ಭದ್ರತಾ ಸಿಬ್ಬಂದಿ ತಲೆಗೆ ಬಡಿದ ವಿರಾಟ್ ಕೊಹ್ಲಿ ಸಿಡಿಸಿದ ಸಿಕ್ಸರ್​! ಅಯ್ಯೋ ಇದಾನಾಯ್ತು...? ವಿಡಿಯೋ

Virat Kohli Six Injured Security Guard: ಕೊಹ್ಲಿ ಸಿಕ್ಸರ್ ಬಾರಿಸಿದ ಚೆಂಡು ಭದ್ರತಾ ಸಿಬ್ಬಂದಿಯ ತಲೆಗೆ ತಗುಲಿದೆ. ಸೆಕ್ಯುರಿಟಿ ಗಾರ್ಡ್‌ನ ತಲೆಗೆ ಚೆಂಡು ಬಡಿದಿರುವುದನ್ನು ಕಂಡು ಕೊಹ್ಲಿ ಆತಂಕಗೊಂಡಿದ್ದರು. ಚೆಂಡು ಬಡಿದ ತಕ್ಷಣ, ಫಿಸಿಯೋ ಭದ್ರತಾ ಸಿಬ್ಬಂದಿ ಆಗಮಿಸಿ ಚಿಕಿತ್ಸೆ ನೀಡಿದ್ದಾರೆ.

Written by - Bhavishya Shetty | Last Updated : Nov 24, 2024, 03:45 PM IST
    • ಪರ್ತ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ನಡೆಯುತ್ತಿರುವ ಟೆಸ್ಟ್‌ ಕ್ರಿಕೆಟ್‌
    • ಕೊಹ್ಲಿ ಬಾರಿಸಿದ ಸಿಕ್ಸರ್ ನೇರವಾಗಿ ಭದ್ರತಾ ಸಿಬ್ಬಂದಿ ತಲೆಗೆ ಬಿದ್ದಿದ್ದು ಗಾಯಗೊಂಡಿದ್ದಾರೆ.
    • ತಕ್ಷಣ, ಫಿಸಿಯೋ ಭದ್ರತಾ ಸಿಬ್ಬಂದಿ ಆಗಮಿಸಿ ಚಿಕಿತ್ಸೆ ನೀಡಿದ್ದಾರೆ
ಭದ್ರತಾ ಸಿಬ್ಬಂದಿ ತಲೆಗೆ ಬಡಿದ ವಿರಾಟ್ ಕೊಹ್ಲಿ ಸಿಡಿಸಿದ ಸಿಕ್ಸರ್​! ಅಯ್ಯೋ ಇದಾನಾಯ್ತು...? ವಿಡಿಯೋ  title=
Virat Kohli sixer hit security guardʼs head

Virat Kohli Six Injured Security Guard: ಪರ್ತ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ನಡೆಯುತ್ತಿರುವ ಮೊದಲ ಟೆಸ್ಟ್‌ನ ಮೊದಲ ಇನ್ನಿಂಗ್ಸ್‌ನಲ್ಲಿ ವಿರಾಟ್ ಕೊಹ್ಲಿ ಸಂಪೂರ್ಣ ವಿಫಲರಾಗಿದ್ದರು. ಕೇವಲ 5 ರನ್ ಗಳಿಸಿ ಪೆವಿಲಿಯನ್‌ಗೆ ಮರಳಿದ್ದ ಕೊಹ್ಲಿ ವಿರುದ್ಧ ಭಾರೀ ಟೀಕೆಗಳು ವ್ಯಕ್ತವಾಗಿತ್ತು. ಆದರೆ ಎರಡನೇ ಇನ್ನಿಂಗ್ಸ್‌ನಲ್ಲಿ ಕೊಹ್ಲಿ ಉತ್ತಮ ಪ್ರದರ್ಶನ ತೋರುತ್ತಿದ್ದಾರೆ. ಇನ್ನು ಈ ವೇಳೆ ಕೊಹ್ಲಿ ಬಾರಿಸಿದ ಸಿಕ್ಸರ್ ನೇರವಾಗಿ ಭದ್ರತಾ ಸಿಬ್ಬಂದಿ ತಲೆಗೆ ಬಿದ್ದಿದ್ದು ಗಾಯಗೊಂಡಿದ್ದಾರೆ.

ಇದನ್ನೂ ಓದಿ: ಬಾಯ್ಸ್‌ ಅಲರ್ಟ್‌..!! 30ರ ನಂತ್ರ ಮದುವೆಯಾದ್ರೆ ʼಆʼ ವಿಚಾರದಲ್ಲಿ ಸಮಸ್ಯೆ ಉದ್ಭವಿಸುತ್ತೆ..!

ಕೊಹ್ಲಿ ಸಿಕ್ಸರ್ ಬಾರಿಸಿದ ಚೆಂಡು ಭದ್ರತಾ ಸಿಬ್ಬಂದಿಯ ತಲೆಗೆ ತಗುಲಿದೆ. ಸೆಕ್ಯುರಿಟಿ ಗಾರ್ಡ್‌ನ ತಲೆಗೆ ಚೆಂಡು ಬಡಿದಿರುವುದನ್ನು ಕಂಡು ಕೊಹ್ಲಿ ಆತಂಕಗೊಂಡಿದ್ದರು. ಚೆಂಡು ಬಡಿದ ತಕ್ಷಣ, ಫಿಸಿಯೋ ಭದ್ರತಾ ಸಿಬ್ಬಂದಿ ಆಗಮಿಸಿ ಚಿಕಿತ್ಸೆ ನೀಡಿದ್ದಾರೆ.

 

 

ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಸ್ಟಾರ್ಕ್‌ ಅವರ ಆಫ್‌-ಸೈಡ್ಸ್‌ನಲ್ಲಿ ಕೊಹ್ಲಿ ಅದ್ಭುತವಾಗಿ ಸಿಕ್ಸರ್ ಬಾರಿಸುವುದನ್ನು ವಿಡಿಯೋದಲ್ಲಿ ಕಾಣಬಹುದು. ಚೆಂಡು ನೇರವಾಗಿ ಬೌಂಡರಿ ಗೆರೆಯೊಳಗೆ ಬಿದ್ದು ಅಲ್ಲೇ ಕುಳಿತಿದ್ದ ಭದ್ರತಾ ಸಿಬ್ಬಂದಿಯ ತಲೆಗೆ ಬಡಿದಿದೆ.

ಇದನ್ನೂ ಓದಿ: ಈ ಮರದ ಬೇರನ್ನು ಬಟ್ಟೆಯಲ್ಲಿ ಕಟ್ಟಿ ಮನೆಯಲ್ಲಿ ಇಡುವುದರಿಂದ.. ನಿಮ್ಮ ಮನೆಯಲ್ಲಿ ಹಣದ ಹರಿವು ಹೆಚ್ಚಾಗುತ್ತದೆ..!

ಫ್ಲಾಪ್ ಆಗಿದ್ದ ಕೊಹ್ಲಿ ಭರ್ಜರಿ ಕಂಬ್ಯಾಕ್
ಪರ್ತ್ ಟೆಸ್ಟ್‌ನ ಮೊದಲ ಇನ್ನಿಂಗ್ಸ್‌ನಲ್ಲಿ ವಿರಾಟ್ ಕೊಹ್ಲಿ ಸಂಪೂರ್ಣ ವಿಫಲರಾಗಿದ್ದಾರೆ. ಮೊದಲ ಇನ್ನಿಂಗ್ಸ್‌ನಲ್ಲಿ ಕೇವಲ 5 ರನ್‌ ಮಾತ್ರವೇ ಕಲೆಹಾಕಿದ್ದರು. ಆದರೆ ಎರಡನೇ ಇನ್ನಿಂಗ್ಸ್‌ನಲ್ಲಿ ಕೊಹ್ಲಿ ಉತ್ತಮ ಫಾರ್ಮ್‌ನಲ್ಲಿ ಕಾಣಿಸಿಕೊಂಡು ಶತಕ ಸಿಡಿಸಿದ್ದರು. ಕೊಹ್ಲಿ 143 ಎಸೆತಗಳಲ್ಲಿ 8 ಬೌಂಡರಿ ಹಾಗೂ 2 ಸಿಕ್ಸರ್‌ಗಳ ನೆರವಿನಿಂದ 100* ರನ್ ಗಳಿಸಿದ್ದಾರೆ. ಕೊಹ್ಲಿ ಶತಕ ಪೂರೈಸಿದ ತಕ್ಷಣ ಭಾರತದ ಇನ್ನಿಂಗ್ಸ್ ಡಿಕ್ಲೇರ್ ಆಯಿತು. ನಾಯಕ ಬುಮ್ರಾ 487/6 ರಲ್ಲಿ ಇನ್ನಿಂಗ್ಸ್ ಡಿಕ್ಲೇರ್ ಮಾಡಿದ್ದು, ಎರಡನೇ ಇನ್ನಿಂಗ್ಸ್‌ನಲ್ಲಿ ಆಸ್ಟ್ರೇಲಿಯಾವನ್ನು ಬ್ಯಾಟಿಂಗ್ ಮಾಡಲು ಆಹ್ವಾನಿಸಿದ್ದಾರೆ. ಇನ್ನು ಆಸ್ಟ್ರೇಲಿಯಾಕ್ಕೆ 534 ರನ್‌ಗಳ ಗುರಿ ಇದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Trending News