Tata Nano EV Car: 17.1kWh ಸಾಮರ್ಥ್ಯದ ಪವರ್ಫುಲ್ ಬ್ಯಾಟರಿಯಿಂದ ಸುಮಾರು 400 ಕಿ.ಮೀ. ಮೈಲೇಜ್ ನೀಡಲಿದೆ. ಟಾಟಾ ನ್ಯಾನೋ ಎಲೆಕ್ಟ್ರಿಕ್ ಕಾರಿನ ಬೆಲೆ ಸುಮಾರು 4 ಲಕ್ಷ ರೂ. ಇರಬಹುದು ಎಂದು ಅಂದಾಜಿಸಲಾಗಿದೆ.
Tata Nano EV Car Price in India 2024: ಭಾರತೀಯ ಮಾರುಕಟ್ಟೆಗೆ ಶೀಘ್ರವೇ ಟಾಟಾ ನ್ಯಾನೋ ಎಲೆಕ್ಟ್ರಿಕ್ ಕಾರ್ ಲಗ್ಗೆ ಇಡಲಿದೆ. ಈಗಾಗಲೇ ಈ ಕಾರಿನ ವಿನ್ಯಾಸವುಳ್ಳ ಹಲವಾರು ಫೋಸ್ಟರ್ಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, ಜನರ ಗಮನ ಸೆಳೆಯುತ್ತಿದೆ. ಈ ಕಾರು ಖರೀದಿಸಲು ಸಾವಿರಾರು ಜನರು ತುದಿಗಾಲ ಮೇಲೆ ನಿಂತು ಕಾಯುತ್ತಿದ್ದಾರೆ. ಯಾವಾಗ ಈ ಕಾರು ಬಿಡುಗಡೆಯಾಗುತ್ತೆ ಅಂತಾ ಅನೇಕರು ತೀವ್ರ ಕುತೂಹಲ ಹೊಂದಿದ್ದಾರೆ. ಈ ಕಾರು ಪವರ್ಫುಲ್ ಬ್ಯಾಟರಿ, ಅದ್ಭುತ ಫೀಚರ್ಸ್, ಹೊಸ ಡಿಸೈನ್ ಜೊತೆಗೆ ಬಜೆಟ್ ಬೆಲೆ ಹೊಂದಿರುತ್ತದೆ ಎಂದು ವರದಿಯಾಗಿದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.
ಟಾಟಾ ಕಂಪನಿಯು ತನ್ನ ಹೊಸ ಎಲೆಕ್ಟ್ರಿಕ್ ಕಾರುಗಳನ್ನು ಶೀಘ್ರವೇ ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಿದೆ. ಹೊಸದಾಗಿ ಬರುತ್ತಿರುವ ಈ ಟಾಟಾ ನ್ಯಾನೋ ಎಲೆಕ್ಟ್ರಿಕ್ ಕಾರಿನಲ್ಲಿ ಪವರ್ಫುಲ್ ಬ್ಯಾಟರಿ & ಅದ್ಭುತ ವೈಶಿಷ್ಟ್ಯಗಳಿವೆ ಎಂದು ವರದಿಯಾಗಿದೆ.
ಬಜೆಟ್ ಬೆಲೆಗೆ ದೊರೆಯಲಿರುವ ಟಾಟಾ ಎಲೆಕ್ಟ್ರಿಕ್ ಕಾರ್ ಭಾರತೀಯ ಗ್ರಾಹಕರಿಗೆ ಇಷ್ಟವಾಗಲಿದೆ. ಇದು ಅದ್ಭುತ ಡಿಸೈನ್ ಜೊತೆಗೆ ಐಷಾರಾಮಿ ಫೀಚರ್ಸ್ಗಳನ್ನು ಹೊಂದಿರಲಿದೆ. ಈ ಕಾರಿನಲ್ಲಿ 17.1kWh ಬ್ಯಾಟರಿ ಇರುತ್ತದೆ ಎಂದು ಹೇಳಲಾಗಿದೆ.
17.1kWh ಸಾಮರ್ಥ್ಯದ ಪವರ್ಫುಲ್ ಬ್ಯಾಟರಿಯಿಂದ ಸುಮಾರು 400KM ಮೈಲೇಜ್ ನೀಡಲಿದೆ. ಟಾಟಾ ನ್ಯಾನೋ ಎಲೆಕ್ಟ್ರಿಕ್ ಕಾರಿನ ಬೆಲೆ ಸುಮಾರು 4 ಲಕ್ಷ ರೂ. ಇರಬಹುದು ಎಂದು ಅಂದಾಜಿಸಲಾಗಿದೆ.
ಈ ಟಾಟಾ ನ್ಯಾನೋ ಎಲೆಕ್ಟ್ರಿಕ್ ಕಾರು 2025ರಲ್ಲಿ ಬಿಡುಗಡೆಯಾಗಲಿದೆ. ಐಷಾರಾಮಿ ಫೀಚರ್ಸ್ ಜೊತೆಗೆ ಪವರ್ ವಿಂಡೋಸ್, ಆಟೋಮ್ಯಾಟಿಕ್ ಕ್ಲೈಮೇಟ್ ಕಂಟ್ರೋಲ್ ಮತ್ತು 9 ಇಂಚಿನ ಟಚ್ ಸ್ಕ್ರೀನ್ ಡಿಸ್ಪ್ಲೇ ಇರುತ್ತದೆ ಎಂದು ಹೇಳಲಾಗಿದೆ.
ಇವುಗಳ ಜೊತೆಗೆ ಗ್ರಾಹಕರಿಗೆ ಹೊಸ ಫೀಚರ್ಸ್ ಸಹ ಸಿಗಲಿದೆ. ಈ ಕಾರಿನ ಒಳಭಾಗ ತುಂಬಾ ಚೆನ್ನಾಗಿದೆ. ಗ್ರಾಹಕರಿಗೆ ಇಷ್ಟವಾಗುವ ರೀತಿಯಲ್ಲಿ ಅವರ ಬಜೆಟ್ಗೆ ಹೊಂದುವಂತೆ ಈ ಕಾರನ್ನು ಡಿಸೈನ್ ಮಾಡಲಾಗಿದೆ. ಒಟ್ನಲ್ಲಿ ಈ ಕಾರು ಪ್ರತಿಯೊಬ್ಬರಿಗೂ ಅದ್ಭುತ ಅನುಭವ ನೀಡಲಿದೆ ಎಂದು ಹೇಳಲಾಗಿದೆ.