Sandalwood Actor Ramesh Bhat wife and Family: ಹಿರಿಯ ನಟ ರಮೇಶ್ ಭಟ್ ಕುಂದಾಪುರದ ಪುಟ್ಟ ಹಳ್ಳಿಯೊಂದರಲ್ಲಿ ಬೆಳೆದರು.. ಚಿಕ್ಕ ವಯಸ್ಸಿನಲ್ಲೇ ಅಪ್ಪನೊಂದಿಗೆ ಬೆಂಗಳೂರಿಗೆ ಬಂದು, ಪುಟ್ಟ ಅಂಗಡಿ ಇಟ್ಟು ಕೊಂಡು ಜೀವನ ಸಾಗಿಸುತ್ತಿದ್ದವರು ಇಷ್ಟು ದೊಡ್ಡ ನಟನಾಗಿದ್ದೇಗೆ? ಇವರ ಕುಟುಂಬದ ಹಿನ್ನಲೆ ಏನು? ಇದೆಲ್ಲದರ ಸಣ್ಣ ಮಾಹಿತಿ ಇಲ್ಲಿದೆ..
ಹಿರಿಯ ನಟ ರಮೇಶ್ ಭಟ್ ಕುಂದಾಪುರದ ಪುಟ್ಟ ಹಳ್ಳಿಯೊಂದರಲ್ಲಿ ಬೆಳೆದರು.. ಚಿಕ್ಕ ವಯಸ್ಸಿನಲ್ಲೇ ಅಪ್ಪನೊಂದಿಗೆ ಬೆಂಗಳೂರಿಗೆ ಬಂದು, ಪುಟ್ಟ ಅಂಗಡಿ ಇಟ್ಟು ಕೊಂಡು ಜೀವನ ಸಾಗಿಸುತ್ತಿದ್ದವರು ಇಷ್ಟು ದೊಡ್ಡ ನಟನಾಗಿದ್ದೇಗೆ? ಇವರ ಕುಟುಂಬದ ಹಿನ್ನಲೆ ಏನು? ಇದೆಲ್ಲದರ ಸಣ್ಣ ಮಾಹಿತಿ ಇಲ್ಲಿದೆ..
ಚಿಕ್ಕ ವಯಸ್ಸಿನಿಂದಲೇ ನಟನೆಯಲ್ಲಿ ಆಸಕ್ತಿ ಹೊಂದಿದ್ದ ರಮೇಶ್ ಭಟ್ ಅವರಿಗೆ ಅವರ ಶಾಲಾ ಶಿಕ್ಷಕರು ನಾಟಕ ಕಲಾಪ್ರದರ್ಶನಗಳಿಗೆ ಹೋಗಲು ಹುರಿದುಂಬಿಸುತ್ತಿದ್ದರಂತೆ.. ಆಗಲೇ ಅವರಿಗೆ ನಾನು ಒಬ್ಬ ಕಲಾವಿದನಾಗುತ್ತೇನೆ ಎನ್ನುವ ಭರವಸೆ ಬಂದಿತ್ತು..
ಹೊಟ್ಟೆ ಪಾಡಿಗಾಗಿ ಚಿಕ್ಕ ಅಂಗಡಿ ಇಟ್ಟುಕೊಂಡಿದ್ದ ರಮೇಶ್ ಭಟ್ ನಾಟಕದಲ್ಲಿ ಪಾತ್ರ ಮಾಡುವ ಅವಕಾಶ ಒಲಿದು ಬಂದಾಗ ಯಾವತ್ತು ಬಿಟ್ಟಿರಲಿಲ್ಲ.. ಜೊತೆಗೆ ಪ್ರತಿದಿನ ನಾಟಕದ ಅಭ್ಯಾಸವನ್ನು ಮಾಡುತ್ತಿದ್ದರು. ನಂತರ ರಮೇಶ್ ಭಟ್ ಅವರಿಗೆ ದೊಡ್ಡ ಗುರುತು ಸಿಕ್ಕಿದ್ದು ಶಂಕರ್ ನಾಗ್ ಅವರಿಂದ..
ಹೌದು ನಟ ಶಂಕರ್ ನಾಗ್ ಅವರು ಮನೆ ನಡೆಸಲು ಹಾಕಿಕೊಂಡಿದ್ದ ಅಂಗಡಿ ಬಿಟ್ಟು ಹೇಗೆ ಸಿನಿರಂಗಕ್ಕೆ ಕಾಲಿಡಲಿ ಎಂದು ಯೋಚಿಸುತ್ತಿದ್ದ ರಮೇಶ್ ಭಟ್ ಅವರಿಗೆ ನೀನು ಅಲ್ಲಿ ಗಳಿಸುತ್ತಿರುವ ಹಣವನ್ನು ಇಲ್ಲಿಂದಲೂ ಗಳಿಸಬಹುದು ಎಂದು ಹೇಳುತ್ತಾರೆ..
ಅವರ ಭರವಸೆ ಮೇಲೆ ಭರವಸೆಯಿಟ್ಟು ಹೊರಟ ನಟ ಮೊದಲು ನೋಡಿ ಸ್ವಾಮಿ ನಾವಿರೋದು ಹೀಗೆ ಚಿತ್ರ ನಿರ್ಮಾಣ ಮಾಡಿದರು.. ನಂತರದ ಸಿನಿಮಾದಲ್ಲಿ ಹಾಸ್ಯ ಪಾತ್ರ ಮಾಡಿ ಎಲ್ಲರ ಮನಗೆದ್ದಿದ್ದರು..
ನಟ ರಮೇಶ್ ಭಟ್ ಬ್ಯ್ರಾಂಡ್ ಡಿಸೈನ್ ಮುದ್ರಣವನ್ನು ಹಾಕಿಕೊಂಡಿದ್ದಾರೆ.. ಸದ್ಯ ಅದನ್ನು ಅವರ ಮಗ ನಡೆಸಿಕೊಂಡು ಹೋಗುತ್ತಿದ್ದಾರೆ.. ಬದುಕಿನಲ್ಲಿ ಸಾಕಷ್ಟು ಏರಿಳತಗಳನ್ನು ಕಂಡ ನಟ ರಮೇಶ್ ಸದ್ಯ ಕನ್ನಡ ಸಿನಿರಂಗದ ಮೈಲಿಗಲ್ಲಾಗಿದ್ದಾರೆ..
ಸದ್ಯ ನಟ ರಮೇಶ್ ಭಟ್ ಸಿನಿರಂಗದಿಂದ ಕೊಂಚ ದೂರ ಉಳಿದಿದ್ದಾರೆ.. ರಮೇಶ್ ಭಟ್ ನಟನೆಗೆ ಮಾರು ಹೋಗದವರೇ ಇಲ್ಲ.. ಹೀಗೆ ತಮ್ಮ ಅದ್ಭುತ ನಟನೆ.. ಹಾಗೂ ಸಂಭಾಷನೆ ಶೈಲಿಯಿಂದ ಅಪಾರ ಅಭಿಮಾನಿಗಳನ್ನು ಸಂಪಾದಿಸಿದ್ದಾರೆ..
ರಮೇಶ್ ಭಟ್ ಅವರ ಹೆಸರು ಕೇಳಿದರೇ ಸಾಕು ಕೆಲವು ಸಿನಿಮಾಗಳು ಕಣ್ಣಮುಂದೆಯೇ ಓಡಾಡುತ್ತವೆ.. ದೊಡ್ಡ ದೊಡ್ಡ ಸ್ಟಾರ್ ನಟರೊಂದಿಗೆ ತೆರೆ ಹಂಚಿಕೊಂಡ ಕೀರ್ತಿ ಅವರದ್ದು..