World’s 2nd Trillionaire After Elon Musk: ವಿಶ್ವದ ಶ್ರೀಮಂತ ವ್ಯಕ್ತಿ ಎಲೋನ್ ಮಸ್ಕ್ಗೆ ಭಾರತೀಯ ಉದ್ಯಮಿಯೊಬ್ಬರು ಕಠಿಣ ಸ್ಪರ್ಧೆ ಒಡ್ಡಬಹುದೇ?
Trillionaire: ಇಡೀ ಜಗತ್ತಿನ ಶ್ರೀಮಂತ ವ್ಯಕ್ತಿಗಳಲ್ಲಿ ಟೆಸ್ಲಾ ಸಿಇಒ ಎಲೋನ್ ಮಸ್ಕ್ ಕೆಲವೇ ವರ್ಷಗಳಲ್ಲಿ ವಿಶ್ವದ ಮೊದಲನೇ ಟ್ರಿಲಿಯನೇರ್ ಸ್ಥಾನಮಾನವನ್ನು ಅಲಂಕರಿಸಬಹುದು ಎಂದು ಅಂದಾಜಿಸಲಾಗಿದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ವಿಶ್ವದ ಕೆಲವು ಶ್ರೀಮಂತ ವ್ಯಕ್ತಿಗಳು ಇನ್ನೂ ಕೆಲವೇ ವರ್ಷಗಳಲ್ಲಿ ಟ್ರಿಲಿಯನೇರ್ ಸ್ಥಾನಮಾನ ಗಿಟ್ಟಿಸಿಕೊಳ್ಳಬಹುದು ಎಂದು ವರದಿಯೊಂದು ತಿಳಿಸಿದೆ.
ಎಲೆಕ್ಟ್ರಿಕ್ ಕಾರ್ ತಯಾರಕ ಟೆಸ್ಲಾ ಮತ್ತು ಎಕ್ಸ್ನ ಸಿಇಒ ಎಲೋನ್ ಮಸ್ಕ್ ವಿಶ್ವದ ಮೊದಲ ಟ್ರಿಲಿಯನೇರ್ ಪಟ್ಟ ಅಲಂಕರಿಸಲಿದ್ದಾರೆ ಎಂದು ವರದಿ ಅಂದಾಜಿಸಿದೆ.
ಜಗತ್ತಿನ ಅತ್ಯಂತ ಶ್ರೀಮಂತ ವ್ಯಕ್ತಿಯಾಗಿರುವ ಎಲೋನ್ ಮಸ್ಕ್ 2027 ರ ವೇಳೆಗೆ 237 ಶತಕೋಟಿ ಡಾಲರ್ ನಿವ್ವಳ ಮೌಲ್ಯದೊಂದಿಗೆ ವಿಶ್ವದ ಮೊದಲ ಟ್ರಿಲಿಯನೇರ್ ಆಗಿ ಹೊರಹೊಮ್ಮಲಿದ್ದಾರೆ ಎಂದು ವರದಿ ತಿಳಿಸಿದೆ.
ಈ ವರದಿಯಲ್ಲಿ ಭಾರತೀಯ ಹೆಸರಾಂತ ಉದ್ಯಮಿಯೊಬ್ಬರು ಎಲೋನ್ ಮಸ್ಕ್ಗೆ ಪ್ರತಿಸ್ಪರ್ಧಿ ಆಗಿ ಹೊರಹೊಮ್ಮಲಿದ್ದಾರೆ ಎಂದು ತಿಳಿಸಲಾಗಿದೆ.
ವರದಿಯ ಪ್ರಕಾರ, ವಿಶ್ವ ಬಿಲಿಯನೇರ್ ಸೂಚ್ಯಂಕದಲ್ಲಿ ಪ್ರಸ್ತುತ 13ನೇ ಸ್ಥಾನದಲ್ಲಿರುವ ಭಾರತೀಯ ಉದ್ಯಮಿ ಗೌತಮ್ ಅದಾನಿ ಅವರ ಸಂಪತ್ತು ವಾರ್ಷಿಕವಾಗಿ ಅದರ ಪ್ರಸ್ತುತ ದರದಲ್ಲಿ 123% ನಷ್ಟು ಬೆಳವಣಿಗೆಯನ್ನು ಮುಂದುವರೆಸಿದರೆ 2028 ರ ವೇಳೆಗೆ 2 ನೇ ಟ್ರಿಲಿಯನೇರ್ ಆಗಬಹುದು ಎಂದು ಅಂದಾಜಿಸಿದೆ.
ಪ್ರಸ್ತುತ ಭಾರತದ ಅತ್ಯಂತ ಶ್ರೀಮಂತ ವ್ಯಕ್ತಿ ಆಗಿರುವ ಮುಖೇಶ್ ಅಂಬಾನಿ ಕೂಡ 2033 ರ ವೇಳೆಗೆ ಟ್ರಿಲಿಯನೇರ್ ಆಗಬಹುದು ಇನ್ಫಾರ್ಮಾ ಕನೆಕ್ಟ್ ಅಕಾಡೆಮಿಯ ವರದಿ ತಿಳಿಸಿದೆ. ಪ್ರಸ್ತುತ 111 ಶತಕೋಟಿ USD ಸಂಪತ್ತನ್ನು ಹೊಂದಿರುವ ಮುಖೇಶ್ ಅಂಬಾನಿ ಈಗ ಏಷ್ಯಾದ ಶ್ರೀಮಂತರ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.