ದರಿಂದ ಜಿಯೋ, ವಿಐ, ಏರ್ಟೆಲ್ ಬಳಕೆದಾರರು ಬಿಎಸ್‌ಎನ್‌ಎಲ್ ಗೆ ಪೋರ್ಟ್ ಆಗಿದ್ದರು.
ಸರ್ಕಾರಿ ಸಾಮ್ಯದ ಬಿಎಸ್‌ಎನ್‌ಎಲ್ ಗ್ರಾಹಕರನ್ನು ತನ್ನತ್ತ ಸೆಳೆಯುವುದಕ್ಕೆ ಎನ್ನುವುದಕ್ಕಿಂತ ಹೆಚ್ಚಾಗಿ ಇರುವ ಮೊಬೈಲ್ ಬಳಕೆದಾರರು ಜಿಯೋ, ಏರ್ ಟೆಲ್ ಮತ್ತು ವೊಡಾಫೋನ್ ಐಡಿಯಾ ಕಂಪನಿಗಳಿಗೆ ಮತ್ತೆ ಪೋರ್ಟ್ ಆಗುವುದನ್ನು ತಪ್ಪಿಸಲು 100 ರೂ.ಗಿಂತಲೂ ಅಗ್ಗದ ದರದ ಪ್ಲಾನ್ ಗಳನ್ನೂ ಬಿಡುಗಡೆ ಮಾಡಿದೆ. ಈ ಮೂಲಕ ಖಾಸಗಿ ಕಂಪೆನಿಗಳಾದ ಜಿಯೋ, ಏರ್ ಟೆಲ್ ಮತ್ತು ವೊಡಾಫೋನ್ ಐಡಿಯಾಗಳಿಗೆ ಬಿಸಿ ಮುಟ್ಟಿಸಿತ್ತು.
ಇದನ್ನೂ ಓದಿ- ಒಂದಲ್ಲ, ಎರಡಲ್ಲ 100 ರೂ.ಗಿಂತ ಕಡಿಮೆ ಬೆಲೆಯಲ್ಲಿ 'ಐದು' ಪ್ರಿಪೇಯ್ಡ್ ಆಫರ್ ಪರಿಚಯಿಸಿದ ಬಿಎಸ್‌ಎನ್‌ಎಲ್
BSNL ಅಗ್ಗದ ದರದ ಪ್ಲಾನ್ ಗಳನ್ನು ಬಿಡುಗಡೆ ಮಾಡಿದ ಬಳಿಕ ಏರ್ ಟೆಲ್ ಕಂಪನಿಯು ತನ್ನ ಗ್ರಾಹಕರಿಗೆ ಕಡಿಮೆ ಬೆಳೆಯ ರಿಚಾರ್ಜ್ ಟ್ಯಾರಿಫ್ ಅನ್ನು ಪರಿಚಯಿಸಿದೆ. ಏರ್ ಟೆಲ್ ಗ್ರಾಹಕರು ಮತ್ತೆ BSNL ಕಂಪನಿಗೆ ಮರಳುವುದನ್ನು ತಡೆಯಲು 365 ದಿನದ ವ್ಯಾಲಿಡಿಟಿ, ಉಚಿತ ಡೇಟಾ, ಕರೆ, ಓಟಿಟಿ, ಮ್ಯೂಸಿಕ್ ಸೇರಿದಂತೆ ಹಲವು ಸೌಲಭ್ಯ ವುಳ್ಳ ಹೊಸ ರೀಚಾರ್ಜ್ ಪ್ಲಾನ್ ಬಿಡುಗಡೆ ಮಾಡಿದೆ.
ಸುಮಾರು 400 ಮಿಲಿಯನ್ ಮೊಬೈಲ್ ಬಳಕೆದಾರರಿಗೆ ಸೇವೆಯನ್ನು ಒದಗಿಸುತ್ತಿರುವ ಏರ್ ಟೆಲ್ ಮೊದಲಿಗೆ ಜಿಯೋ ಮಾರುಕಟ್ಟೆ ಬಂದಾಗ ಒಡೆತವನ್ನು ಎದುರಿಸಿತ್ತು. ಇದೀಗ BSNL ಅಗ್ಗದ ದರದ ಪ್ಲಾನ್ ಗಳನ್ನೂ ಬಿಡುಗಡೆ ಮಾಡಿರುವುದರಿಂದ ಮತ್ತೊಂದು ಸುತ್ತಿನ ಸಮಸ್ಯೆ ಎದುರಿಸಲು ಸಜ್ಜಾಗಿದೆ. ಈ ಹಿನ್ನೆಲೆಯಲ್ಲಿ ತನ್ನ ಗ್ರಾಹಕರು ಬೇರೆಡೆ ಪೋರ್ಟ್ ಆಗದಂತೆ ತನ್ನ ಗ್ರಾಹಕರ ಅಗತ್ಯಗಳಿಗೆ ತಕ್ಕಂತೆ ವಿವಿಧ ರೀಚಾರ್ಜ್ ಪ್ಲಾನ್ ಗಳನ್ನು ರಿವೈಸ್ ಮಾಡಿದೆ. ಜೊತೆಗೆ ಹೊಸ ಪ್ರೀಮಿಯಂ ಪ್ಲಾನ್ ಅನ್ನು ಪರಿಚಯಿಸಿದೆ.
ಏರ್ಟೆಲ್ ಕಂಪನಿಯು ಡೇಟಾ ಪ್ಲಾನ್ ಗಳು, ಅನ್ ಲಿಮಿಟೆಡ್ ಪ್ಲಾನ್ ಗಳು, ಟಾಪ್-ಅಪ್ ವೋಚರ್ ಗಳು ಮತ್ತು ಕೆಲವು ಕ್ರಿಕೆಟ್ ಪ್ಯಾಕ್ ಗಳನ್ನೂ ಹೊಸ ಸ್ವರೂಪದಲ್ಲಿ ಪರಿಚಯಿಸುತ್ತಿದೆ. ಇವುಗಳ ವಿಶೇಷ ಏನೆಂದರೆ ಮೊಬೈಲ್ ಬಳಕೆದಾರರು ತಮ್ಮ ಬಜೆಟ್ ಮತ್ತು ಅನುಕೂಲಕ್ಕೆ ತಕ್ಕಂತೆ ಹೊಸ ಪ್ಲಾನ್ ಗಳನ್ನು ಆಯ್ಕೆ ಮಾಡಿಕೊಳ್ಳಬಹುದಾಗಿದೆ.
ಇದನ್ನೂ ಓದಿ- 17 ಸಾವಿರಕ್ಕೂ ಹೆಚ್ಚು ವಾಟ್ಸಾಪ್ ಖಾತೆಗಳನ್ನು ಬ್ಲಾಕ್! ಕಾರಣವೇನು?
ಏರ್ ಟೆಲ್ ಕಂಪನಿಯ ರಿವೈಸ್ ರೀಚಾರ್ಜ್ ವಾರ್ಷಿಕ ಪ್ಲಾನ್ ಗಳಲ್ಲಿ 1,999 ರೂಪಾಯಿಗಳ ಪ್ಲಾನ್ ಅನ್ನು ಒಳ್ಳೆಯ ಪ್ಲಾನ್ ಎಂದು ಹೇಳಬಹುದು. ಇದರ ಇನ್ನೊಂದು ವಿಶೇಷ ಏನೆಂದರೆ ಈ ಪ್ಲಾನ್ ನಲ್ಲಿ ಯಾವುದೇ ನೆಟ್ ವರ್ಕ್ ಗೆ ಅನ್ ಲಿಮಿಟೆಡ್ ಕರೆ ಮಾಡಬಹುದಾಗಿದೆ. ದಿನಕ್ಕೆ 100 SMS ಸೌಲಭ್ಯ ಕೂಡ ಇದೆ.
ಈ ಹೊಸ ಪ್ಲಾನ್ ಡೇಟಾ ಸೌಲಭ್ಯವನ್ನು ಗಮನಿಸುವುದಾದರೆ 1,999 ರೂಪಾಯಿಗಳಿಗೆ ವರ್ಷಕ್ಕೆ 24GB ಡೇಟಾ ಲಭ್ಯವಿದೆ. ತಿಂಗಳ ಲೆಕ್ಕದಲ್ಲಿ ನೋಡುವುದಾದರೆ ಒಂದು ತಿಂಗಳಿಗೆ 2GB ಹೈಸ್ಪೀಡ್ ಡೇಟಾ ಸಿಗುತ್ತದೆ. ಈ ಮಿತಿ ಮುಗಿದ ನಂತರ ಪ್ರತಿ MBಗೆ 50 ಪೈಸೆ ಶುಲ್ಕವನ್ನು ವಿಧಿಸಲಾಗುತ್ತದೆ.
ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.