ದಟ್ಟ.. ಕಪ್ಪು ಕೂದಲಿಗಾಗಿ ಅಲೋವೆರಾವನ್ನು ಹೀಗೆ ಬಳಸಿ! ಒಂದೇ ವಾರದಲ್ಲಿ ರಿಸಲ್ಟ್‌ ಪಕ್ಕಾ!!

 Aloe Vera For Healthy and Thick Hair: ಕೆಲವರು ಕೂದಲು ಉದುರುವುವ ಸಮಸ್ಯೆಯನ್ನು ಎದುರಿಸಿ ಬೇಸೋತ್ತಿರುತ್ತಾರೆ.. ಎಷ್ಟೇ ಉತ್ಪನ್ನಗಳನ್ನು ಬಳಸಿದರೂ ಫಲಿತಾಂಶ ಸಿಗುತ್ತಿರುವುದಿಲ್ಲ... ಅಂತಹ ಜನರಿಗೆ, ಅಲೋವೇರಾ ಒಂದು ವರದಾನದಂತೆ ಕೆಲಸ ಮಾಡುತ್ತದೆ. ಅಲೋವೆರಾವನ್ನು ಈ ಕೆಳಗಿನಂತೆ ವಾರಕ್ಕೆ ಎರಡು ಬಾರಿ ಹಚ್ಚಿದರೆ ಕೂದಲು ಪೋಷಣೆ ಪಡೆದು ಚೆನ್ನಾಗಿ ಬೆಳೆಯುತ್ತದೆ.‌ 

1 /6

ಅಲೋವೆರಾ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ತ್ವಚೆಯ ಸೌಂದರ್ಯಕ್ಕಾಗಿ ಅಲೋವೆರಾವನ್ನು ಅನೇಕರು ಬಳಸುತ್ತಾರೆ. ಅಲೋವೆರಾ ಚರ್ಮಕ್ಕೆ ಮಾತ್ರವಲ್ಲದೆ ಕೂದಲಿಗೆ ಸಹ ಒಳ್ಳೆಯದು.   

2 /6

ಇದು ಅನೇಕ ಔಷಧೀಯ ಗುಣಗಳನ್ನು ಹೊಂದಿದೆ. ಅಲೋವೆರಾ ಚರ್ಮ ಮತ್ತು ಕೂದಲಿನ ಸಮಸ್ಯೆಗಳನ್ನು ಪರಿಣಾಮಕಾರಿಯಾಗಿ ಕಡಿಮೆ ಮಾಡುತ್ತದೆ. ಕೂದಲನ್ನು ಆರೋಗ್ಯವಾಗಿಡುವಲ್ಲಿ ಅಲೋವೆರಾಕ್ಕಿಂತ ಮಿಗಿಲಾದ ಪರಿಹಾರವಿಲ್ಲ ಎಂದರೆ ಅತಿಶಯೋಕ್ತಿಯಲ್ಲ.  

3 /6

ಅಲೋವೆರಾದಲ್ಲಿ ಎರಡು ರೀತಿಯ ಉಪಯೋಗಗಳಿವೆ. ಇದು ಆರೋಗ್ಯ ಮತ್ತು ಸೌಂದರ್ಯ ಎರಡನ್ನು ನೋಡಿಕೊಳ್ಳುತ್ತದೆ.. ಇಂದಿನ ಕಾಲದಲ್ಲಿ ಕೂದಲು ಉದುರುವ ಸಮಸ್ಯೆ ಅನೇಕರಲ್ಲಿದೆ. ಆದರೆ ಇದೀಗ ಕೂದಲು ಬೆಳವಣಿಗೆಗೆ ಅಲೋವೆರಾವನ್ನು ಹೇಗೆ ಬಳಸಬೇಕೆಂದು ಇಲ್ಲಿ ತಿಳಿಯೋಣ.  

4 /6

ಒಂದು ಬೌಲ್ ತೆಗೆದುಕೊಳ್ಳಿ.. ಅದಕ್ಕೆ ನಾಲ್ಕು ಚಮಚ ಅಲೋವೇರಾ ತಿರುಳನ್ನು ಹಾಕಿ. ನಂತರ ಎರಡು ಚಮಚ ಆಲಿವ್ ಎಣ್ಣೆಯನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ನಂತರ ಇನ್ನೂ ಎರಡು ಚಮಚ ತೆಂಗಿನ ಎಣ್ಣೆಯನ್ನು ಸೇರಿಸಿ. ಈಗ ಎಲ್ಲವನ್ನೂ ಚೆನ್ನಾಗಿ ಮಿಶ್ರಣ ಮಾಡಿ.  

5 /6

ಈಗ ಈ ಮಿಶ್ರಣವನ್ನು ಕೂದಲಿನ ಬುಡದಿಂದ ತುದಿಯವರೆಗೆ ಹಚ್ಚಿಕೊಳ್ಳಿ. ನಿಮ್ಮ ಕೂದಲಿನ ಪ್ರಕಾರಕ್ಕೆ ಅಲೋವೆರಾ ಮತ್ತು ಎಣ್ಣೆಯನ್ನು ಸೇರಿಸಿ. ಕೂದಲಿಗೆ ಹಚ್ಚಿದ ನಂತರ.. ಸ್ವಲ್ಪ ಸಮಯ ಮೃದುವಾಗಿ ಮಸಾಜ್ ಮಾಡಿ. ಈ ರೀತಿ ಮಾಡುವುದರಿಂದ ರಕ್ತ ಪರಿಚಲನೆ ಸುಧಾರಿಸುತ್ತದೆ.  

6 /6

ಅದರ ನಂತರ, ಒಂದು ಗಂಟೆ ಬಿಟ್ಟು ಶಾಂಪೂವಿನಿಂದ ನಿಮ್ಮ ತಲೆಯನ್ನು ತೊಳೆಯಿರಿ. ಹೀಗೆ ಮಾಡುವುದರಿಂದ ತಲೆಹೊಟ್ಟು ಕಡಿಮೆಯಾಗುತ್ತದೆ. ಕೂದಲು ಉದುರುವುದನ್ನು ಕಡಿಮೆ ಮಾಡುತ್ತದೆ. ವಾರಕ್ಕೆ ಎರಡು ಬಾರಿ ಹೀಗೆ ಮಾಡಿದರೆ ಕೂದಲು ದಟ್ಟವಾಗಿ ಉದ್ದವಾಗಿ ಬೆಳೆಯುತ್ತದೆ.