ನವದೆಹಲಿ: ದೆಹಲಿಯಲ್ಲಿ ಭಾರಿ ಮಳೆಯಿಂದಾಗಿ ಕನಿಷ್ಠ 14 ವಿಮಾನಗಳನ್ನು ದೆಹಲಿಯ ಇಂದಿರಾಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಶನಿವಾರ ತಿರುಗಿಸಲಾಗಿದೆ ಎಂದು ಸುದ್ದಿ ಸಂಸ್ಥೆ ಎಎನ್‌ಐ ವರದಿ ಮಾಡಿದೆ.
ಹವಾಮಾನ ವೈಪರೀತ್ಯದಿಂದಾಗಿ ವಿಮಾನಗಳನ್ನು ಲಕ್ನೋ, ಅಮೃತಸರ, ಅಹಮದಾಬಾದ್ ಮತ್ತು ಜೈಪುರಕ್ಕೆ ತಿರುಗಿಸಲಾಯಿತು.ಇತ್ತೀಚಿನ ಉಪಗ್ರಹ ಚಿತ್ರಗಳು ಮತ್ತು ದೆಹಲಿ, ಪಟಿಯಾಲ ಮತ್ತು ಜೈಪುರ ರಾಡಾರ್‌ಗಳು ಉತ್ತರ ಭಾರತದಲ್ಲಿ ಗಾಢವಾದ ಮೋಡಗಳನ್ನು ತೋರಿಸಿದ್ದು, ಗುಡುಗು ಸಹಿತ ಮಳೆಯಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಶನಿವಾರ ತಿಳಿಸಿದೆ.
Recent Satellite and Delhi, Patiala, and Jaipur Radars shows convective clouds over Jammu, Kashmir Ladak, Himachal Pradesh, Uttarakhand, parts of Punjab, Haryana, Chandigarh, Delhi and NCR and adj. areas. These areas likely to get thunderstorm & precipitation as per forecast. pic.twitter.com/UEtRmNA36K
— IMD Weather (@IMDWeather) February 29, 2020
"ಈ ಗಾಢ ಮೋಡಗಳು ಜಮ್ಮು, ಕಾಶ್ಮೀರ, ಲಡಾಖ್, ಹಿಮಾಚಲ ಪ್ರದೇಶ, ಉತ್ತರಾಖಂಡ್, ಪಂಜಾಬ್, ಹರಿಯಾಣ, ಚಂಡೀಗಢ ದೆಹಲಿ ಮತ್ತು ಎನ್‌ಸಿಆರ್ ಮತ್ತು ಪಕ್ಕದ ಪ್ರದೇಶಗಳ ಮೇಲೆ ಇವೆ" ಎಂದು ಐಎಂಡಿ ಟ್ವೀಟ್ ಮಾಡಿದೆ. "ಈ ಪ್ರದೇಶಗಳು ಮುನ್ಸೂಚನೆಯ ಪ್ರಕಾರ ಗುಡುಗು ಮತ್ತು ಮಳೆಯಾಗುವ ಸಾಧ್ಯತೆಯಿದೆ" ಎಂದು ಐಎಂಡಿ ಹೇಳಿದೆ.
ದೆಹಲಿ ವಿಮಾನ ನಿಲ್ದಾಣದ ವೆಬ್‌ಸೈಟ್‌ನಲ್ಲಿ ಲಭ್ಯವಿರುವ ಮಾಹಿತಿಯ ಪ್ರಕಾರ, ಎರಡು ಸ್ಪೈಸ್ ಜೆಟ್ ವಿಮಾನಗಳು, ಬೆಂಗಳೂರಿನಿಂದ ಎಸ್‌ಜಿ 8718 ಮತ್ತು ಶಿರಡಿಯಿಂದ ಎಸ್‌ಜಿ 942 ವಿಮಾನಗಳನ್ನು ಜೈಪುರಕ್ಕೆ ತಿರುಗಿಸಲಾಯಿತು. ಏತನ್ಮಧ್ಯೆ, ಶಿಮ್ಲಾ ಜಿಲ್ಲೆಯ ನರ್ಕಂದ ಪಟ್ಟಣದಲ್ಲಿ ಇಂದು ಹಿಮಪಾತವಾಗಿದೆ.