ಗಂಡನಿಂದಲೇ ಮೋಸ ಹೋಗಿ.. ಸಿನಿರಂಗಕ್ಕೆ ಗುಡ್‌ ಬೈ ಹೇಳಿದ ನಟಿ ಸಾಕ್ಷಿ ಶಿವಾನಂದ್‌ ಈಗ ಹೇಗಿದ್ದಾರೆ? ಇವರ ಪತಿ ಯಾರು ಗೊತ್ತೇ?

Famous Actress Sakshi Shivanand: ಸೈನಿಕ ಸಿನಿಮಾದ ಮೂಲಕ ಕನ್ನಡ ಸಿನಿ ಪ್ರೇಕ್ಷಕರಿಗೆ ಹತ್ತಿರವಾದ ಸಾಕ್ಷಿ ಶಿವಾನಂದ್‌ ಅವರಿಗೆ ಆ ಸಿನಿಮಾ ತುಂಬಾ ದೊಡ್ಡ ಹೆಸರು ತಂದುಕೊಟ್ಟಿತು.. ಇದೀಗ ಇವರ ವೈಯಕ್ತಿಕ ವಿಚಾರಗಳನ್ನು ತಿಳಿದುಕೊಳ್ಳೋಣ. 
 

1 /8

ನಟಿ ಸಾಕ್ಷಿ ಶಿವಾನಂದ್‌ ಏಪ್ರಿಲ್ 15,1976 ಮುಂಬೈನಲ್ಲಿ ಜನಿಸಿದರು.. ಇವರು ಕನ್ನಡ, ಹಿಂದಿ, ತೆಲುಗು, ತಮಿಳು ಸೇರಿದಂತೆ ಮಲಯಾಳಂ ಭಾಷೆಗಳಲ್ಲಿ ಮಿಂಚಿ ಟಾಪ್‌ ನಟಿ ಎನಿಸಿಕೊಂಡಿದ್ದರು..   

2 /8

ಯಾವುದೇ ಪಾತ್ರ ಕೊಟ್ಟರೂ ಅಚ್ಚುಕಟ್ಟಾಗಿ ಮಾಡಿ ಎಲ್ಲರೂ ಸಿಳ್ಳೆ ಚಪ್ಪಾಳೆ ಹೊಡೆಯುವಂತೆ ಮಾಡುತ್ತಿದ್ದರು.. ಒಂದು ಕಾಲದಲ್ಲಿ ಇವರ ಸಿನಿಮಾ ಎಂದರೇ ಒಂದು ಹಬ್ಬದಂತಿತ್ತು..   

3 /8

ಇವರು ಖ್ಯಾತ ನಟ ನಿರ್ದೇಶಕ ಎಸ್ ನಾರಾಯಣ್ ನೇತೃತ್ವದ ಸಿನಿಮಾ ಗಲಾಟೆ ಅಳಿಯಂದ್ರು ಮೂಲಕ ಕನ್ನಡ ಸಿನಿಮಾರಂಗಕ್ಕೆ ಕಾಲಿಟ್ಟರು.. ಇದನ್ನು ಕುಮಾರಸ್ವಾಮಿ ಅವರ ನಿರ್ಮಾಣ ಮಾಡಿದ್ದರು..   

4 /8

ಮೊದಲ ಸಿನಿಮಾದಿಂದಲೇ ಎಲ್ಲರ ಗಮನ ಸೆಳೆದ ನಟಿ ಸಾಕ್ಷಿ ಶಿವರಾಜ್‌ ಕುಮಾರ್‌ ಅವರಂತಹ ದೊಡ್ಡ ದೊಡ್ಡ ನಟರೊಂದಿಗೆ ತೆರೆಹಂಚಿಕೊಂಡಿದ್ದಾರೆ.. ನಂತರ ಅವರು ನಟ ಯೋಗೇಶ್‌ ಅಭಿನಯದ ಸೈನಿಕ ಸಿನಿಮಾದಿಂದ ದೊಡ್ಡ ಹೆಸರು ಮಾಡಿದರು..   

5 /8

ಮುಂದೆ ಸಿನಿಮಾಗಳಲ್ಲಿ ಬೇಡಿಕೆ ಕಡಿಮೆಯಾದ ಸಮಯದಲ್ಲಿ ನಟಿ ಸಾಕ್ಷಿ ಶಿವಾನಂದ್‌ ಅಮೇರಿಕಾಗೆ ಹೋಗಿ ಮ್ಯಾನೆಜ್‌ಮೆಂಟ್‌ ಕೋರ್ಸ್‌ ಮಾಡಿಕೊಂಡರು.. ಜೊತೆಗೆ ಸಾಗರ್‌ ಎಂಬುವರೊಂದಿಗೆ ತಮ್ಮ ಸಹಜೀವನ ನಡೆಸಿದರು.. ಆತನಿಗೆ ಆರ್ಥಿಕ ಸಹಾಯವನ್ನೂ ಮಾಡಿದರು..  

6 /8

ಆದರೆ ಆತ ನಟಿಯ ಹಣವನ್ನು ಮಾತ್ರ ಪ್ರೀತಿಸುತ್ತಿದ್ದ ಎನ್ನುವುದು ಆಕೆಗೆ ತಿಳದಿರಲಿಲ್ಲ.. ಕೆಲ ಸಮಯದ ನಂತರ ಈ ವಿಚಾರ ನಟಿಗೆ ಗೊತ್ತಾಗಿ ಅವರ ಆತನಿಂದ ದೂರವಾಗಿ ಅಮೇರಿಕಾದಲ್ಲಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಾ ಒಬ್ಬಂಟಿ ಜೀವನ ನಡೆಸುತ್ತಿದ್ದಾರೆ..   

7 /8

ಹೀಗೆ ಪ್ರೀತಿಸಿ ಮದುವೆಯಾದ ಗಂಡನಿಂದಲೇ ಮೋಸ ಹೋದ ಸಾಕ್ಷಿ ಶಿವಾನಂದ್‌ ಕೊನೆಯದಾಗಿನ ನಟಿಸಿದ್ದು, ರವಿಚಂದ್ರನ್‌ ಅಭಿನಯದ ಪರಮಶಿವ ಸಿನಿಮಾ..   

8 /8

ನಟಿ ಸಾಕ್ಷಿ ಶಿವಾನಂದ್‌ ಕನ್ನಡ ಮಾತ್ರವಲ್ಲದೇ ಹಲವಾರು ಭಾಷೆಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ.. ಒಟ್ಟು ಅವರು 25ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ.. ಇಂತಹ ಪ್ರತಿಭಾನ್ವಿತ ನಟಿ ಸಿನಿರಂಗದಿಂದ ದೂರವಾಗಿರೋದು ನಮ್ಮೆಲ್ಲರ ದುರಾದೃಷ್ಟ..