ಬಿಗ್‌ಬಾಸ್‌ ಮನೆಯಲ್ಲಿ ಶುರುವಾಯ್ತು ಮೊತ್ತೊಂದು ಪ್ರೇಮ ಪುರಾಣ! ಸ್ವರ್ಗಕ್ಕೂ-ನರಕಕ್ಕೂ ನಡುವೆ ಏನಿದು ಹೊಸ ಲಿಂಕ್‌?

Bigg Boss Season 11: ಅನೌನ್ಸ್‌ ಆದಾಗಿನಿಂದಲೂ ಒಂದಲ್ಲ ಒಂದು ರೀತಿಯಲ್ಲಿ ಸದ್ದು ಮಾಡುತ್ತಿದೆ, 17 ಮಂದಿ ಇದೀಗ ಬಿಗ್‌ ಬಾಸ್‌ ಮನೆಗೆ ಎಂಟ್ರಿ ಕೊಟ್ಟಿದ್ದು, ಮೊದಲ ವಾರದಲ್ಲೆ ಬಿಗ್‌ ಬಾಸ್‌ ಮನೆಯಲ್ಲಿ ಹಲವರು ಕುತೂಹಲಕಾರಿ ಘಟನೆಗಳು ನಡೆಯುತ್ತಿವೆ. ಇದರ ನಡುವೆ ಮನೆಯಲ್ಲಿ ನಡೆಯುತ್ತಿರುವ ಬೆಳವಣಿಗೆಗಳನ್ನು ನೋಡಿತ್ತಿದ್ದರೆ, ಸ್ವರಗಕ್ಕೂ ನರಕಕ್ಕೂ ಹೊಸ ಲಿಂಕ್‌ ಶುರುವಾದಂತಿದೆ.
 
1 /6

2 /6

ಹೌದು, ಬಿಗ್‌ ಬಾಸ್‌ ಮನೆಗೆ ಎಂಟ್ರಿ ಕೊಟ್ಟಿರುವ ಸ್ಪರ್ಧಿಗಳನ್ನು ಎರಡು ಭಾಗಗಳಾಗಿ ವಿಂಗಡಿಸಿದ್ದು,  ಅರ್ಧ ಸ್ಪರ್ಧಿಗಳನ್ನು ಸ್ವರಗಕ್ಕೂ ಇನ್ನರ್ಧ ಸ್ಪರ್ಧಿಗಳನ್ನು ನರಕಕ್ಕೂ ಕಳುಹಿಸಲಾಗಿದೆ.  

3 /6

ಇದೀಗ ಈ ಸ್ವರ್ಗಕ್ಕೂ- ನರಕಕ್ಕೂ ನಡುವೆ ಹೊಸದೊಂದು ಲಿಂಕ್‌ ಶುರುವಾದಂತಿದೆ. ಯಾಕೆ ಅಂತೀರಾ, ಸ್ವರ್ಗದ ಹುಡುಗಿ ಹಾಗೂ ನರಕದಲ್ಲಿರುವ ಹುಡುಗ ಇಬ್ಬರು ಮಾತನಾಡುತ್ತಿರುವ ಪರಿ, ಒಬ್ಬರನ್ನೊಬ್ಬರು ನೋಡಿ ನಾಚಿಕೊಳ್ಳುತ್ತಿರುವ ರೀತಿ ಕಂಡು, ಬಿಗ್‌ ಬಾಸ್‌ ಮನೆಯ ಸ್ಪರ್ಧಿಗಳು ಇವರಿಬ್ಬರ ಕಾಲೆಳೆಯುತ್ತಿದ್ದಾರೆ.   

4 /6

ನಿನ್ನೆಯ ಎಪಿಸೋಡ್‌ನಲ್ಲಿ ಐಶ್ವರ್ಯ ಬಿಳಿ ಸೀರೆಯನ್ನುಟ್ಟು ಸಖತ್‌ ಆಗಿ ಕಾಣುತ್ತಿದ್ದರು, ಇದನ್ನು ನೋಡಿದ ಚೈತ್ರ, ಐಶ್ವರ್ಯ ಅವರಿಗೆ ಕಂಪ್ಲೀಮೆಂಟ್‌ ಕೊಟ್ಟರು. ರಂಜಿತ್‌ ಅವರು ತಮ್ಮನ್ನೆ ನೋಡಿತ್ತಿದ್ದುದ್ದನ್ನು ಕಂಡ ಐಶ್ವರ್ಯ ರಂಜಿತ್‌ ಅವರನ್ನು ಪ್ಲೇಟ್‌ ನಲ್ಲಿ ಇರುವ ಊಟ ಬೇಕಾ, ಇಲ್ವಾ ನಾನು ಬೇಕಾ, ಯಾಕೆ ಹಾಗೆ ನೋಡುತ್ತಿದ್ದೀರಾ? ಎಂದು ಪ್ರಶ್ನಿಸಿದರು.  

5 /6

ಐಶ್ವರ್ಯ ಕೇಳಿದ ಪ್ರಶ್ನೆಗೆ ಸ್ವಲ್ಪ ಕೂಡ ಹಿಂಜರಿಕೆ ಇಲ್ಲದೆ ನರಕದ ಸ್ಪರ್ಧಿ ರಂಜಿತ್‌ ನನಗೆ ನೀವೇ ಬೇಕು ಎಂದರು, ಇದನ್ನು ನೋಡಿದ ಇತರ ಮನೆಯ ಸ್ಪರ್ಧಿಗಳು ಇವರಿಬ್ಬರ ನಡುವೆ ಏನೋ ನಡೀತಿದೆ, ಇಬ್ಬರಿಗೂ ಒಬ್ಬರ ಮೇಲೆ ಒಬ್ಬರಿಗೆ ಲವ್‌ ಆದಂತೆ ಕಾಣುತ್ತಿದೆ ಎಂದು ಇಬ್ಬರ ಕಾಲೆಳೆಯಲು ಆರಂಭಿಸಿದ್ದಾರೆ.   

6 /6

ಇನ್ನೂ ಇದನ್ನು ನೋಡಿದ ಪ್ರೇಕ್ಷಕರಂತೂ, ಬಿಗ್‌ಬಾಸ್‌ ಮನೆಯ ಲವ್‌ಸ್ಟೋರಿಗಳ ಲಿಸ್ಟ್‌ನಲ್ಲಿ ಈ ಜೋಡಿಯದ್ದು ಒಂದು ಹೆಸರು ಸೇರ್ಪಡೆಯಾಗಲಿದೆ ಎಂದು ಅಂದಾಜಿಸುತ್ತಿದ್ದಾರೆ, ಇನ್ನೂ ಮುಂದೆ ನಡೆಯುವ ಬೆಳವಣಿಗಳನ್ನು ನೋಡಿದರಷ್ಟೆ ಏನಾಗಲಿದೆ ಎನ್ನುವುದು ತಿಳಿದು ಬರಲಿದೆ.