ಚಿರತೆಯಂತೆ ಹಾರಿ ಒಂದೇ ಕೈಯಲ್ಲಿ ಕ್ಯಾಚ್‌ ಹಿಡಿದ ರೋಹಿತ್‌ ಶರ್ಮಾ...!‌ ಕಣ್ಣು-ಬಾಯಿ ಬಿಟ್ಟು ಶಾಕ್‌ನಲ್ಲಿ ನೋಡಿಯೇ ನಿಂತ ಕೊಹ್ಲಿ..! ವಿಡಿಯೋ ನೋಡಿ

Rohit Sharma Catch Video: ಮುಶ್ಫಿಕರ್ ರಹೀಮ್ ಅವರನ್ನು ಕ್ಲೀನ್ ಬೌಲ್ಡ್ ಮಾಡುವ ಮೂಲಕ ಜಸ್ಪ್ರೀತ್ ಬುಮ್ರಾ ಮೂರನೇ ದಿನದಲ್ಲಿ ಭಾರತಕ್ಕೆ ಮೊದಲ ಯಶಸ್ಸು ನೀಡಿದರು. ರಹೀಮ್ ಕೇವಲ 11 ರನ್ ಗಳಿಸಲಷ್ಟೇ ಶಕ್ತರಾದರು. ಅವರ ನಂತರ ಮೊಹಮ್ಮದ್ ಸಿರಾಜ್ ಇನ್ ಫಾರ್ಮ್ ಬ್ಯಾಟ್ಸ್ ಮನ್ ಲಿಟನ್ ದಾಸ್ ಪೆವಿಲಿಯನ್ ಹಾದಿ ತೋರಿಸಿದರು. ಇದರಲ್ಲಿ ಕ್ಯಾಪ್ಟನ್ ರೋಹಿತ್ ಕೊಡುಗೆ ಗರಿಷ್ಠವಾಗಿತ್ತು

Written by - Bhavishya Shetty | Last Updated : Sep 30, 2024, 03:35 PM IST
    • ಭಾರತ ಮತ್ತು ಬಾಂಗ್ಲಾದೇಶ ನಡುವಿನ ಎರಡನೇ ಟೆಸ್ಟ್ ಪಂದ್ಯ
    • ಗ್ರೀನ್ ಪಾರ್ಕ್ ಸ್ಟೇಡಿಯಂನಲ್ಲಿ ಮಳೆಯಿಂದಾಗಿ ಎರಡು ದಿನಗಳ ಆಟ ಸ್ಥಗಿತ
    • ಒಂದೇ ಕೈಯಲ್ಲಿ ಕ್ಯಾಚ್‌ ಹಿಡಿದ ರೋಹಿತ್‌ ಶರ್ಮಾ ವಿಡಿಯೋ
ಚಿರತೆಯಂತೆ ಹಾರಿ ಒಂದೇ ಕೈಯಲ್ಲಿ ಕ್ಯಾಚ್‌ ಹಿಡಿದ ರೋಹಿತ್‌ ಶರ್ಮಾ...!‌ ಕಣ್ಣು-ಬಾಯಿ ಬಿಟ್ಟು ಶಾಕ್‌ನಲ್ಲಿ ನೋಡಿಯೇ ನಿಂತ ಕೊಹ್ಲಿ..! ವಿಡಿಯೋ ನೋಡಿ title=
Video

Rohit Sharma Catch Video: ಕಾನ್ಪುರದಲ್ಲಿ ಭಾರತ ಮತ್ತು ಬಾಂಗ್ಲಾದೇಶ ನಡುವಿನ ಎರಡನೇ ಟೆಸ್ಟ್ ಪಂದ್ಯದ ನಾಲ್ಕನೇ ದಿನದಂದು, ಭಾರತದ ನಾಯಕ ರೋಹಿತ್ ಶರ್ಮಾ ಮೈದಾನದಲ್ಲಿ ಅದ್ಭುತವನ್ನೇ ಸೃಷ್ಟಿ ಮಾಡಿದರು. ಗ್ರೀನ್ ಪಾರ್ಕ್ ಸ್ಟೇಡಿಯಂನಲ್ಲಿ ಮಳೆಯಿಂದಾಗಿ ಎರಡು ದಿನಗಳ ಆಟ ಸ್ಥಗಿತಗೊಂಡ ಬಳಿಕ ಮೂರನೇ ದಿನವಾದ ಸೋಮವಾರ ಪಂದ್ಯ ಆರಂಭವಾಯಿತು. ಮೊದಲ ದಿನ ಬಾಂಗ್ಲಾದೇಶ 35 ಓವರ್‌ಗಳಲ್ಲಿ 3 ವಿಕೆಟ್‌ಗೆ 107 ರನ್ ಗಳಿಸಿತ್ತು. ಇದಾದ ಬಳಿಕ ಎರಡನೇ ದಿನ ಪಂದ್ಯ ನಡೆಯಲಿಲ್ಲ. ಇದೀಗ ಮೂರನೇ ದಿನ ಆಟ ಆರಂಭವಾದಾಗ ನಾಯಕ ರೋಹಿತ್ ತಮ್ಮ ಸ್ಫೋಟಕ ಫೀಲ್ಡಿಂಗ್ ಮೂಲಕ ಸಂಚಲನ ಮೂಡಿಸಿದರು.

ಇದನ್ನೂ ಓದಿ: ತೋಟಗಾರಿಕಾ ಬಿ.ಎಸ್.ಸಿ (ಹಾನ್ಸ್)ಪದವಿಯಲ್ಲಿ 16 ಚಿನ್ನದ ಪದಕ‌ ಬಾಚಿದ ವಿದ್ಯಾರ್ಥಿನಿ

ಮುಶ್ಫಿಕರ್ ರಹೀಮ್ ಅವರನ್ನು ಕ್ಲೀನ್ ಬೌಲ್ಡ್ ಮಾಡುವ ಮೂಲಕ ಜಸ್ಪ್ರೀತ್ ಬುಮ್ರಾ ಮೂರನೇ ದಿನದಲ್ಲಿ ಭಾರತಕ್ಕೆ ಮೊದಲ ಯಶಸ್ಸು ನೀಡಿದರು. ರಹೀಮ್ ಕೇವಲ 11 ರನ್ ಗಳಿಸಲಷ್ಟೇ ಶಕ್ತರಾದರು. ಅವರ ನಂತರ ಮೊಹಮ್ಮದ್ ಸಿರಾಜ್ ಇನ್ ಫಾರ್ಮ್ ಬ್ಯಾಟ್ಸ್ ಮನ್ ಲಿಟನ್ ದಾಸ್ ಪೆವಿಲಿಯನ್ ಹಾದಿ ತೋರಿಸಿದರು. ಇದರಲ್ಲಿ ಕ್ಯಾಪ್ಟನ್ ರೋಹಿತ್ ಕೊಡುಗೆ ಗರಿಷ್ಠವಾಗಿತ್ತು. 30 ಯಾರ್ಡ್ ವೃತ್ತದೊಳಗೆ ಒಂದೇ ಕೈಯಲ್ಲಿ ಕ್ಯಾಚ್ ಹಿಡಿಯದಿದ್ದರೆ ಭಾರತಕ್ಕೆ ಈ ಯಶಸ್ಸು ಸಿಗುತ್ತಿರಲಿಲ್ಲ.

ಲಿಟನ್ ಅವರು ಬೌಂಡರಿ ಹೊಡೆಯಲು ಪ್ರಯತ್ನಿಸಿದ್ದರು. ಆದರೆ ಚಿರತೆಯಂತೆ ಜಿಗಿದು ಒಂದೇ ಕೈಯಲ್ಲಿ ಕ್ಯಾಚ್ ಹಿಡಿಯುವ ಮೂಲಕ ಎಲ್ಲರನ್ನೂ ಅಚ್ಚರಿಗೊಳಿಸಿದ್ದರು. ಸೂಪರ್‌ ಕ್ಯಾಚ್‌ ನೋಡಿ ಸ್ವತಃ ಸಿರಾಜ್ ಆಶ್ಚರ್ಯಚಕಿತರಾದರು. ಇವರಷ್ಟೇ ಅಲ್ಲದೆ, ಶುಬ್‌ಮನ್ ಗಿಲ್ ಮತ್ತು ವಿರಾಟ್ ಕೊಹ್ಲಿ ಕೂಡ ಅಚ್ಚರಿಗೊಂಡಿದ್ದರು.

ಇದನ್ನೂ ಓದಿ: 55 ಇಂಚಿನ ಸ್ಮಾರ್ಟ್ ಟಿವಿ ಮೇಲೆ 49% ಡಿಸ್ಕೌಂಟ್ !ಅಗ್ಗದ ಬೆಲೆಯಲ್ಲಿ Kodak  ಟಿವಿ ಖರೀದಿಸಲು ಇದೇ ಸುವರ್ಣಾವಕಾಶ  

ವಿಡಿಯೋ ನೋಡಿ:

 

 

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News