ನವದೆಹಲಿ: ಕೊರೊನಾವೈರಸ್ನ ವಿನಾಶದ ಮಧ್ಯೆ, ಪ್ರಧಾನಮಂತ್ರಿ ನರೇಂದ್ರ ಮೋದಿ ಶುಕ್ರವಾರ ಬೆಳಿಗ್ಗೆ 9 ಗಂಟೆಗೆ ಮತ್ತೊಮ್ಮೆ ರಾಷ್ಟ್ರವನ್ನು ಉದ್ದೇಶಿಸಿ ವಿಡಿಯೋ ಸಂದೇಶವೊಂದನ್ನು ಬಿಡುಗಡೆ ಮಾಡಿದ ಪ್ರಧಾನಿ ನರೇಂದ್ರ ಮೋದಿ (Narendra Modi) ಸಾಂಕ್ರಾಮಿಕ ಕರೋನಾ ವೈರಸ್ ವಿರುದ್ಧದ ಹೋರಾಟಕ್ಕೆಂದು ಜಾರಿಗೊಳಿಸಿರುವ ಲಾಕ್ಡೌನ್(Lockdown) 9 ದಿನ ಪೂರೈಸಿದೆ. ಆದ್ದರಿಂದ ಏಪ್ರಿಲ್ 5 ರಂದು ರಾತ್ರಿ 9 ಗಂಟೆಗೆ ಮನೆಯೊಳಗೆ ಲೈಟ್ ಆಫ್ ಮಾಡಿ ಹೊರಗೆ ಬಂದು ಬಾಗಿಲಿನಲ್ಲಿ ಅಥವಾ ಬಾಲ್ಕನಿಯಲ್ಲಿ 9 ನಿಮಿಷಗಳ ಕಾಲ ಮೊಂಬತ್ತಿ, ಟಾರ್ಚ್, ದೀಪ ಹಚ್ಚಿ ಅಥವಾ ಮೊಬೈಲ್ ಫ್ಲಾಶ್ ಬೆಳಗಿಸುವ ಮೂಲಕ ಕರೋನಾ ಎಂಬ ಅಂಧಕಾರವನ್ನು ತೊಲಗಿಸುವಂತೆ ಕರೆ ನೀಡಿದರು.
'ಕರೋನಾವೈರಸ್ (Coronavirus) ವಿರುದ್ಧದ ಹೋರಾಟದಲ್ಲಿ ಯಾರೂ ಒಬ್ಬಂಟಿಯಲ್ಲ. 130 ಕೋಟಿ ದೇಶವಾಸಿಗಳ ಸಾಮೂಹಿಕ ಶಕ್ತಿ ಪ್ರತಿಯೊಬ್ಬ ವ್ಯಕ್ತಿಯ ಮೇಲೂ ಇರುತ್ತದೆ. ಈ ಸಾಮೂಹಿಕ ಶಕ್ತಿಯ ವೈಭವವನ್ನು ಅರಿತುಕೊಳ್ಳುವುದು ಅವಶ್ಯಕ. ಜನತಾ ಜನಾರ್ಧನ ದೇವರ ರೂಪ. ಈ ಕರೋನಾ ಬಿಕ್ಕಟ್ಟಿನಿಂದ ಉದ್ಭವಿಸಿರುವ ಅನಿಶ್ಚಿತತೆಯನ್ನು ನಾವು ತೆಗೆದುಹಾಕಬೇಕಾಗಿದೆ. ಅದನ್ನು ಸೋಲಿಸಲು ನಾವು ನಾಲ್ಕು ದಿಕ್ಕುಗಳಲ್ಲಿಯೂ ಬೆಳಕಿನ ತೀವ್ರತೆಯನ್ನು ಹರಡಬೇಕು. ಆದ್ದರಿಂದ ಏಪ್ರಿಲ್ 5ರ ಭಾನುವಾರದಂದು ಕರೋನಾದ ಕತ್ತಲೆಯನ್ನು ಪ್ರಶ್ನಿಸಬೇಕಾಗಿದೆ ಎಂದರು.
A video messsage to my fellow Indians. https://t.co/rcS97tTFrH
— Narendra Modi (@narendramodi) April 3, 2020
ಇದೇ ವೇಳೆ ಸಾಮೂಹಿಕ ಅಂತರವನ್ನು ಕಾಯ್ದುಕೊಳ್ಳುವಂತೆ ಮನವಿ ಮಾಡಿದ ಅವರು, ಪ್ರತಿಯೊಬ್ಬರೂ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಿ. ನಿಮ್ಮ ನಿಮ್ಮ ಮನೆಯಲ್ಲಿಯೇ ದೀಪ ಬೆಳಗಿಸಿ ಒಗ್ಗಟ್ಟಿನ ಸಂಕಲ್ಪ ಮಾಡಿ. ಯಾರೂ ಸಹ ಗುಂಪು ಗುಂಪಾಗಿ ಸೇರಬೇಡಿ. ರಸ್ತೆಯಲ್ಲಾಗಲಿ, ಬೀದಿಗಳಲ್ಲಾಗಲಿ, ಮಾಲ್ ಗಳಲ್ಲಾಗಲಿ ಒಟ್ಟಾಗಿ ಇರಬೇಡಿ. ಎಂತಹದ್ದೆ ಸಂದರ್ಭ ಬರಲಿ ಯಾರೂ ಕೂಡ ಸಾಮಾಜಿಕ ಅಂತರವನ್ನು ಕೈ ಬಿಡುವಂತಿಲ್ಲ. ಕೊರೋನಾ ವೈರಸ್ COVID-19 ವಿರುದ್ಧದ ಹೋರಾಟಕ್ಕೆ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದುದೊಂದೇ ರಾಮಬಾಣ ಎಂದು ಹೇಳಿದರು.