69 ನೇ ವಯಸ್ಸಿನಲ್ಲಿ ʼಈʼ ಖ್ಯಾತ ವ್ಯಕ್ತಿಯೊಂದಿಗೆ ಲಿವ್ ಇನ್ ರಿಲೇಶನ್ ಶಿಪ್​ನಲ್ಲಿದ್ದಾರಾ ನಟಿ ರೇಖಾ!? ಇಂಡಸ್ಟ್ರೀಯನ್ನೇ ನಡಗಿಸುತ್ತಿದೆ ಆ ಹೆಸರು!!

Actress Rekha Live in Relationship: ದಶಕಗಳಿಂದ ಚಿತ್ರರಂಗದಲ್ಲಿ ತನ್ನ ಸೌಂದರ್ಯವನ್ನು ಪಸರಿಸಿದ ರೇಖಾಗೆ ಯಾವುದೇ ಗುರುತು ಬೇಕಿಲ್ಲ. ವರದಿಗಳ ಪ್ರಕಾರ, ರೇಖಾ ಇತ್ತೀಚಿನ ದಿನಗಳಲ್ಲಿ ಖ್ಯಾತ ವ್ಯಕ್ತಿಯೊಂದಿಗೆ ಲಿವ್-ಇನ್ ರಿಲೇಶನ್ ಶಿಪ್​ನಲ್ಲಿದ್ದಾರೆ ಎನ್ನುವ ಸುದ್ದಿಯೊಂದು ಹರಿದಾಡುತ್ತಿದೆ.. ಹಾಗಾದ್ರೆ ಇದೀಗ ಇದರ ಹಿಂದಿನ ಸತ್ಯ ಏನೆಂಬುದನ್ನು ತಿಳಿಯೋಣ.
 

1 /8

ದಶಕಗಳಿಂದ ಚಿತ್ರರಂಗದಲ್ಲಿ ತನ್ನ ಸೌಂದರ್ಯವನ್ನು ಪಸರಿಸಿದ ರೇಖಾಗೆ ಯಾವುದೇ ಗುರುತು ಬೇಕಿಲ್ಲ. ರೇಖಾ ಅವರು 10 ಅಕ್ಟೋಬರ್ 1954 ರಂದು ಜನಿಸಿದರು. ರೇಖಾ ಅವರ ನಿಜವಾದ ಹೆಸರು ಭಾನುರೇಖಾ ಗಣೇಶನ್, ಆದರೆ ಅವರು ರೇಖಾ ಎಂಬ ಹೆಸರಿನಿಂದ ಮಾತ್ರ ತಮ್ಮ ನಿಜವಾದ ಗುರುತನ್ನು ಪಡೆದರು.   

2 /8

ರೇಖಾ ಅವರು ಕೇವಲ 4 ವರ್ಷ ವಯಸ್ಸಿನಲ್ಲೇ ಬಾಲನಟಿಯಾಗಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು... ನಟಿ ನೃತ್ಯ ಮತ್ತು ಕ್ರೀಡೆಗಳನ್ನು ಪ್ರೀತಿಸುತ್ತಿದ್ದರು. ಅವರು ಗಗನಸಖಿಯಾಗಲು ಬಯಸಿದ್ದರು, ಆದರೆ ಅವರ ತಾಯಿಯ ಸಲಹೆಯಿಂದಾಗಿ ಅವರು 14 ನೇ ವಯಸ್ಸಿನಲ್ಲಿ ನಾಯಕ ನಟಿಯಾಗಿ ತಮ್ಮ ವೃತ್ತಿಜೀವನವನ್ನು ಆರಂಭ ಮಾಡಲು ನಿರ್ಧರಿಸಿದರು. ಈ ಅವಧಿಯಲ್ಲಿ ರೇಖಾ ಸಾಕಷ್ಟು ಕಷ್ಟಪಡಬೇಕಾಯಿತು.  

3 /8

ರೇಖಾ ಅವರ ಸಿನಿಮಾ ಪಯಣದ ಆರಂಭ ಚೆನ್ನಾಗಿರಲಿಲ್ಲ. ಸೌತ್ ಇಂಡಸ್ಟ್ರಿಯಲ್ಲಿ ಕೆಲಸ ಪಡೆಯಲು ಅವರು ಕಷ್ಟಪಡಬೇಕಾಯಿತು. ಆದರೆ, ಈ ಸಮಯದಲ್ಲಿ ಚಿತ್ರ ನಿರ್ದೇಶಕ ಮತ್ತು ನಿರ್ಮಾಪಕ ಕುಲ್ಜೀತ್ ಪಾಲ್ ರೇಖಾ ಅವರನ್ನು ಗಮನಿಸಿದರು. ಅವರಿಗೆ ರೇಖಾಳ ಲಕ್ಷಣಗಳು ತುಂಬಾ ಇಷ್ಟವಾಗಿದ್ದವು.    

4 /8

ಆರಂಭದಲ್ಲಿ ರೇಖಾ ಅವರ ಹೆಸರು ಕಿರಣ್ ಕುಮಾರ್ ಮತ್ತು ವಿನೋದ್ ಮೆಹ್ರಾ ಅವರೊಂದಿಗೆ ಸಂಬಂಧ ಹೊಂದಿತ್ತು, ಆದರೆ ಅವರ ಮತ್ತು ಅಮಿತಾಬ್ ಬಚ್ಚನ್ ನಡುವಿನ ಸಂಬಂಧವು  ಸಾಕಷ್ಟು ಸುದ್ದಿ ಮಾಡಿತ್ತು.. ಇವರಿಬ್ಬರೂ 'ದೋ ಅಂಜಾನೆ' ಚಿತ್ರದ ಸೆಟ್‌ನಲ್ಲಿ ಭೇಟಿಯಾದರು ಇದರ ಬಳಿಕವೇ ಇಬ್ಬರೂ ಪ್ರೀತಿಸುತ್ತಿದ್ದರು.   

5 /8

ಆದರೆ, ಈ ಸಮಯದಲ್ಲಿ ಅಮಿತಾಭ್ ಮದುವೆಯಾಗಿದ್ದರು. ಈ ವಿಷಯ ತಿಳಿದ ಜಯಾ, ಅಮಿತಾಬ್ ಬಚ್ಚನ್ ಮನೆಯಲ್ಲಿ ಇಲ್ಲದಿದ್ದಾಗ ರೇಖಾಳನ್ನು ಊಟಕ್ಕೆ ಕರೆದು ಅಮಿತ್‌ ಅವರನ್ನು ಬಿಟ್ಟು ಹೋಗು ಎಂದು ಹೇಳಿದ್ದರು.. ಜಯ ಅವರಿಂದ ಈ ಮಾತನ್ನು ಕೇಳಿದ ರೇಖಾ ತಾನು ಮತ್ತು ಅಮಿತಾಭ್ ಎಂದಿಗೂ ಒಂದಾಗಲು ಸಾಧ್ಯವಿಲ್ಲ ಎಂದು ಅರ್ಥಮಾಡಿಕೊಂಡು ಬಿಗ್ ಬಿಯಿಂದ ದೂರವಾದರು.  

6 /8

ಇದಾದ ನಂತರ ರೇಖಾ ದೆಹಲಿ ಮೂಲದ ಉದ್ಯಮಿ ಮುಖೇಶ್ ಅಗರ್ವಾಲ್ ಅವರನ್ನು 1990 ರಲ್ಲಿ ವಿವಾಹವಾದರು. ಆದರೆ ಮದುವೆಯಾದ 3 ತಿಂಗಳ ನಂತರ ಮುಖೇಶ್ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.   

7 /8

ರೇಖಾ ಅವರ ಜೀವನಚರಿತ್ರೆ ರೇಖಾ ದಿ ಅನ್‌ಟೋಲ್ಡ್ ಸ್ಟೋರಿ, ಇದನ್ನು ಯಾಸಿರ್ ಉಸ್ಮಾನ್ ಬರೆದಿದ್ದಾರೆ. ಮುಕೇಶ್ ಸಾವಿನ ನಂತರ ರೇಖಾ ತನ್ನ ಕಾರ್ಯದರ್ಶಿ ಫರ್ಜಾನಾ ಜೊತೆ ಲಿವ್ ಇನ್ ರಿಲೇಶನ್ ಶಿಪ್ ನಲ್ಲಿದ್ದಾರೆ ಎಂದು ಹೇಳಲಾಗಿದೆ.   

8 /8

ರೇಖಾ ಮಲಗುವ ಕೋಣೆಗೆ ಹೋಗಲು ಅನುಮತಿ ಪಡೆದ ಏಕೈಕ ವ್ಯಕ್ತಿ ಫರ್ಜಾನಾ ಎಂದು ಯಾಸಿರ್ ಪುಸ್ತಕದ ಮೂಲಕ ಹೇಳಿದ್ದಾರೆ. ರೇಖಾ ಅವರ ಮನೆಯ ಸಹಾಯಕರಿಗೂ ಅವರ ಮಲಗುವ ಕೋಣೆಗೆ ಪ್ರವೇಶಿಸಲು ಅವಕಾಶವಿಲ್ಲ. ಫರ್ಜಾನಾ ರೇಖಾಳ ಎಲ್ಲಾ ವಿಷಯಗಳನ್ನು ನೋಡಿಕೊಳ್ಳುತ್ತಾಳೆ.. ಅವಳೊಂದಿಗೆ ನೆರಳಿನಂತೆ ಇರುತ್ತಾಳೆ. ಆದರೆ, ಈ ಸುದ್ದಿಗಳ ಬಗ್ಗೆ ರೇಖಾ ಮೌನ ಮುರಿದಿಲ್ಲ.