BUDGET 2020: ಆದಾಯ ತೆರಿಗೆ ಕಡಿತ; ₹ 5- 7.5 ಲಕ್ಷ ಆದಾಯಕ್ಕೆ 10% TAX

5 ಲಕ್ಷದಿಂದ 7.5 ಗಳಿಸುವವರು ಈವರೆಗೆ 20 ಪ್ರತಿಶತ ತೆರಿಗೆ ಪಾವತಿಸಬೇಕಾಗಿತ್ತು. ಈಗ ಶೇಕಡಾ 10 ರಷ್ಟು ಮಾಡಲಾಗಿದೆ.

Written by - Yashaswini V | Last Updated : Feb 1, 2020, 02:00 PM IST
BUDGET 2020: ಆದಾಯ ತೆರಿಗೆ ಕಡಿತ; ₹ 5- 7.5 ಲಕ್ಷ ಆದಾಯಕ್ಕೆ 10% TAX title=

ನವದೆಹಲಿ: ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು 2020-21ನೇ ಸಾಲಿನ ಸಂಸತ್ತಿನಲ್ಲಿ ಸಾಮಾನ್ಯ ಬಜೆಟ್ ಮಂಡಿಸಿದರು. ಹಣಕಾಸು ಸಚಿವರು ತಮ್ಮ ಬಜೆಟ್ ಭಾಷಣದಲ್ಲಿ ಸಮಾಜದ ಎಲ್ಲ ವರ್ಗದವರ ಬಗ್ಗೆ ದೊಡ್ಡ ಘೋಷಣೆಗಳನ್ನು ಮಾಡಿದ್ದಾರೆ. ಆದರೆ ಬಹುನಿರೀಕ್ಷಿತ ಘೋಷಣೆಯನ್ನು ಬಜೆಟ್ ಭಾಷಣದ ಸುಮಾರು 2 ಗಂಟೆಗಳ ನಂತರ ಮಾಡಲಾಯಿತು. ಅಭಿವೃದ್ಧಿಗೆ ತೆರಿಗೆ ರಚನೆಯಲ್ಲಿ ಹಲವು ಬದಲಾವಣೆಗಳನ್ನು ಮಾಡಲಾಗಿದೆ ಎಂದು ಹಣಕಾಸು ಸಚಿವರು ಹೇಳಿದರು.

ತೆರಿಗೆ ಪಾವತಿ ವಿಧಾಸ ಸರಳಗೊಳಿಸುವುದಾಗಿ ತೆರಿಗೆ ಸುಧಾರಣೆ ಮಂತ್ರ ಪಠಿಸಿದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಆದಾಯ ತೆರಿಗೆ ಕಡಿತ ಘೋಷಿಸಿದರು.

5 ಲಕ್ಷದವರೆಗಿನ ಆದಾಯ ಹೊಂದಿರುವವರಿಗೆ ಆದಾಯ ತೆರಿಗೆ ಮಿತಿಯಿಂದ ವಿನಾಯಿತಿ ನೀಡಲಾಗಿದೆ. ಅದೇ ಸಮಯದಲ್ಲಿ, 5 ಲಕ್ಷದಿಂದ 7.5 ರವರೆಗೆ ಆದಾಯ ಹೊಂದಿರುವ ಜನರು ಈವರೆಗೆ 20 ಪ್ರತಿಶತ ತೆರಿಗೆಯನ್ನು ಪಾವತಿಸಬೇಕಾಗಿತ್ತು. ಈಗ ಶೇಕಡಾ 10 ರಷ್ಟು ಮಾಡಲಾಗಿದೆ. ಇದಲ್ಲದೆ, 7.5 ಲಕ್ಷದಿಂದ 10 ಲಕ್ಷದವರೆಗಿನ ಆದಾಯ ಹೊಂದಿರುವ ಜನರು 15 ಪ್ರತಿಶತ ತೆರಿಗೆಯನ್ನು ಪಾವತಿಸಬೇಕಾಗುತ್ತದೆ. ಇದು ಮೊದಲು 20 ಪ್ರತಿಶತದಷ್ಟಿತ್ತು. ಅದೇ ಸಮಯದಲ್ಲಿ, 10 ಲಕ್ಷದಿಂದ 12.5 ರವರೆಗೆ ಆದಾಯ ಹೊಂದಿರುವ ಜನರ ಮೇಲೆ ತೆರಿಗೆ ವಿಧಿಸಲಾಯಿತು, ಅದು ಈಗ ಶೇಕಡಾ 20 ಆಗಿದೆ.

ಇದಲ್ಲದೆ, 12.5 ಲಕ್ಷದಿಂದ 15 ಲಕ್ಷದವರೆಗಿನ ಆದಾಯ ಹೊಂದಿರುವ ಜನರಿಗೆ 25 ಪ್ರತಿಶತದಷ್ಟು ತೆರಿಗೆ ವಿಧಿಸಲಾಗುವುದು, ಈ ಮೊದಲು ಅದು 30 ಪ್ರತಿಶತದಷ್ಟಿತ್ತು. 15 ಲಕ್ಷಕ್ಕಿಂತ ಹೆಚ್ಚಿನ ವಾರ್ಷಿಕ ಆದಾಯ ಹೊಂದಿರುವವರು 30 ಪ್ರತಿಶತ ತೆರಿಗೆಯನ್ನು ಪಾವತಿಸಬೇಕಾಗುತ್ತದೆ. ಅಂದರೆ, ಈ ಹೊಸ ತೆರಿಗೆ ಸ್ಲ್ಯಾಬ್‌ನಲ್ಲಿ ಅವರಿಗೆ ಯಾವುದೇ ವಿನಾಯಿತಿ ನೀಡಿಲ್ಲ.

 

Trending News