/kannada/photo-gallery/this-south-star-has-helped-more-than-500-families-these-are-the-netizens-who-are-the-real-heroes-221337 500ಕ್ಕೂ ಹೆಚ್ಚು ಕುಟುಂಬಗಳಿಗೆ ನೆರವಾಗಿದ್ದಾರೆ ಈ ಸೌತ್ ಸ್ಟಾರ್!!  ರಿಯಲ್ ಹೀರೋ ಇವರೇ ಎಂದ ನೆಟ್ಟಿಗರು 500ಕ್ಕೂ ಹೆಚ್ಚು ಕುಟುಂಬಗಳಿಗೆ ನೆರವಾಗಿದ್ದಾರೆ ಈ ಸೌತ್ ಸ್ಟಾರ್!! ರಿಯಲ್ ಹೀರೋ ಇವರೇ ಎಂದ ನೆಟ್ಟಿಗರು 221337

ನವದೆಹಲಿ: ಆಧಾರ್ ಬಗ್ಗೆ ನಿಮಗೆ ಏನಾದರೂ ಪ್ರಶ್ನೆ ಇದ್ದರೆ, ಇದಕ್ಕಾಗಿ ಯುಐಡಿಎಐ (UIDAI) ಕೈಪಿಡಿಯನ್ನು ಬಿಡುಗಡೆ ಮಾಡಿದೆ. ಯುಐಡಿಎಐ ಟ್ವೀಟ್ ಮಾಡುವ ಮೂಲಕ ಈ ಬಗ್ಗೆ ಮಾಹಿತಿ ನೀಡಿದೆ. ಈ ಕೈಪಿಡಿಯನ್ನು ಯುಐಡಿಎಐ ವೆಬ್‌ಸೈಟ್‌ನಿಂದ ಡೌನ್‌ಲೋಡ್ ಮಾಡಬಹುದು. ಈ ಕೈಪಿಡಿಯಲ್ಲಿ, ಆಧಾರ್ ಹೆಸರನ್ನು ಬದಲಾಯಿಸುವುದರಿಂದ ಹಿಡಿದು ಯಾವುದೇ ರೀತಿಯ ತಿದ್ದುಪಡಿಗಳನ್ನು ಸರಿಪಡಿಸುವ ಸಂಪೂರ್ಣ ಪ್ರಕ್ರಿಯೆಯನ್ನು ನೀಡಲಾಗಿದೆ.

* ಉಚಿತವಾಗಿ ಡೌನ್‌ಲೋಡ್ ಮಾಡಿ:
ಆಧಾರ್ ಹ್ಯಾಂಡ್‌ಬುಕ್‌ನ ಪಿಡಿಎಫ್ ಫೈಲ್ ಅನ್ನು ಉಚಿತವಾಗಿ ಡೌನ್‌ಲೋಡ್ ಮಾಡಬಹುದು. ಈ ಪಿಡಿಎಫ್ ಅನ್ನು ಅಧಿಕೃತ ವೆಬ್‌ಸೈಟ್ uidai.gov.in/images/AadhaarHandbook2020.pdf ನಲ್ಲಿ ನೀಡಲಾಗಿದೆ. ಆದಾಗ್ಯೂ, ಆಧಾರ್ ಸಂಬಂಧಿತ ಪ್ರಶ್ನೆಗಳಿಗೆ ಉತ್ತರಗಳನ್ನು ಯುಐಡಿಎಐನ ಎಫ್ಎಕ್ಯೂ (FAQ) ಅಂಕಣದಲ್ಲಿ ನೀಡಲಾಗಿದೆ. ಯುಐಡಿಎಐ ಈ ಎಲ್ಲಾ ಮಾಹಿತಿಯನ್ನು ತನ್ನ ಮೊಬೈಲ್ ಅಪ್ಲಿಕೇಶನ್‌ನಲ್ಲಿ ಲಭ್ಯಗೊಳಿಸಿದೆ.

* ಆಧಾರ್ ಕಾರ್ಡ್ ವ್ಯವಸ್ಥೆ: 
ಭಾರತದ ಆಧಾರ್ ಕಾರ್ಡ್ ವ್ಯವಸ್ಥೆಯನ್ನು ಕಠಿಣ ಎಂದು ಇತರ ದೇಶಗಳಲ್ಲಿಯೂ ಪರಿಗಣಿಸಲಾಗುತ್ತಿದೆ. ಅಫ್ಘಾನಿಸ್ತಾನವು ತನ್ನ ನಾಗರಿಕರ ಆಧಾರ್ ಕಾರ್ಡ್ ಅನ್ನು ಭಾರತದ ಮಾದರಿಯಲ್ಲಿ ಮಾಡಲು ಪ್ರಯತ್ನಿಸುತ್ತಿದೆ. ಇದು ಒಂದು ದಶಕದ ಹಿಂದೆ ಭಾರತ ತನ್ನ ನಿವಾಸಿಗಳ ಬಯೋಮೆಟ್ರಿಕ್ ಮತ್ತು ಜನಸಂಖ್ಯಾ ಡೇಟಾಬೇಸ್ ಅನ್ನು ಆಧಾರ್ ಕಾರ್ಡ್ ಮೂಲಕ ಅಭಿವೃದ್ಧಿಪಡಿಸಿದಂತೆಯೇ, ಅಫ್ಘಾನಿಸ್ತಾನವೂ ಈ ಪ್ರಕ್ರಿಯೆಯನ್ನು ಅಳವಡಿಸಿಕೊಳ್ಳುತ್ತಿದೆ.

* ಅಫ್ಘಾನಿಸ್ತಾನಕ್ಕೆ ಸಹಾಯ: 
ಅಫ್ಘಾನಿಸ್ತಾನ ಕೇಂದ್ರ ನಾಗರಿಕ ನೋಂದಣಿ ಪ್ರಾಧಿಕಾರ (ACCRA)ಗಾಗಿ ಕಳೆದ ವಾರ ಭಾರತದ ರಿಜಿಸ್ಟ್ರಾರ್ ಜನರಲ್ ಮತ್ತು ಸೆನ್ಸಸ್ ಕಮಿಷನರ್ ಮತ್ತು ಭಾರತದ ವಿಶಿಷ್ಟ ಗುರುತಿನ ಪ್ರಾಧಿಕಾರ (ಯುಐಡಿಎಐ) ವಿಶೇಷ ಸಾಮರ್ಥ್ಯ ವೃದ್ಧಿಸುವ ಕಾರ್ಯಕ್ರಮವನ್ನು ಆಯೋಜಿಸಿತ್ತು.

* 1.25 ಶತಕೋಟಿಗಿಂತ ಹೆಚ್ಚು ಆಧಾರ್ ಕಾರ್ಡ್‌ಗಳು:
ಯುಐಡಿಎಐ ಪ್ರಕಾರ, ಭಾರತದಲ್ಲಿ ಈವರೆಗೆ 1.25 ಶತಕೋಟಿಗೂ ಹೆಚ್ಚು ಆಧಾರ್ ಕಾರ್ಡ್‌ಗಳನ್ನು ನೀಡಲಾಗಿದೆ. ಕಳೆದ ಕೆಲವು ವರ್ಷಗಳಲ್ಲಿ, ಭಾರತದಲ್ಲಿ ಅನೇಕ ಉದ್ದೇಶಗಳಿಗಾಗಿ ಆಧಾರ್ ಕಾರ್ಡ್ ಪ್ರಾಥಮಿಕ ಗುರುತಿನ ದಾಖಲೆಯಾಗಿ ಹೊರಹೊಮ್ಮಿದೆ. ಆಧಾರ್ ಆಧಾರಿತ ದೃಡೀಕರಣ ಸೇವೆಗಳನ್ನು ಸುಮಾರು 37,000 ಕೋಟಿ ಬಾರಿ ಬಳಸಲಾಗಿದೆ.

* 3 ಕೋಟಿ ವಿನಂತಿ:
ಯುಐಡಿಎಐ ದಾಖಲೆಗಳ ಪ್ರಕಾರ, ಪ್ರತಿದಿನ ಸರಾಸರಿ ಮೂರು ಕೋಟಿ ದೃಡೀಕರಣ ವಿನಂತಿಗಳನ್ನು ಸ್ವೀಕರಿಸಲಾಗುತ್ತದೆ.

* 331 ಕೋಟಿ ಯಶಸ್ವಿ ಆಧಾರ್ ನವೀಕರಣಗಳು:
ಜನರು ತಮ್ಮ ಆಧಾರ್ ವಿವರಗಳನ್ನು ನವೀಕರಿಸುತ್ತಿರುವುದು ಸಹ ಕಂಡುಬರುತ್ತದೆ. ಯುಐಡಿಎಐ ಇದುವರೆಗೆ ಸುಮಾರು 331 ಕೋಟಿ ಯಶಸ್ವಿ ಆಧಾರ್ ನವೀಕರಣಗಳನ್ನು (ಬಯೋಮೆಟ್ರಿಕ್ ಮತ್ತು ಜನಸಂಖ್ಯಾ) ದಾಖಲಿಸಿದೆ ಎಂದು ಸರ್ಕಾರ ಹೇಳಿದೆ. ಪ್ರಸ್ತುತ ಯುಐಡಿಎಐ ಪ್ರತಿದಿನ ಸುಮಾರು 3 ರಿಂದ 4 ಲಕ್ಷ ಆಧಾರ್ ನವೀಕರಣಗಳಿಗಾಗಿ ವಿನಂತಿಯನ್ನು ಸ್ವೀಕರಿಸುತ್ತದೆ.

Section: 
English Title: 
Every question related to Aadhaar will be answered here, know what changes UIDAI made
News Source: 
Home Title: 

ಆಧಾರ್‌ಗೆ ಸಂಬಂಧಿಸಿದ ಪ್ರತಿಯೊಂದು ಪ್ರಶ್ನೆಗೆ ಇಲ್ಲಿ ಸಿಗಲಿದೆ ಉತ್ತರ

ಆಧಾರ್‌ಗೆ ಸಂಬಂಧಿಸಿದ ಪ್ರತಿಯೊಂದು ಪ್ರಶ್ನೆಗೆ ಇಲ್ಲಿ ಸಿಗಲಿದೆ ಉತ್ತರ
Author No use : 
Yashaswini V
Yes
Is Blog?: 
No
Tags: 
Facebook Instant Article: 
Yes
Mobile Title: 
ಆಧಾರ್‌ಗೆ ಸಂಬಂಧಿಸಿದ ಪ್ರತಿಯೊಂದು ಪ್ರಶ್ನೆಗೆ ಇಲ್ಲಿ ಸಿಗಲಿದೆ ಉತ್ತರ
Yashaswini V
Publish Later: 
No
Publish At: 
Saturday, March 21, 2020 - 11:28
Created By: 
Yashaswini V
Updated By: 
Yashaswini V
Published By: 
Yashaswini V