What kind of Rudrakshi should students wear?: ಶಿವನ ಕಣ್ಣು ಎಂದೇ ಹೇಳಲಾಗುವ ರುದ್ರಾಕ್ಷಿ ಮಣಿಯ ಸರವನ್ನು ಯಾರು ಧರಿಸಬೇಕು? ಎಂಬ ಬಗ್ಗೆ ಅನೇಕರಲ್ಲಿ ಗೊಂದಲಗಳಿವೆ. ಅದರಲ್ಲೂ ವಿದ್ಯಾರ್ಥಿಗಳು ರುದ್ರಾಕ್ಷಿ ಸರ ಧರಿಸಬಹುದೇ ಮತ್ತು ಧರಿಸಿದರೆ ಏನು ಫಲ ಸಿಗುತ್ತದೆ ಅನ್ನೋದರ ಬಗ್ಗೆ ತಿಳಿಯಿರಿ.
ರುದ್ರಾಕ್ಷಿಯು ಯಾವುದೇ ಒಬ್ಬ ವ್ಯಕ್ತಿಯಲ್ಲಿ ದೈಹಿಕ ಮತ್ತು ಮಾನಸಿಕ ಬಲವನ್ನು ತುಂಬಲು ನೆರವಾಗುತ್ತದೆ. ಮನೋವಿಕಾರಗಳ ನಿಯಂತ್ರಣಕ್ಕೆ ಮತ್ತು ದೇಹದ ಆರೋಗ್ಯದ ದೃಷ್ಟಿಯಿಂದ ರುದ್ರಾಕ್ಷಿ ಸರವನ್ನು ಧರಿಸುವುದು ಶ್ರೇಯಸ್ಕರವೆಂದು ಹೇಳಲಾಗಿದೆ. ಅದರಲ್ಲೂ ವಿದ್ಯಾರ್ಥಿಗಳೂ ರುದ್ರಾಕ್ಷಿ ಸರ ಧರಿಸಿದರೆ ಅದರಿಂದ ಉತ್ತಮ ಫಲ ಪಡೆಯಬಹುದು.
ಇದನ್ನೂ ಓದಿ: ತಾಯಿಯ ಕೊನೆ ಆಸೆ ಈಡೇರಿಸಲು ತಂಗಿಯನ್ನೇ ಮದುವೆಯಾದ ಖ್ಯಾತ ಕ್ರಿಕೆಟಿಗ ! ಇಲ್ಲಿದೆ ನೋಡಿ ಈ ಜೋಡಿಯ ಫೋಟೋ
ವಿದ್ಯಾರ್ಥಿಗಳಲ್ಲಿ ಓದಿನ ಒತ್ತಡ ಹೆಚ್ಚಿದಾಗ ಮಾನಸಿಕವಾಗಿ ಅಶಾಂತಿ, ಒತ್ತಡ ಉಂಟಾಗುತ್ತದೆ. ಯಾವುದರ ಮೇಲೂ ಗಮನ ಕೇಂದ್ರೀಕರಿಸಲು ಸಾಧ್ಯವಾಗುವುದಿಲ್ಲ. ಇಂತಹ ಸಂದರ್ಭದಲ್ಲಿ ರುದ್ರಾಕ್ಷಿ ಸರ ಧರಿಸುವುದರಿಂದ ಒತ್ತಡ ಮತ್ತು ಗೊಂದಲಗಳು ದೂರವಾಗಿ ಶೈಕ್ಷಣಿಕವಾಗಿ ಉತ್ತಮ ಫಲಿತಾಂಶವನ್ನು ಪಡೆಯಬಹುದು.
ವಿದ್ಯಾರ್ಥಿಗಳು ವಿಶೇಷವಾಗಿ ಚತುರ್ಮುಖಿ ಅಥವಾ 6 ಮುಖವಿರುವ ರುದ್ರಾಕ್ಷಿ ಧರಿಸಿದರೆ ಉತ್ತಮ. ನಾಲ್ಕು ಮುಖದ ರುದ್ರಾಕ್ಷಿ ಬ್ರಹ್ಮ ದೇವನನ್ನು ಪ್ರತಿನಿಧಿಸುತ್ತದೆ. ಬ್ರಹ್ಮ ದೇವನು ಅಪಾರ ಬುದ್ಧಿವಂತ. ಹೀಗಾಗಿ ಈ ರುದ್ರಾಕ್ಷಿಯನ್ನು ಧರಿಸಬಹುದು. ಇದಲ್ಲದೆ ವಿದ್ಯಾರ್ಥಿಗಳಲ್ಲಿ ಸೃಜನಶೀಲ ಆಲೋಚನೆಗಳನ್ನು ಹೆಚ್ಚಿಸುವ ಶಕ್ತಿ ಹೊಂದಿದೆ ಎಂದು ನಂಬಲಾಗಿದೆ.
ಇದನ್ನೂ ಓದಿ: Sun Salutation: ಸೂರ್ಯ ನಮಸ್ಕಾರದ ಪ್ರಯೋಜನಗಳ ಬಗ್ಗೆ ತಿಳಿಯಿರಿ
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.