ಉತ್ತರ ಕೊರಿಯಾ ವಿರುದ್ಧ ನಿರ್ಬಂಧಗಳ ಜಾರಿಗೆ ಕರೆ ನೀಡಿದ ಶಿಂಜೋ ಅಬೆ

ಅಂತರಾಷ್ಟ್ರೀಯ ಸಮುದಾಯವು ಏಕೀಕೃತವಾಗಿ ಉಳಿಯಬೇಕು ಮತ್ತು ಉತ್ತರ ಕೊರಿಯಾದ ವಿರುದ್ಧ ನಿರ್ಬಂಧಗಳನ್ನು ಜಾರಿಗೆ ತರಬೇಕು - ಶಿಂಜೋ ಅಬೆ

Last Updated : Sep 18, 2017, 04:45 PM IST
ಉತ್ತರ ಕೊರಿಯಾ ವಿರುದ್ಧ ನಿರ್ಬಂಧಗಳ ಜಾರಿಗೆ ಕರೆ ನೀಡಿದ ಶಿಂಜೋ ಅಬೆ  title=

ಟೋಕಿಯೋ: ಬ್ಯಾಲಿಸ್ಟಿಕ್ ಕ್ಷಿಪಣಿಗಳು ಜಪಾನ್ ಮೇಲೆ ಪುನರಾವರ್ತನೆಗೊಂಡ ನಂತರ ಅಂತರಾಷ್ಟ್ರೀಯ ಸಮುದಾಯವು ಏಕೀಕೃತವಾಗಿ ಉಳಿಯಬೇಕು ಮತ್ತು ಉತ್ತರ ಕೊರಿಯಾದ ವಿರುದ್ಧ ನಿರ್ಬಂಧಗಳನ್ನು ಜಾರಿಗೆ ತರಬೇಕು ಎಂದು ಜಪಾನ್ ಪ್ರಧಾನಿ ಶಿಂಜೋ ಅಬೆ ಕರೆನೀಡಿದ್ದಾರೆ ಎಂದು ನ್ಯೂಯಾರ್ಕ್ ಟೈಮ್ಸ್ ನಲ್ಲಿ ಭಾನುವಾರ ಪ್ರಕಟವಾದ ಸುದ್ದಿಯಲ್ಲಿ ತಿಳಿಸಿದ್ದಾರೆ. 

ನ್ಯೂಯಾರ್ಕ್ನಲ್ಲಿ ನಡೆಯಲಿರುವ ಯುನೈಟೆಡ್ ನೇಷನ್ಸ್ ನ ಸಾಮಾನ್ಯ ಸಭೆ ಪ್ರಾರಂಭವಾಗುವ ಮೊದಲು ಶಿಂಜೋ ಅಬೆ ಈ ರೀತಿಯ ಕರೆಯನ್ನು ನೀಡಿದ್ದಾರೆ. ಉತ್ತರ ಕೊರಿಯಾದ ಬ್ಯಾಲಿಸ್ಟಿಕ್ ಕ್ಷಿಪಣಿ ಮತ್ತು ಪರಮಾಣು ಶಸ್ತ್ರಾಸ್ತ್ರಗಳ ಬಗ್ಗೆ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ದೊಡ್ಡ ಮಟ್ಟದ ಸಮಾಲೋಚನೆ ನಡೆಯಬಹುದೆಂದು ನಿರೀಕ್ಷಿಸಲಾಗಿದೆ.

ಉತ್ತರ ಕೊರಿಯಾವು ಸೆಪ್ಟೆಂಬರ್ 3 ರಂದು ಅಂತರಾಷ್ಟ್ರೀಯ ಒತ್ತಡವನ್ನು ವಿರೋಧಿಸಿ ತನ್ನ ಆರನೇ ಮತ್ತು ಅತ್ಯಂತ ಶಕ್ತಿಶಾಲಿ ಪರಮಾಣು ಪರೀಕ್ಷೆಯನ್ನು ನಡೆಸಿತು. ಅಲ್ಲದೆ ಕಳೆದ ಮೂರು ವಾರಗಳಲ್ಲಿ ತನ್ನ ಎರಡನೆಯ ಕ್ಷಿಪಣಿಯನ್ನು ಜಪಾನ್ ಮೇಲೆ ಹಾರಿಸಿದೆ.

ಅಂತಹ ಪರೀಕ್ಷೆಗಳು ವಿಶ್ವ ಸಂಸ್ಥೆಯ ಭದ್ರತಾ ಮಂಡಳಿಯ ನಿರ್ಣಯಗಳ ಉಲ್ಲಂಘನೆಯಾಗಿದ್ದು, ಉತ್ತರ ಕೊರಿಯಾವು ಈಗ ಯುನೈಟೆಡ್ ಸ್ಟೇಟ್ಸ್ ನ ಕೆಂಗಣ್ಣಿಗೆ ಗುರಿಯಾಗಬಹುದು ಎಂದು ಅಬೆ ಹೇಳಿದ್ದಾರೆ.

ಉತ್ತರ ಕೊರಿಯಾದೊಂದಿಗೆ ರಾಜತಾಂತ್ರಿಕತೆ ಮತ್ತು ಸಂಭಾಷಣೆ ಕೆಲಸ ಮಾಡುವುದಿಲ್ಲ. ಉತ್ತರ ಕೊರಿಯಾವು ಎದುರಿಸುತ್ತಿರುವ ಬೆದರಿಕೆಗಳನ್ನು ನಿಭಾಯಿಸಲು ಸಂಪೂರ್ಣ ಅಂತರರಾಷ್ಟ್ರೀಯ ಸಮುದಾಯದ ಒಮ್ಮತದ ಒತ್ತಡವು ಅತ್ಯಗತ್ಯವಾಗಿದೆ ಎಂದು ಅಬೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಒಂದು ವಾರದ ಹಿಂದೆ ತನ್ನ 15 ಸದಸ್ಯ ರಾಷ್ಟ್ರಗಳನ್ನೊಳಗೊಂಡ ಭದ್ರತಾ ಮಂಡಳಿಯು, 2006 ರ ಉತ್ತರ ಕೊರಿಯಾದ ಪರಮಾಣು ಮತ್ತು ಬ್ಯಾಲಿಸ್ಟಿಕ್ ಕ್ಷಿಪಣಿ ಕಾರ್ಯಕ್ರಮಗಳ ಮೇಲೆ ತನ್ನ ಒಂಬತ್ತನೆಯ ನಿರ್ಬಂಧದ ನಿರ್ಣಯವನ್ನು ಏಕಪಕ್ಷೀಯವಾಗಿ ಅಳವಡಿಸಿಕೊಂಡಿದೆ.

Trending News