ಅಪಾಯದ ಅಂಚು ತಲುಪಿದೆ ಈ ಸ್ಟಾರ್‌ ಕ್ರಿಕೆಟಿಗನ ಕೆರಿಯರ್!‌ ಕಾಪಾಡೋಕು ಅಸಾಧ್ಯದ ಪರಿಸ್ಥಿತಿ ಕೋಚ್‌ ಗಂಭೀರ್ʼನದ್ದು

KL Rahul and Shreyas Iyer: ಚಾಂಪಿಯನ್ಸ್ ಟ್ರೋಫಿ 2025 ಎಲ್ಲಾ ತಂಡಗಳು ತಯಾರಿ ನಡೆಸುತ್ತಿರುವ ಮುಂದಿನ ಪ್ರಮುಖ ICC ಈವೆಂಟ್ ಆಗಿದೆ. ಪಾಕಿಸ್ತಾನವು ಮೆಗಾ-ಈವೆಂಟ್ ಅನ್ನು ಆಯೋಜಿಸಲಿದೆ ಎಂದು ಸದ್ಯದ ಮಟ್ಟಿಗೆ ಹೇಳಲಾಗುತ್ತಿದೆಯಾದರೂ, ಭಾರತದ ನಿರ್ಧಾರದ ಮೇಲೆ ಮುಂದಿನ ತೀರ್ಮಾನ ನಿಂತಿದೆ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

1 /8

ಚಾಂಪಿಯನ್ಸ್ ಟ್ರೋಫಿ 2025 ಎಲ್ಲಾ ತಂಡಗಳು ತಯಾರಿ ನಡೆಸುತ್ತಿರುವ ಮುಂದಿನ ಪ್ರಮುಖ ICC ಈವೆಂಟ್ ಆಗಿದೆ. ಪಾಕಿಸ್ತಾನವು ಮೆಗಾ-ಈವೆಂಟ್ ಅನ್ನು ಆಯೋಜಿಸಲಿದೆ ಎಂದು ಸದ್ಯದ ಮಟ್ಟಿಗೆ ಹೇಳಲಾಗುತ್ತಿದೆಯಾದರೂ, ಭಾರತದ ನಿರ್ಧಾರದ ಮೇಲೆ ಮುಂದಿನ ತೀರ್ಮಾನ ನಿಂತಿದೆ

2 /8

ಅದೇನೇ ಇದ್ದರೂ, ಪಂದ್ಯಾವಳಿಯನ್ನು ಹೇಗೆ ನಡೆಸಬೇಕು ಎಂಬುದನ್ನು ನಿರ್ಧರಿಸಲು ಕ್ರಿಕೆಟ್ ಮಂಡಳಿಗಳು ನಿರ್ಧರಿಸುತ್ತವೆ. ಆದರೆ ಗೌತಮ್ ಗಂಭೀರ್ʼಗೆ ಇದೀಗ ಚಾಂಪಿಯನ್ಸ್‌ ಟ್ರೋಫಿಗಾಗಿ 15 ಅತ್ಯುತ್ತಮ ಆಟಗಾರರನ್ನು ಸಿದ್ಧಪಡಿಸುವ ಜವಾಬ್ದಾರಿ ಇದೆ.  

3 /8

ಚಾಂಪಿಯನ್ಸ್ ಟ್ರೋಫಿಗೆ ಮೊದಲು ಭಾರತ ಕೇವಲ ಮೂರು ಏಕದಿನ ಪಂದ್ಯಗಳನ್ನು ಆಡುವುದು ಗಂಭೀರ್‌ʼಗೆ ದೊಡ್ಡ ಸವಾಲಾಗಿದೆ. ಹೀಗಾಗಿ ಏಕದಿನ ಪಂದ್ಯಗಳಲ್ಲಿ ತಮ್ಮ ಪಂದ್ಯದ ಪ್ರದರ್ಶನದ ಮೇಲೆ ಆಟಗಾರರನ್ನು ಆಯ್ಕೆ ಮಾಡುವುದು ಕೂಡ ಕಷ್ಟಕರವಾಗಿದೆ.  

4 /8

ರೋಹಿತ್ ಶರ್ಮಾ ಮತ್ತು ಶುಭಮನ್ ಗಿಲ್ ಚಾಂಪಿಯನ್ಸ್ ಟ್ರೋಫಿಗೆ ಆರಂಭಿಕ ಜೋಡಿಯಾಗಿ ಹೋದರೆ, ಬಲವಾದ ಆರಂಭ ಸಿಗುವ ಸಾಧ್ಯತೆ ಇದೆ. ಇನ್ನು ಇತ್ತೀಚೆಗಷ್ಟೇ ಮುಕ್ತಾಯಗೊಂಡ ಶ್ರೀಲಂಕಾ ವಿರುದ್ಧದ ಸರಣಿಯಲ್ಲೂ ಗಿಲ್ ಮತ್ತು ರೋಹಿತ್ ಜೋಡಿ ಹಿಟ್ ಆಗಿತ್ತು.  

5 /8

ಇನ್ನೊಂದೆಡೆ ರನ್ ಗಳಿಸಲು ಹೆಣಗಾಡುತ್ತಿರುವ ವಿರಾಟ್ ಕೊಹ್ಲಿ ತಂಡದ ಪ್ರಮುಖ ಭಾಗವಾಗಿದ್ದರೂ, ತಂಡದಲ್ಲಿ ಕೆಎಲ್ ರಾಹುಲ್ ಮತ್ತು ಶ್ರೇಯಸ್ ಅಯ್ಯರ್ ಸ್ಥಾನದ ಮೇಲೆ ಅನುಮಾನವಿದೆ. ಒಂದು ವೇಳೆ ಈ ಟೂರ್ನಿಯಿಂದಲೂ ಅಯ್ಯರ್‌ ಅವಕಾಶ ವಂಚಿತನಾದರೆ, ಮುಂದೆ ಟೀಂ ಇಂಡಿಯಾ ಪ್ರವೇಶ ಬಲುಕಷ್ಟ. ಅಷ್ಟೇ ಅಲ್ಲದೆ, ವೃತ್ತಿಜೀವನಕ್ಕೆ ಪೆಟ್ಟು ಬೀಳುವ ಸಾಧ್ಯತೆ ಇದೆ. ಇನ್ನು ಇವರಿಬ್ಬರಿಗೆ ರಿಷಬ್ ಪಂತ್ ಮತ್ತು ರಿಯಾನ್ ಪರಾಗ್ ಪ್ರಬಲ ಪೈಪೋಟಿ ನೀಡುತ್ತಿದ್ದಾರೆ. ಹೀಗಿರುವಾಗ ಇವರಿಬ್ಬರ ಸ್ಥಾನ ನೀರಮೇಲಿನ ಗುಳ್ಳೆಯಂತಿದೆ. ಯಾವಾಗ ಒಡೆದು ಹೋಗುವುದೋ ಅರಿಯದು.  

6 /8

ಇನ್ನು ಪರಾಗ್ ಬಗ್ಗೆ ಮಾತನಾಡುವುದಾದರೆ, ಈತ ಆಲ್ ರೌಂಡರ್ ಆಗಿ ಆಡುತ್ತಿರುವುದು ಮಾತ್ರವಲ್ಲ, ODI ಚೊಚ್ಚಲ ಪಂದ್ಯದಲ್ಲೇ ಬೌಲಿಂಗ್‌ʼನಿಂದ ಮೋಡಿ ಮಾಡಿದ್ದರು. ಹೀಗಿರುವಾಗ ಈ 15 ಸದಸ್ಯರ ತಂಡದ ಭಾಗವಾಗುವ ಸಾಧ್ಯತೆ ಇದೆ.  

7 /8

ಇನ್ನೊಂದೆಡೆ ಶ್ರೀಲಂಕಾ ಏಕದಿನ ಸರಣಿಯಲ್ಲಿ ಪ್ರಭಾವ ಬೀರುವಲ್ಲಿ ಯಶಸ್ವಿಯಾಗದ ಕಾರಣ ಶಿವಂ ದುಬೆ ಕೂಡ ಸ್ಥಾನ ಕಳೆದುಕೊಳ್ಳಬಹುದು. ಅಲ್ಲದೆ, ಹಾರ್ದಿಕ್ ಪಾಂಡ್ಯ ಮರಳಿ ಬರುವ ಸಾಧ್ಯತೆ ಇದೆ. ಇನ್ನೊಂದೆಡೆ ರವೀಂದ್ರ ಜಡೇಜಾ ಕಂಬ್ಯಾಕ್‌ʼಗೆ ಅಕ್ಷರ್ ಪಟೇಲ್ ಸ್ಥಾನ ಅಡ್ಡಿಯಾಗುವ ಎಲ್ಲಾ ಲಕ್ಷಣಗಳು ಕಾಣಿಸುತ್ತಿವೆ.  

8 /8

ಇನ್ನು ಬೌಲಿಂಗ್‌ʼನಲ್ಲಿ ಅರ್ಷ್‌ದೀಪ್ ಸಿಂಗ್, ಜಸ್ಪ್ರೀತ್ ಬುಮ್ರಾ ಮತ್ತು ಮೊಹಮ್ಮದ್ ಸಿರಾಜ್ ಮೂವರು ಪ್ರಮುಖ ಬೌಲರ್‌ʼಗಳಾಗಿದ್ದು, ಹರ್ಷಿತ್ ರಾಣಾ ಕೂಡ ಅವಕಾಶ ಪಡೆಯಬಹುದು ಎಂದು ನಿರೀಕ್ಷಿಸಲಾಗಿದೆ.