"ಮರಳಿ ಬರದ ಪ್ರೀತಿಗಾಗಿ ಮತ್ತೆ ಮಿಡಿಯಿತು ಹೃದಯ" ನಟನ ಫೋಟೋ ಪೋಸ್ಟ್‌ ಮಾಡಿ ʻಮಿಸ್‌ ಯುʼ ಎಂದ ಸಮಂತಾ?

SAMANTHA POST: ಈ ನಡುವೆ ಸಮಂತಾ ಅವರ ಇತ್ತೀಚಿನ ಪೋಸ್ಟ್ ಹಾಟ್ ಟಾಪಿಕ್ ಆಗಿದೆ. ನಟಿ ತಮ್ಮ ಇನ್ಸ್ಟಾಗ್ರಾಮ್‌ ಖಾತೆಯಲ್ಲಿ ಬಾಲಿವುಡ್‌ ನಟನ ಫೋಟೋಗಳನ್ನು ಹಂಚಿಕೊಂಡಿದ್ದು, ಈ ಫೋಟೋಗಳಿಗೆ ನಟಿ ನೀಡಿರುವ ಕ್ಯಾಪ್ಶನ್‌ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್‌ ಆಗುತ್ತಿದೆ.
 

1 /6

SAMANTHA POST: ನಾಯಕಿ ಸಮಂತಾ ಜೀವನ ತೆರೆದ ಪುಸ್ತಕ. ನಟಿಯ ಕುರಿತಾದ ಯಾವುದೇ ವಿಷಯವಿರಲಿ ಅದು ಅತೀ ಬೇಗ ವೈರಲ್‌ ಆಗುತ್ತದೆ. ತೆಲುಗಿನಲ್ಲಿ ಟಾಪ್ ಹೀರೋಯಿನ್ ಆಗಿದ್ದ ಸಮಂತಾ, ನಾಯಕ ನಾಗ ಚೈತನ್ಯ ಅವರನ್ನು 2017 ರಲ್ಲಿ ಪ್ರೀತಿಸಿ ಮದುವೆಯಾದರು. 

2 /6

ಇಬ್ಬರ ನಡುವಿನ ಭಿನ್ನಾಭಿಪ್ರಾಯದಿಂದಾಗಿ ದಂಪತಿಗಳು ಅಕ್ಟೋಬರ್ 2021 ರಲ್ಲಿ ತಮ್ಮ ಪ್ರತ್ಯೇಕತೆಯನ್ನು ಘೋಷಿಸಿದರು.  

3 /6

ಸದ್ಯ ಸಮಂತಾ ಒಂಟಿ ಜೀವನ ನಡೆಸುತ್ತಿದ್ದಾರೆ. ಸಮಂತಾ ಜೊತೆಗಿನ ವಿಚ್ಛೇದನದ ನಂತರ, ನಾಗ ಚೈತನ್ಯ ಸೋಭಿತಾ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಮತ್ತೊಂದೆಡೆ, ಸಮಂತಾ ಸಿಂಗಲ್ ಆಗಿದ್ದಾರೆ. ಏತನ್ಮಧ್ಯೆ, ಸಮಂತಾ ಬಾಲಿವುಡ್ ನಿರ್ದೇಶಕರನ್ನು ಪ್ರೀತಿಸುತ್ತಿದ್ದಾರೆ ಮತ್ತು ಶೀಘ್ರದಲ್ಲೇ ಅವರು ಮದುವೆಯಾಗಲಿದ್ದಾರೆ ಎಂಬ ವದಂತಿಗಳು ಸಿಕ್ಕಾಪಟ್ಟೆ ಸದ್ದು ಮಾಡಿದ್ದವು ಆದರೆ ಇವೆಲ್ಲವೂ ಕೇವಲ ಗಾಳಿ ಸದ್ದಿ ಮಾತ್ರ.

4 /6

ಈ ನಡುವೆ ಸಮಂತಾ ಅವರ ಇತ್ತೀಚಿನ ಪೋಸ್ಟ್ ಹಾಟ್ ಟಾಪಿಕ್ ಆಗಿದೆ. ನಟಿ ತಮ್ಮ ಇನ್ಸ್ಟಾಗ್ರಾಮ್‌ ಖಾತೆಯಲ್ಲಿ ಬಾಲಿವುಡ್‌ ನಟನ ಫೋಟೋಗಳನ್ನು ಹಂಚಿಕೊಂಡಿದ್ದು, ಈ ಫೋಟೋಗಳಿಗೆ ನಟಿ ನೀಡಿರುವ ಕ್ಯಾಪ್ಶನ್‌ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್‌ ಆಗುತ್ತಿದೆ.

5 /6

ಸದ್ಯ ಸಮಂತಾ ವೆಬ್ ಸೀರೀಸ್ 'ಸಿಟಾಡೆಲ್-ಹನಿ ಬನ್ನಿ'ಯಲ್ಲಿ ನಟಿಸಿದ್ದಾರೆ, ಬಾಲಿವುಡ್ ಹೀರೋ ವರುಣ್ ಧವನ್ ನಟಿಸುತ್ತಿದ್ದು, ರಾಜ್ ಡಿಕೆ ಈ ವೆಬ್‌ ಸೀರೀಸ್‌ ಅನ್ನು ನಿರ್ದೇಶನ ಮಾಡಿದ್ದಾರೆ. 

6 /6

ಸದ್ಯ ನಟಿ ಚಿತ್ರದ ನಾಯಕ ವರುಣ್‌ ಧವನ್‌ ಅವರೊಂದಿಗಿನ ಫೋಟೋವನ್ನು ಪೋಸ್ಟ್‌ ಮಾಡಿದ್ದು ಶೀರ್ಷಿಕೆಯಲ್ಲಿ " ಮಿಸ್ಸಿಂಗ್‌ ಮೈ ಮ್ಯಾನ್‌" ಎಂದು ಬರೆದುಕೊಂಡಿದ್ದಾರೆ. ಇದೀಗ ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್‌ ಆಗುತ್ತಿದೆ.