Horse Gram: ಏಳು ದಿನಗಳಲ್ಲೇ ಪೈಲ್ಸ್‌ ಸಮಸ್ಯೆಗೆ ಪರಿಹಾರ ಬೇಕಾದ್ರೆ ʼಈʼ ಕಾಳು ಸೇವಿಸಿರಿ

Horse gram health benefits: ಕಳಪೆ ಜೀರ್ಣಕ್ರಿಯೆಯಿಂದ ಮಲವು ತುಂಬಾ ಗಟ್ಟಿಯಾಗುತ್ತದೆ. ಮಲಬದ್ಧತೆಯ ಸಂದರ್ಭದಲ್ಲಿ ಪೈಲ್ಸ್ ಸಮಸ್ಯೆ ಉಲ್ಬಣಗೊಳ್ಳಲು ಪ್ರಾರಂಭಿಸುತ್ತದೆ. ಈ ಕಾರಣದಿಂದ ಮಲವಿಸರ್ಜನೆಯ ಸಮಯದಲ್ಲಿ ಹೆಚ್ಚಿನ ಬಲವನ್ನು ಪ್ರಯೋಗಿಸಬೇಕಾಗುತ್ತದೆ.

Horse gram health benefits: ಬದಲಾದ ಜೀವನಶೈಲಿ ಮತ್ತು ಕೆಟ್ಟ ಆಹಾರ ಪದ್ಧತಿಯಿಂದ ಇಂದು ಅನೇಕರು ಹಲವಾರು ಕಾಯಿಲೆಗಳಿಗೆ ತುತ್ತಾಗುತ್ತಿದ್ದಾರೆ. ಪೈಲ್ಸ್‌ ಸಮಸ್ಯೆ ಇಂದು ಯುವಕರಿಂದ ಹಿಡಿದು ವೃದ್ಧರನ್ನು ಕಾಡುತ್ತಿದೆ. ನೀವು ಪೈಲ್ಸ್ ನೋವಿನಿಂದ ತೊಂದರೆಗೀಡಾಗಿದ್ದರೆ ಕೆಲವೇ ಕೆಲವು ದಿನಗಳ ಕಾಲ ಹುರುಳಿ ಕಾಳುಗಳನ್ನು ಸೇವಿಸಬೇಕು. ಒಂದೇ ವಾರದಲ್ಲಿ ನೀವು ಪೈಲ್ಸ್ ನೋವಿನಿಂದ ಪರಿಹಾರವನ್ನು ಪಡೆಯಬಹುದು. ಇದರ ಬಗ್ಗೆ ಮತ್ತಷ್ಟು ಮಾಹಿತಿ ಇಲ್ಲಿದೆ ನೋಡಿ...

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

1 /6

ಅಮೇರಿಕನ್ ನ್ಯಾಶನಲ್ ಸೆಂಟರ್ ಫಾರ್ ಬಯೋಟೆಕ್ನಾಲಜಿ ಇನ್ಫರ್ಮೇಷನ್(NCBI) ಪ್ರಕಾರ, ಹುರುಳಿ ಕಾಳು ಕರುಳಿಗೆ ತುಂಬಾ ಆರೋಗ್ಯಕರ. ಇದು ಪೈಲ್ಸ್ ನೋವಿನಿಂದ ಪರಿಹಾರವನ್ನು ಒದಗಿಸುವ ಅಂಶಗಳನ್ನು ಒಳಗೊಂಡಿದೆ ಎಂದು ತಿಳಿಸಿದೆ. 

2 /6

ಹುರುಳಿ ಕಾಳು ಕಿಡ್ನಿ ಕಲ್ಲುಗಳು ಮತ್ತು ಮೂತ್ರದ ಸೋಂಕಿನಿಂದ ಉಂಟಾಗುವ ತೊಂದರೆಗಳನ್ನೂ ಸಹ ಕಡಿಮೆ ಮಾಡುತ್ತದೆ. ಶತಮಾನಗಳಿಂದಲೂ ಆಯುರ್ವೇದದಲ್ಲಿ ಪೈಲ್ಸ್‌ಗೆ ಹುರುಳಿ ಕಾಳಿನಿಂದ ಚಿಕಿತ್ಸೆ ನೀಡಲಾಗುತ್ತಿತ್ತು. ಇದೀಗ ವಿಜ್ಞಾನವೂ ಸಹ ಇದರ ಪ್ರಯೋಜನಗಳ ಬಗ್ಗೆ ಬೆಳಕು ಚೆಲ್ಲಿದೆ.

3 /6

ಹುರುಳಿ ಕಾಳು ಪ್ರೋಟೀನ್ ಮತ್ತು ಫೈಬರ್‌ನಿಂದ ತುಂಬಿರುತ್ತದೆ. 100 ಗ್ರಾಂ ಹುರುಳಿ ಕಾಳಿನಲ್ಲಿ 22 ಗ್ರಾಂ ಪ್ರೋಟೀನ್ ಕಂಡುಬರುತ್ತದೆ. ಇದರಲ್ಲಿ ಫೈಬರ್ ಹೇರಳವಾಗಿದ್ದು, ಪ್ರೊಟೀನ್ ಮತ್ತು ನಾರಿನ ಹೊರತಾಗಿ ಅನೇಕ ರೀತಿಯ ಪೋಷಕಾಂಶಗಳು ಕಂಡುಬರುತ್ತವೆ. ಹುರುಳಿ ಕಾಳಿನ ಸೇವನೆಯಿಂದ ಅಪೌಷ್ಟಿಕತೆಯನ್ನು ಗುಣಪಡಿಸಬಹುದು. ಇದು ಸಾಕಷ್ಟು ಪ್ರಮಾಣದ ಫೈಬರ್ ಹೊಂದಿರುತ್ತದೆ, ಇದು ಕರುಳಿನಲ್ಲಿ ಉತ್ತಮ ಬ್ಯಾಕ್ಟೀರಿಯಾವನ್ನು ಹೆಚ್ಚಿಸುತ್ತದೆ.

4 /6

ಕಳಪೆ ಜೀರ್ಣಕ್ರಿಯೆಯಿಂದ ಮಲವು ತುಂಬಾ ಗಟ್ಟಿಯಾಗುತ್ತದೆ. ಮಲಬದ್ಧತೆಯ ಸಂದರ್ಭದಲ್ಲಿ ಪೈಲ್ಸ್ ಸಮಸ್ಯೆ ಉಲ್ಬಣಗೊಳ್ಳಲು ಪ್ರಾರಂಭಿಸುತ್ತದೆ. ಈ ಕಾರಣದಿಂದ ಮಲವಿಸರ್ಜನೆಯ ಸಮಯದಲ್ಲಿ ಹೆಚ್ಚಿನ ಬಲವನ್ನು ಪ್ರಯೋಗಿಸಬೇಕಾಗುತ್ತದೆ. ಇದರಿಂದ ನೋವು ಮತ್ತಷ್ಟು ಹೆಚ್ಚಾಗುತ್ತದೆ. ಹುರುಳಿ ಕಾಳು ಮಲವನ್ನು ಮೃದುವಾಗಿಸುತ್ತದೆ, ಇದರಿಂದ ಮಲ ಹೊರಹೋಗಲು ಯಾವುದೇ ತೊಂದರೆ ಆಗುವುದಿಲ್ಲ.

5 /6

ಹುರುಳಿ ಕಾಳನ್ನು ಸೇವಿಸುವುದರಿಂದ ಮೂತ್ರ ವಿಸರ್ಜನೆಗೆ ಸಂಬಂಧಿಸಿದ ಅನೇಕ ರೀತಿಯ ಸಮಸ್ಯೆಗಳನ್ನು ಗುಣಪಡಿಸಬಹುದು. ಇದು ಮೂತ್ರಪಿಂಡದಲ್ಲಿರುವ ಕಲ್ಲುಗಳನ್ನು ಕರಗಿಸಬಹುದು. ನೀವು ಸುಲಭವಾಗಿ ಹುರುಳಿ ಕಾಳನ್ನು ಬಳಸಬಹುದು. ಇದನ್ನು ಕೆಲವು ಗಂಟೆಗಳ ಕಾಲ ನೀರಿನಲ್ಲಿ ನೆನೆಸಿ ನಂತರ ಸಾರು-ಉಸುಲಿ ಮಾಡಿಕೊಂಡು ತಿನ್ನಬಹುದು. ನೀವು ಹುರುಳಿ ಕಾಳು ಬೇಯಿಸಿದ ನೀರನ್ನು ಸಹ ಕುಡಿಯಬಹುದು, ಇದು ತುಂಬಾ ಪ್ರಯೋಜನಕಾರಿಯಾಗಿದೆ.

6 /6

ಮೊದಲು ಹುರುಳಿ ಕಾಳನ್ನು ನೀರಿನಲ್ಲಿ ನೆನೆಯಲು ಬಿಡಬೇಕು. ಬೆಳಗ್ಗೆ ಎದ್ದ ನಂತರ ಈ ನೀರನ್ನು ಕುಡಿಯಿರಿ. ಸ್ವಲ್ಪ ಸಮಯದ ನಂತರ ನೀವು ಪರಿಹಾರವನ್ನು ಕಾಣಲು ಪ್ರಾರಂಭಿಸುತ್ತೀರಿ.