ಭಾರತದಿಂದ ಕೆ -4 ಜಲಾಂತರ್ಗಾಮಿ ಬ್ಯಾಲಿಸ್ಟಿಕ್ ಕ್ಷಿಪಣಿ ಯಶಸ್ವಿ ಪರೀಕ್ಷೆ

ಜಲಾಂತರ್ಗಾಮಿ ನೌಕೆಗಳಿಂದ ಶತ್ರುಗಳ ಗುರಿಯನ್ನು ಹೊಡೆಯುವ ಸಾಮರ್ಥ್ಯವನ್ನು ಮತ್ತಷ್ಟು ಬಲಪಡಿಸುವತ್ತ ಹೆಜ್ಜೆ ಇಟ್ಟಿರುವ ಭಾರತ, ಆಂಧ್ರಪ್ರದೇಶದ ಕರಾವಳಿಯಲ್ಲಿ 3,500 ಕಿ.ಮೀ ಸ್ಟ್ರೈಕ್ ರೇಂಜ್ ಪರಮಾಣು ಸಾಮರ್ಥ್ಯದ ಕೆ -4 ಜಲಾಂತರ್ಗಾಮಿ ಉಡಾವಣೆಯ ಬ್ಯಾಲಿಸ್ಟಿಕ್ ಕ್ಷಿಪಣಿಯನ್ನು ಭಾನುವಾರ ಯಶಸ್ವಿಯಾಗಿ ಪರೀಕ್ಷಿಸಿತು.

Last Updated : Jan 19, 2020, 11:23 PM IST
 ಭಾರತದಿಂದ ಕೆ -4 ಜಲಾಂತರ್ಗಾಮಿ ಬ್ಯಾಲಿಸ್ಟಿಕ್ ಕ್ಷಿಪಣಿ ಯಶಸ್ವಿ ಪರೀಕ್ಷೆ title=
ಸಾಂದರ್ಭಿಕ ಚಿತ್ರ

ನವದೆಹಲಿ: ಜಲಾಂತರ್ಗಾಮಿ ನೌಕೆಗಳಿಂದ ಶತ್ರುಗಳ ಗುರಿಯನ್ನು ಹೊಡೆಯುವ ಸಾಮರ್ಥ್ಯವನ್ನು ಮತ್ತಷ್ಟು ಬಲಪಡಿಸುವತ್ತ ಹೆಜ್ಜೆ ಇಟ್ಟಿರುವ ಭಾರತ, ಆಂಧ್ರಪ್ರದೇಶದ ಕರಾವಳಿಯಲ್ಲಿ 3,500 ಕಿ.ಮೀ ಸ್ಟ್ರೈಕ್ ರೇಂಜ್ ಪರಮಾಣು ಸಾಮರ್ಥ್ಯದ ಕೆ -4 ಜಲಾಂತರ್ಗಾಮಿ ಉಡಾವಣೆಯ ಬ್ಯಾಲಿಸ್ಟಿಕ್ ಕ್ಷಿಪಣಿಯನ್ನು ಭಾನುವಾರ ಯಶಸ್ವಿಯಾಗಿ ಪರೀಕ್ಷಿಸಿತು.

ಹಗಲಿನ ವೇಳೆಯಲ್ಲಿ ಸಮುದ್ರದಲ್ಲಿನ ನೀರೊಳಗಿನಿಂದ ಪರೀಕ್ಷಾ ಗುಂಡಿನ ದಾಳಿ ನಡೆಸಲಾಗಿದೆ ಎಂದು ಸರ್ಕಾರದ ಮೂಲಗಳು ತಿಳಿಸಿವೆ. ಭಾರತ ನಿರ್ಮಿಸುತ್ತಿರುವ ಅರಿಹಂತ್ ಕ್ಲಾಸ್ ಪರಮಾಣು ಜಲಾಂತರ್ಗಾಮಿ ನೌಕೆಗಳ ಮೇಲೆ ನಿಯೋಜಿಸಲಾಗಿರುವ ಈ ಕ್ಷಿಪಣಿಯನ್ನು ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ) ಅಭಿವೃದ್ಧಿಪಡಿಸಿದೆ.

ಪರಮಾಣು ಜಲಾಂತರ್ಗಾಮಿ ನೌಕೆಗಳಲ್ಲಿ ಸಜ್ಜುಗೊಳ್ಳಲು ಸಿದ್ಧವಾಗುವ ಮುನ್ನ ಭಾರತವು ಕ್ಷಿಪಣಿಯ ಹೆಚ್ಚಿನ ಪರೀಕ್ಷೆಗಳನ್ನು ನಡೆಸುವ ನಿರೀಕ್ಷೆಯಿದೆ. ಈ ಸಮಯದಲ್ಲಿ, ಮೊದಲ ಪರಮಾಣು ದೋಣಿ ಐಎನ್‌ಎಸ್ ಅರಿಹಂತ್ ಮಾತ್ರ ನೌಕಾಪಡೆಗೆ ಕಾರ್ಯನಿರ್ವಹಿಸುತ್ತಿದೆ. ಭಾರತವು ತನ್ನ ಜಲಾಂತರ್ಗಾಮಿ ಶಕ್ತಿಗಾಗಿ ಅಭಿವೃದ್ಧಿಪಡಿಸುತ್ತಿರುವ ಎರಡು ನೀರೊಳಗಿನ ಕ್ಷಿಪಣಿಗಳಲ್ಲಿ ಕೆ -4 ಒಂದು. ಇನ್ನೊಂದು 700 ಕಿಲೋಮೀಟರ್‌ಗಿಂತ ಹೆಚ್ಚಿನ ಸ್ಟ್ರೈಕ್ ರೇಂಜ್ ಬಿಒ -5. ನ್ನು ಹೊಂದಿದೆ ಎನ್ನಲಾಗಿದೆ.

Trending News