Budget 2020: ದೇಶದಲ್ಲಿ ರೈತರಿಗಾಗಿ ಚಲಿಸಲಿದೆ 'ಕಿಸಾನ್ ರೈಲ್'

ಕೇಂದ್ರ ಸರ್ಕಾರವು ರೈತರಿಗಾಗಿ ವಿಶೇಷ ರೈಲು ರೈಲು ಸೇವೆಯನ್ನು ಪ್ರಾರಂಭಿಸಲಿದೆ.

Written by - Yashaswini V | Last Updated : Feb 1, 2020, 12:28 PM IST
Budget 2020: ದೇಶದಲ್ಲಿ ರೈತರಿಗಾಗಿ ಚಲಿಸಲಿದೆ 'ಕಿಸಾನ್ ರೈಲ್'  title=

ನವದೆಹಲಿ: ದೇಶದ ರೈತರ ಹಿತದೃಷ್ಟಿಯಿಂದ ಅನೇಕ ಯೋಜನೆಗಳು ಬರುತ್ತಿವೆ. ಕೇಂದ್ರ ಸರ್ಕಾರವು ರೈತರಿಗಾಗಿ ವಿಶೇಷ ರೈಲು ಸೇವೆಯನ್ನು ಪ್ರಾರಂಭಿಸಲಿದೆ. ಈ ರೈತ ರೈಲು('ಕಿಸಾನ್ ರೈಲ್') ಸೇವೆಯಲ್ಲಿ ಶೈತ್ಯೀಕರಿಸಿದ ಬೋಗಿಗಳೂ ಇರಲಿವೆ.

ಕೇಂದ್ರ ಸರ್ಕಾರವು ದೇಶದ ರೈತರ ಆದಾಯವನ್ನು ದ್ವಿಗುಣಗೊಳಿಸಲು ಹಲವು ರೀತಿಯ ಕ್ರಮ ಕೈಗೊಳ್ಳುತ್ತಿದೆ. ಹೊಸ ಹಣಕಾಸು ವರ್ಷದಲ್ಲಿ ರೈತರಿಗಾಗಿ ವಿವಿಧ ಯೋಜನೆಗಳನ್ನು ಜಾರಿಗೆ ತರಲಾಗುವುದು ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಬಜೆಟ್ (ಬಜೆಟ್ 2020) ನಲ್ಲಿ ಪ್ರಕಟಿಸಿದ್ದಾರೆ. ಕೇಂದ್ರ ಸರ್ಕಾರವು 2022 ರ ವೇಳೆಗೆ ರೈತರ ಆದಾಯವನ್ನು ದ್ವಿಗುಣಗೊಳಿಸುತ್ತದೆ. ಈ ವರ್ಷದಿಂದ ಕಿಸಾನ್ ರೈಲು ಮತ್ತು ಕಿಸಾನ್ ಉಡಾನ್ ಯೋಜನೆ ಅನುಷ್ಠಾನಗೊಳಿಸುವ ಯೋಜನೆಯೂ ಇದೆ ಎಂದವರು ಬಜೆಟ್ ಭಾಷಣದಲ್ಲಿ ತಿಳಿಸಿದರು.

ಕೇಂದ್ರ ಹಣಕಾಸು ಸಚಿವರು ಬಜೆಟ್‌ನಲ್ಲಿ ರೈತರಿಗಾಗಿ...

  • ಸ್ಪರ್ಧಾತ್ಮಕ ಕೃಷಿಯ ಮೂಲಕ ರೈತರ ಸ್ಥಿತಿಯಲ್ಲಿ ಸುಧಾರಣೆ.
  • 2022 ರ ವೇಳೆಗೆ ರೈತರ ಆದಾಯವನ್ನು ದ್ವಿಗುಣಗೊಳಿಸುವ ಗುರಿ.
  • ಕೃಷಿಯನ್ನು ಸುಧಾರಿಸುವ ಅಗತ್ಯವಿದೆ.
  • ಕೇಂದ್ರ ನಿಯಮಗಳ ಆಧಾರದ ಮೇಲೆ ಕೃಷಿ ರಾಜ್ಯಗಳಿಗೆ ಪ್ರೋತ್ಸಾಹ.
  • ಗ್ರಾಮೀಣ ರಸ್ತೆ ಯೋಜನೆ ರೈತರ ಆದಾಯವನ್ನು ಹೆಚ್ಚಿಸಲಿದೆ.
  • ನೀರಾವರಿ ಕಡೆಗೆ ಸರ್ಕಾರದ ಗಮನ.
  • ಕುಸುಮ್ ಯೋಜನೆ ಎಲ್ಲರಿಗೂ ವಿದ್ಯುತ್ ಒದಗಿಸಲಿದೆ.
  • ನೀರಿನ ಸಂಬಂಧಿತ ಸಮಸ್ಯೆ ತುಂಬಾ ಗಂಭೀರವಾಗಿದೆ.
  • ಸೌರ ಪಂಪ್ ಸ್ಥಾಪಿಸಲು ಸಹಾಯ ಮಾಡುತ್ತದೆ.
  • ಖಾಲಿ ಇರುವ ಭೂಮಿಯಲ್ಲಿ ಸೌರ ಸ್ಥಾವರ ಹಾಕಲು ಸಹಾಯ ನೀಡಲಾಗುವುದು.
  • ಇದನ್ನು ಸೌರ ಗ್ರಿಡ್‌ಗೆ ಸಂಪರ್ಕಿಸಲಾಗುವುದು.
  • 22 ಲಕ್ಷ ರೈತರು ಸೌರ ಪಂಪ್‌ನಿಂದ ಪ್ರಯೋಜನ ಪಡೆಯುತ್ತಾರೆ.
  • ರೈತರಿಗೆ 16 ಪಾಯಿಂಟ್ ಕಾರ್ಯಕ್ರಮ.
  • ಬ್ಲಾಕ್ ಮತ್ತು ತಹಸಿಲ್ ಮಟ್ಟದಲ್ಲಿ ಗೋದಾಮು ನಿರ್ಮಿಸಲು ಸರ್ಕಾರ ಸಹಾಯ ಮಾಡುತ್ತದೆ.
  • ಗೋದಾಮು ಎಫ್‌ಸಿಐ ಮತ್ತು ವೇರ್‌ಹೌಸ್ ಕಾರ್ಪೊರೇಶನ್‌ನ ಅಡಿಯಲ್ಲಿರುತ್ತದೆ ಮತ್ತು ಮುದ್ರಾ ಯೋಜನೆಯಿಂದ ಸುಲಭ ಸಾಲ ಲಭ್ಯವಿರುತ್ತದೆ.
  • ಕೃಷಿ ಉಡಾನ್ ಯೋಜನೆ ಪ್ರಾರಂಭವಾಗಲಿದೆ.
  • ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಯೋಜನೆ ನಡೆಯಲಿದೆ.
  • ಕೃಷಿ ಇಳುವರಿಯನ್ನು ಹೆಚ್ಚಿಸಲು One Product-One District ಯೋಜನೆ.

Trending News