ಹನಿಟ್ರ್ಯಾಪ್ ಗ್ಯಾಂಗ್ ಬಂಧಿಸಿದ ಸಿಸಿಬಿ ಪೊಲೀಸರು..

ವ್ಯಾಪಾರಿ ನೀಡಿದ ದೂರಿನ ಹಿನ್ನೆಲೆಯಲ್ಲಿ ಸಿಸಿಬಿ ಪೊಲೀಸರು ಕಾರ್ಯಾಚರಣೆ ನಡೆಸಿ ಹನಿಟ್ರ್ಯಾಪ್ ಮಾಡಿದ್ದ ಐವರನ್ನು ಬಂಧಿಸಿದ್ದಾರೆ.

Written by - Yashaswini V | Last Updated : Oct 9, 2024, 11:06 AM IST
  • ಹುಬ್ಬಳ್ಳಿಯ ಹೆಸರಾಂತ ವ್ಯಾಪಾರಿಗೆ ಬ್ಲಾಕ್ ಮೇಲ್
  • ಸಿಸಿಬಿ ಪೊಲೀಸರಿಂದ ಹನಿಟ್ರ್ಯಾಪ್ ಗ್ಯಾಂಗ್ ಬಂಧನ
  • ಹನಿಟ್ರ್ಯಾಪ್ ಮಾಡಿದ್ದ ಐವರು ನ್ಯಾಯಾಂಗ ಬಂಧನಕ್ಕೆ
ಹನಿಟ್ರ್ಯಾಪ್  ಗ್ಯಾಂಗ್ ಬಂಧಿಸಿದ ಸಿಸಿಬಿ ಪೊಲೀಸರು.. title=

ಹುಬ್ಬಳ್ಳಿ: ನಗರದಲ್ಲಿ ಹನಿಟ್ರ್ಯಾಪ್ ಮಾಡುತ್ತಿದ್ದ ಗ್ಯಾಂಗ್ ಬಂಧಿಸುವಲ್ಲಿ ಸಿಸಿಬಿ ಪೊಲೀಸರು ಯಶಸ್ವಿಯಾಗಿದ್ದಾರೆ. ಹುಬ್ಬಳ್ಳಿಯ  ಹೆಸರಾಂತ ಬಾಂಡೆ ಅಂಗಡಿ ವ್ಯಾಪಾರಿ ಆಗಿದ್ದ ಚಗನ್ ಲಾಲ್ ಚೌಧರಿಯ ಕೆಲವು ವಿಡಿಯೋಗಳನ್ನು ಮಾಡಿಕೊಂಡು ನಂತರ ಬ್ಲಾಕ್ ಮೇಲ್ ಮಾಡುತ್ತಿದ್ದರು. ಎರಡು ಮೂರು ವಿಡಿಯೋ ತುಣುಕುಗಳನ್ನು ರೆಕಾರ್ಡ್ ಮಾಡಿಕೊಂಡು ಸುಮಾರು ಐದು ಲಕ್ಷ ಹಣಕ್ಕೆ ಬೇಡಿಕೆ ಇಟ್ಟಿದ್ದ, ಇದರಿಂದ ಮನನೊಂದ ಚಗನ್ ಲಾಲ್ ಚೌಧರಿ  ಅಶೋಕ ನಗರ ಪೊಲೀಸ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ಚಗನ್ ಲಾಲ್ ನೀಡಿದ ದೂರಿನ ಹಿನ್ನೆಲೆಯಲ್ಲಿ ಸಿಸಿಬಿ ಪೊಲೀಸರು ಕಾರ್ಯಾಚರಣೆ ನಡೆಸಿ ಹನಿಟ್ರ್ಯಾಪ್ ಮಾಡಿದ್ದ ಐವರನ್ನು ಬಂಧಿಸಿದ್ದಾರೆ. ಮುಲ್ಲಾ ಓಣಿ ನಿವಾಸಿ ಜೋಯಾ ಶಬಾನಾ, ತೊರವಿ ಹಕ್ಕಲದ ಪರವಿನ್ ಭಾನು. ಡಾಕಪ್ಪ ಸರ್ಕಲ್ ನಿವಾಸಿ  ಸಯೀದ್  ಹಾಗೂ ಹಳೆ ಹುಬ್ಬಳ್ಳಿಯ ನಿವಾಸಿಗಳಾದ ತೌಸಿಪ್  ಮತ್ತು ಅಬ್ದುಲ್ ರೆಹಮಾನ್ ಎಂಬುವರನ್ನು ಬಂಧಿಸಿದ್ದಾರೆ.

ಇದನ್ನೂ ಓದಿ- ಯುವತಿಯರೇ ಸ್ನೇಹಿತರೊಟ್ಟಿಗೆ ನಿಮ್ಮ ಸಿಕ್ರೇಟ್ ಹಂಚಿಕೊಳ್ಳುವ ಮುನ್ನ ಎಚ್ಚರ: ನಿಮಗೂ‌ ಈ ರೀತಿ ಆಗಬಹುದು..!?

ಸಯೀದ್, ತೌಸಿಪ್, ಅಬ್ದುಲ್ ರೆಹಮಾನ್  ಅಂಗಡಿ ಹೊರಗೆ ಹಾಕಿರುವ ನಂಬರಗಳನ್ನು ಕಲೆಕ್ಟ ಮಾಡಿ  ಜೋಯಾ ಹಾಗು ಪರವಿನ್ ಗೆ ನೀಡುತ್ತಿದ್ದರು.  ಇವರಿಬ್ಬರು ಅವರ ನಂಬರ್ ಗೆ ಮೆಸೇಜ್, ಕಾಲ್ ಮಾಡಿ ಸಲಿಗೆಯಿಂದ ಬಲೆಗೆ ಹಾಕಿಕೊಂಡು ಅವರ ಜೊತೆ ಇರುವ ವಿಡಿಯೋಗಳನ್ನು ಮಾಡಿಕೊಂಡು ಬ್ಲಾಕ್‌ ಮೇಲ್ ಮಾಡುತ್ತಿದ್ದರು ಎಂದು ತಿಳಿದುಬಂದಿದೆ. 

ಇದನ್ನೂ ಓದಿ- ಪೊಲೀಸರಿಂದಲೇ ಹಣ ವಸೂಲಿ ಮಾಡುತ್ತಿದ್ದ ಚಾಲಾಕಿ ಅಂದರ್

ಹನಿಟ್ರ್ಯಾಪ್ ಕಿರುಕುಳದಿಂದ ಚಗನ್ ಲಾಲ್  ಅಶೋಕ ನಗರ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಸಿಸಿಬಿ ಪೊಲೀಸರು ಹನಿಟ್ರ್ಯಾಪ್ ಮಾಡಿದ್ದ ಐವರನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News