Benefits of Onion: ಯುರಿಕ್ ಆಸಿಡ್ ದೇಹದಲ್ಲಿ ಹೆಚ್ಚಾದಂತೆ ಮೂಳೆಗಳ ನಡುವೆ ಸಂಗ್ರಹವಾಗಲು ಆರಂಭಿಸುತ್ತದೆ. ಇದರಿಂದ ಕೀಲುಗಳಲ್ಲಿ ಊತ ಮತ್ತು ನೋವು ಕಾಣಿಸಿಕೊಳ್ಳುತ್ತದೆ.
ಈರುಳ್ಳಿ ಕಡಿಮೆ ಪ್ಯೂರಿನ್ ಆಹಾರವಾಗಿದ್ದು, ಕೀಲುಗಳಲ್ಲಿ ಸಿಲುಕಿರುವ ಯುರಿಕ್ ಆಸಿಡ್ ಅನ್ನು ಕರಗಿಸಲು ಸಹಾಯ ಮಾಡುತ್ತದೆ.
ಸಂಧಿವಾತದಿಂದ ಉಂಟಾಗುವ ಉರಿಯೂತವನ್ನು ಈರುಳ್ಳಿ ಕಡಿಮೆ ಮಾಡುತ್ತದೆ. ಈರುಳ್ಳಿಯಲ್ಲಿ ಕಂಡುಬರುವ ಕ್ವೆರ್ಸೆಟಿನ್ ಎಂಬ ಫ್ಲೇವನಾಯ್ಡ್ ಪ್ಯೂರಿನ್ ಜೀರ್ಣಕ್ರಿಯೆಯನ್ನು ಉತ್ತೇಜಿಸುತ್ತದೆ.
ಈರುಳ್ಳಿ ಯುರಿಕ್ ಆಸಿಡ್ ರಚನೆಯನ್ನು ತಡೆಯುತ್ತದೆ. ಯಕೃತ್ತು ಮತ್ತು ಮೂತ್ರಪಿಂಡಗಳಿಗೆ ಸಹ ಪ್ರಯೋಜನಕಾರಿ.
ಯುರಿಕ್ ಆಮ್ಲವನ್ನು ನಿಯಂತ್ರಿಸಲು ಈರುಳ್ಳಿಯನ್ನು ಬೇಯಿಸುವುದಕ್ಕಿಂತ ಹಸಿಯಾಗಿ ತಿನ್ನುವುದು ಹೆಚ್ಚು ಪರಿಣಾಮಕಾರಿ. ಈರುಳ್ಳಿಯನ್ನು ಸಲಾಡ್ ಜೊತೆ ತಿನ್ನುವುದು ಉತ್ತಮ.
ಈರುಳ್ಳಿಯನ್ನು ಕತ್ತಿರಿಸಿ ನೀರಿಗೆ ಹಾಕಿ ಜ್ಯೂಸ್ ಮಾಡಬೇಕು. ಇದನ್ನು ಕುಡಿಯುವುದರಿಂದ ಯುರಿಕ್ ಆಸಿಡ್ ಮಟ್ಟ ದೇಹದಲ್ಲಿ ಕಡಿಮೆಯಾಗಲು ಪ್ರಾರಂಭಿಸುತ್ತದೆ.
ಯುರಿಕ್ ಆಸಿಡ್ ಸಮಸ್ಯೆಯನ್ನು ಹೋಗಲಾಡಿಸಲು ಹುಳಿ ಹಣ್ಣುಗಳನ್ನು ತಿನ್ನುವುದು ಸಹ ಪ್ರಯೋಜನಕಾರಿಯಾಗಿದೆ.
ಸೂಚನೆ: ಪ್ರಿಯ ಓದುಗರೇ, ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ದಯವಿಟ್ಟು ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.