ಯೂರೋಪ್ ದೇಶಗಳಿಗೆ ರಫ್ತಾಗುತ್ತಿರುವ ದೇಶದ ಮೊದಲ ಇವಿ ಮೋಟರ್ ಸೈಕಲ್

ಜಿಗಣಿ ಕೈಗಾರಿಕಾ ಪ್ರದೇಶದಲ್ಲಿನ ಇವಿ ಮೋಟಾರ್ ಸೈಕಲ್ ಉತ್ಪಾದನಾ ಘಟಕದಲ್ಲಿ ಯೂರೋಪ್ ದೇಶಗಳಿಗೆ ರಫ್ತು ಮಾಡಲು ಸಚಿವರು ಹಸಿರು ನಿಶಾನೆ ತೋರಿದರು.

Written by - Yashaswini V | Last Updated : Sep 24, 2024, 03:41 PM IST
  • ಈ ರಫ್ತು ವಹಿವಾಟು ಕರ್ನಾಟಕ ಮತ್ತು ಭಾರತದಲ್ಲಿ ಕ್ರಾಂತಿಕಾರಿ ಮೈಲುಗಲ್ಲಾಗಿದೆ.
  • ಇದು ನಮಗೊಂದು ರೀತಿ ಬೈಕ್ ವಲಯದಲ್ಲಿ ಟೆಸ್ಲಾ ರೀತಿಯದ್ದಾಗಿದೆ
ಯೂರೋಪ್ ದೇಶಗಳಿಗೆ ರಫ್ತಾಗುತ್ತಿರುವ ದೇಶದ ಮೊದಲ ಇವಿ ಮೋಟರ್ ಸೈಕಲ್ title=

ಬೆಂಗಳೂರು: ಉದ್ಯಮಶೀಲ ಕನ್ನಡಿಗರು ಸೇರಿಕೊಂಡು ಸ್ಥಾಪಿಸಿರುವ ಅಲ್ಟ್ರಾವಯಲೆಟ್ ಇ.ವಿ.‌ ಮೋಟಾರ್ ಸೈಕಲ್- ಎಫ್77 ರಫ್ತು ವಹಿವಾಟಿಗೆ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ‌ ಬಿ ಪಾಟೀಲ ಮಂಗಳವಾರ ಚಾಲನೆ ನೀಡಿದರು.

ಜಿಗಣಿ ಕೈಗಾರಿಕಾ ಪ್ರದೇಶದಲ್ಲಿನ ಇವಿ ಮೋಟಾರ್ ಸೈಕಲ್ ಉತ್ಪಾದನಾ ಘಟಕದಲ್ಲಿ ಯೂರೋಪ್ ದೇಶಗಳಿಗೆ ರಫ್ತು ಮಾಡಲು ಸಚಿವರು ಹಸಿರು ನಿಶಾನೆ ತೋರಿದರು.

ಈ ಸಂದರ್ಭದಲ್ಲಿ ಮಾತನಾಡಿದ ಸಚಿವ ಎಂ‌ ಬಿ ಪಾಟೀಲ ಅವರು, ಯೂರೋಪಿನ ಹಲವು ರಾಷ್ಟ್ರಗಳಿಗೆ ನಡೆಯಲಿರುವ ಈ ರಫ್ತು ವಹಿವಾಟು ಕರ್ನಾಟಕ ಮತ್ತು ಭಾರತದಲ್ಲಿ ಕ್ರಾಂತಿಕಾರಿ ಮೈಲುಗಲ್ಲಾಗಿದೆ. ಇದು ನಮಗೊಂದು ರೀತಿ ಬೈಕ್ ವಲಯದಲ್ಲಿ ಟೆಸ್ಲಾ ರೀತಿಯದ್ದಾಗಿದೆ ಎಂದು ಬಣ್ಣಿಸಿದರು.

ಇದನ್ನೂ ಓದಿ- ತಿರುಪತಿ ತಿಮ್ಮಪ್ಪನ ಲಡ್ಡು ವಿವಾದ ಬೆನ್ನಲ್ಲೆ ನಂದಿನಿ ತುಪ್ಪಕ್ಕೆ ಫುಲ್ ಡಿಮ್ಯಾಂಡ್

ಕನ್ನಡಿಗರಾದ ನಾರಾಯಣ ಸುಬ್ರಹ್ಮಣ್ಯ ಮತ್ತು ನೀರಜ್ ರಾಜಮೋಹನ್ ಸೇರಿಕೊಂಡು ಸ್ಥಾಪಿಸಿರುವ ಕಂಪನಿಗೆ ಸರಕಾರವು ಸಂಪೂರ್ಣ ಸಹಕಾರ ಕೊಡಲಿದೆ. ಇದಕ್ಕಾಗಿ ನಾವು ನಿಯಮಗಳಿಗೆ ಅಂಟಿಕೊಳ್ಳದೆ ಒಂದು ಹೆಜ್ಜೆ ಮುಂದಿಡಲೂ ಸಿದ್ಧ. ಕಂಪನಿಯ ಮುಖ್ಯಸ್ಥರನ್ನು ನಾನು ಸದ್ಯದಲ್ಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಳಿ ಕರೆದುಕೊಂಡು ಹೋಗುತ್ತೇನೆ ಎಂದು ಅವರು ಆಶ್ವಾಸನೆ ನೀಡಿದರು. 

ಅಲ್ಟ್ರಾವಯಲೆಟ್ ಇವಿ ಮೋಟಾರು ಸೈಕಲ್‌ ಜರ್ಮನಿ, ಟರ್ಕಿ, ಸ್ಪೇನ್ ದೇಶಗಳಿಗೆ ಹೋಗುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ. ಇದರಿಂದ ಬೆಂಗಳೂರಿನ ಖ್ಯಾತಿಗೆ ಇನ್ನೊಂದು ಗರಿ ಮೂಡಿದೆ. ಇದಕ್ಕಾಗಿ ಎಲ್ಲರನ್ನೂ ಅಭಿನಂದಿಸುವೆ ಎಂದು ಅವರು ನುಡಿದರು.

ಇದನ್ನೂ ಓದಿ- 34 ವರ್ಷದ ಯುವತಿಯ ಹೆಗಲಿಗೆ ಟಾಟಾ ಸಾಮ್ರಾಜ್ಯದ ಸಾರಥ್ಯ! ರತನ್ ಟಾಟಾ ಜೊತೆಗಿದೆ ಈಕೆಗೆ ವಿಶೇಷ ನಂಟು

ಕಂಪನಿಯ ಸಿಇಒ ಮತ್ತು ಸಂಸ್ಥಾಪಕ ನಾರಾಯಣ ಸುಬ್ರಹ್ಮಣ್ಯ, ಸಹ ಸಂಸ್ಥಾಪಕ ನೀರಜ್ ರಾಜಮೋಹನ್ ಇದ್ದರು.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News