Viral video: ಬೆಂಗಳೂರಿನಲ್ಲಿದ್ದಾರಾ ಶತಾಯುಷಿ ರಾಮನ ಭಕ್ತ! ಇವರ ನಿಜವಾದ ವಯಸ್ಸು ಕೇಳಿ ಶಾಕ್ ಆಗ್ಬೇಡಿ..!

Viral video: ಸಾಮಾನ್ಯವಾಗಿ ಒಬ್ಬ ನರ ಮನುಷ್ಟಯ ಎಂದರೆ, 100ರಿಂದ 110 ವರ್ಷಗಳ ಕಾಲ ಬದುಕೋದುಂಟು, ಆದರೆ ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ವಯಸ್ಸಾದ ವ್ಯಕ್ತಿಯ ವಿಡಿಯೋ ಒಂದು ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಈ ವಿಡಿಯೋದ ಪ್ರಕಾರ ಈ ವ್ಯಕ್ತಿಯ ವಯಸ್ಸು ಶತಕಕ್ಕೂ ಹೆಚ್ಚು ದಾಟಿದ್ದು ಈ ವ್ಯಕ್ತಿ ರಾಮನ ಭಕ್ತ ಎಂಬ ಸುದ್ದಿ ಎಲ್ಲೆಡೆ ಹರಿದಾಡುತ್ತಿದೆ.   

Written by - Zee Kannada News Desk | Last Updated : Oct 7, 2024, 10:37 AM IST
  • ಈ ವ್ಯಕ್ತಿಯ ವಯಸ್ಸು ಶತಕಕ್ಕೂ ಹೆಚ್ಚು ದಾಟಿದ್ದು ಈ ವ್ಯಕ್ತಿ ರಾಮನ ಭಕ್ತ ಎಂಬ ಸುದ್ದಿ ಎಲ್ಲೆಡೆ ಹರಿದಾಡುತ್ತಿದೆ.
  • ಒಬ್ಬ ಸಂತನೊಂದಿಗೆ ಸೇರಿಕೊಂಡು ಈತ ಮನೆಯನ್ನು ಕುಟುಂಬ ಎಲ್ಲವನ್ನೂ ತ್ಯಜಿಸಿ ಹಿಮಾಲಯಕ್ಕೆ ತಪಸ್ಸು ಮಾಡಲು ಹೊರಟರು
  • ಬೆಂಗಳೂರಿನ ಸಮೀಪವಿರುವ ಗುಹೆ ಒಂದರಿಂದ ಈ ವ್ಯಕ್ತಿಯನ್ನು ಉಳಿಸಲಾಗಿದೆ ಎಂಬ ಮಾಹಿತಿ ಸಿಕ್ಕಿದೆ.
Viral video: ಬೆಂಗಳೂರಿನಲ್ಲಿದ್ದಾರಾ ಶತಾಯುಷಿ  ರಾಮನ ಭಕ್ತ! ಇವರ ನಿಜವಾದ ವಯಸ್ಸು ಕೇಳಿ ಶಾಕ್ ಆಗ್ಬೇಡಿ..! title=

Viral video: ಸಾಮಾನ್ಯವಾಗಿ ಒಬ್ಬ ನರ ಮನುಷ್ಟಯ ಎಂದರೆ, 100ರಿಂದ 110 ವರ್ಷಗಳ ಕಾಲ ಬದುಕೋದುಂಟು, ಆದರೆ ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ವಯಸ್ಸಾದ ವ್ಯಕ್ತಿಯ ವಿಡಿಯೋ ಒಂದು ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಈ ವಿಡಿಯೋದ ಪ್ರಕಾರ ಈ ವ್ಯಕ್ತಿಯ ವಯಸ್ಸು ಶತಕಕ್ಕೂ ಹೆಚ್ಚು ದಾಟಿದ್ದು ಈ ವ್ಯಕ್ತಿ ರಾಮನ ಭಕ್ತ ಎಂಬ ಸುದ್ದಿ ಎಲ್ಲೆಡೆ ಹರಿದಾಡುತ್ತಿದೆ. 

ಮಹಾರಾಷ್ಟ್ರದ ಮುಂಬೈನಲ್ಲಿ ಈ ವ್ಯಕ್ತಿ ಜನಸಿದ್ದಾರೆ ಎಂದು ವರದಿಯಾಗಿದ್ದು, ಏಳನೇ ತರಗತಿಯ ವರೆಗೂ ಓದಿದ್ದಾರೆ ಎಂದು ಹೇಳಲಾಗುತ್ತಿದೆ. ಅಷ್ಟಕ್ಕೂ ಈತ ಈ ರೀತಿ ಆಗಲೂ ಕಾರಣ ಇದೆ. ಒಬ್ಬ ಸಂತನೊಂದಿಗೆ ಸೇರಿಕೊಂಡು ಈತ ಮನೆಯನ್ನು ಕುಟುಂಬ ಎಲ್ಲವನ್ನೂ ತ್ಯಜಿಸಿ ಹಿಮಾಲಯಕ್ಕೆ ತಪಸ್ಸು ಮಾಡಲು ಹೊರಟರು ಎಂಬ ವರದಿಗಳಿವೆ. 

ವರದಿಗಳನ್ನು ನಂಬುವುದಾದರೆ ಈತ ದಿನಕ್ಕೆ 21 ಗಂಟೆಗಲ ಕಾಲ ಧರ್ಮಗ್ರಂತಗಳನ್ನು ಓದುತ್ತಾರಂತೆ. ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿರುವ ವಿಡಿಯೋದಲ್ಲಿ, ಬೆಂಗಳೂರಿನ ಸಮೀಪವಿರುವ ಗುಹೆ ಒಂದರಿಂದ ಈ ವ್ಯಕ್ತಿಯನ್ನು ಉಳಿಸಲಾಗಿದೆ ಎಂಬ ಮಾಹಿತಿ ಸಿಕ್ಕಿದೆ. 

ವೈರಲ್‌ ಆಗುತ್ತಿರುವ ಈ ವಿಡಿಯೋದಲ್ಲಿ ಇಬ್ಬರು ವ್ಯಕ್ತಿಗಳು ಗುಹೆಯಿಂದ ವಯಸ್ಸಾದ ವ್ಯಕ್ತಿ ಒಬ್ಬರನ್ನು ಕರೆದುಕೊಂಡು ಹೆರಬರುತ್ತಿರುವುದು ಕಂಡು ಬರುತ್ತದೆ. ವಯಸ್ಸಾದ ಈತ ಬಟ್ಟೆ ಏನೂ ಇಲ್ಲದೆ, ಪೂರ್ತಿ ಹಣ್ಣು ಮುದುಕನಾಗಿ ಹೋಗಿದ್ದಾರೆ, ಬಿಳಿ ಗಡ್ಡ ಬೆಳಸಿಕೊಂಡು ಕೇವಲ ಲಂಗೋಟಿ ಧರಿಸಿರುವುದು ದೃಶ್ಯದಲ್ಲಿ ಕಂಡು ಬರುತ್ತದೆ. ಕಾಲಿಗೆ ಕೇಸರಿ ಬಣ್ಣ ಧರಸಿರುವ ಈತ ರಾಮ ಭಕ್ತ ಎಂದು ವಿಡಿಯೋದ ಶೀರ್ಷಿಕೆಯಲ್ಲಿ ಬರೆಯಲಾಗಿದೆ. 

 

 

ಅಷ್ಟಕ್ಕೂ ವೈರಲ್‌ ಆಗುತ್ತಿರುವ ವಿಡಿಯೋದಲ್ಲಿ ಇರುವಂತೆ ಈ ವ್ಯಕ್ತಿಗೆ 188 ವರ್ಷ ಆಗಿಲ್ಲ. ಈ ವ್ಯಕ್ತಿ ಮೂಲತಃ ಮಧ್ಯಪ್ರದೇಶದವರು, ಈತನ ಹೆಸರು ಸಿಯಾರಾಮ್‌ ಬಾಬಾ. ವಾಸ್ತವವಾಗಿ ಈ ವ್ಯಕ್ತಿಗೆ ಕೃವಲ 109 ವರ್ಷ ವಯಸ್ಸಾಗಿರುವ ಈತ ಒಂದೆ ಕಾಲಿನಲ್ಲಿ ಒಂಬತ್ತು ವರ್ಷಗಳ ಕಾಲ ನಿಂತು ತಪಸ್ಸು ಮಾಡಿದ್ದರಂತೆ. 

ಈತ ತಮ್ಮ ಜೀವನವನ್ನು ರಾಮಾಯಣ ಓದಿಕೊಂಡು ಕಳೆಯುತ್ತಿದ್ದು, ದಿನಕ್ಕೆ 21 ಗಂಟೆಗಳ ಕಾಲ ರಾಮಾಯಣ ಓದಿಕೊಂಡೆ ಕಳೆಯುತ್ತಾರಂತೆ. ಅಷ್ಟೆ ಅಲ್ಲ, ಈ ವಯಸ್ಸಿನಲ್ಲಿಯೂ ಕನ್ನಡಕದ ಸಹಾಯ ವಿಲ್ಲದೆ ರಾಮಾಯಣವನ್ನು ಓದುವ ಈತ, ಪರಮ ರಾಮ ಭಕ್ತ ಎಂದು ಹೇಳಲಾಗುತ್ತಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Trending News