/kannada/photo-gallery/shikanji-buttermilk-is-helpful-in-dissolving-stubborn-obesity-around-the-waist-249358 ಒಂದು ಗ್ಲಾಸ್‌ ಮಜ್ಜಿಗೆಗೆ ಈ ಪದಾರ್ಥ ಬೆರೆಸಿ ಕುಡಿಯಿರಿ ಸಾಕು: ಸೊಂಟದ ಸುತ್ತ ತುಂಬಿರುವ ಹಠಮಾರಿ ಬೊಜ್ಜು ಮಂಜು ಕರಗಿದಂತೆ ಕರಗುತ್ತೆ! ಒಂದು ಗ್ಲಾಸ್‌ ಮಜ್ಜಿಗೆಗೆ ಈ ಪದಾರ್ಥ ಬೆರೆಸಿ ಕುಡಿಯಿರಿ ಸಾಕು: ಸೊಂಟದ ಸುತ್ತ ತುಂಬಿರುವ ಹಠಮಾರಿ ಬೊಜ್ಜು ಮಂಜು ಕರಗಿದಂತೆ ಕರಗುತ್ತೆ! 249358

ನಟ ರಿತೇಶ್ ದೇಶಮುಖ್- ಪತ್ನಿ ಜೆನಿಲಿಯಾ ಬಾಳಲ್ಲಿ ದೊಡ್ಡ ನಿರ್ಧಾರ! ಮಾದರಿ ಜೋಡಿ ಎನಿಸಿಕೊಂಡಿದ್ದವರು ತೆಗೆದುಕೊಂಡ ತೀರ್ಮಾನವೇನು?

Riteish Deshmukh Genelia Deshmukh: ರಿತೇಶ್ ದೇಶ್‌ಮುಖ್ ಮತ್ತು ಜೆನಿಲಿಯಾ ಸಾಮಾಜಿಕ ಮಾಧ್ಯಮದಲ್ಲಿ ಸಕಾರಾತ್ಮಕ ವಿಷಯಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಅಂದಹಾಗೆ ಇದೀಗ ಈ ಜೋಡಿ ತಮ್ಮ ಅಂಗಾಂಗಗಳನ್ನು ದಾನ ಮಾಡಲು ನಿರ್ಧರಿಸಿದ್ದಾರೆ.

Written by - Bhavishya Shetty | Last Updated : Jul 8, 2024, 04:13 PM IST
    • ರಿತೇಶ್ ದೇಶ್ಮುಖ್ ಮತ್ತು ಜೆನಿಲಿಯಾ ದೇಶಮುಖ್ ಸಿನಿರಂಗದಲ್ಲಿ ಆದರ್ಶ ದಂಪತಿ ಎಂದೇ ಪ್ರಸಿದ್ಧಿ
    • ಆದರ್ಶ ನಿರ್ಧಾರ ತೆಗೆದುಕೊಂಡು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದ್ದಾರೆ
    • ಈ ಜೋಡಿ ತಮ್ಮ ಅಂಗಾಂಗಗಳನ್ನು ದಾನ ಮಾಡಲು ನಿರ್ಧರಿಸಿದ್ದಾರೆ
ನಟ ರಿತೇಶ್ ದೇಶಮುಖ್- ಪತ್ನಿ ಜೆನಿಲಿಯಾ ಬಾಳಲ್ಲಿ ದೊಡ್ಡ ನಿರ್ಧಾರ! ಮಾದರಿ ಜೋಡಿ ಎನಿಸಿಕೊಂಡಿದ್ದವರು ತೆಗೆದುಕೊಂಡ ತೀರ್ಮಾನವೇನು? title=
Ritesh Deshmukh-Genelia

Riteish Deshmukh Genelia Deshmukh: ನಟ ರಿತೇಶ್ ದೇಶ್ಮುಖ್ ಮತ್ತು ಅವರ ಪತ್ನಿ ನಟಿ ಜೆನಿಲಿಯಾ ದೇಶಮುಖ್ ಸಿನಿರಂಗದಲ್ಲಿ ಆದರ್ಶ ದಂಪತಿ ಎಂದೇ ಪ್ರಸಿದ್ಧಿ ಪಡೆದಿದ್ದಾರೆ. ಇದೀಗ ಈ ಆದರ್ಶ ದಂಪತಿ ಆದರ್ಶ ನಿರ್ಧಾರ ತೆಗೆದುಕೊಂಡು, ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದ್ದಾರೆ.

ರಿತೇಶ್ ದೇಶ್‌ಮುಖ್ ಮತ್ತು ಜೆನಿಲಿಯಾ ಸಾಮಾಜಿಕ ಮಾಧ್ಯಮದಲ್ಲಿ ಸಕಾರಾತ್ಮಕ ವಿಷಯಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಅಂದಹಾಗೆ ಇದೀಗ ಈ ಜೋಡಿ ತಮ್ಮ ಅಂಗಾಂಗಗಳನ್ನು ದಾನ ಮಾಡಲು ನಿರ್ಧರಿಸಿದ್ದಾರೆ.

ಇದನ್ನೂ ಓದಿ: ತನಗಿಂತ 10 ವರ್ಷ ಹಿರಿಯ ಯುವತಿ ಜೊತೆ ಅಭಿಷೇಕ್ ಶರ್ಮಾ ಡೇಟಿಂಗ್!? ಟೀಂ ಇಂಡಿಯಾ ಜೊತೆ ಸಂಬಂಧ ಹೊಂದಿದ ಈಕೆ ಬೇರಾರು ಅಲ್ಲ…

“ಯಾರಿಗಾದರೂ ಜೀವನದ ಉಡುಗೊರೆಗಿಂತ ದೊಡ್ಡ ಉಡುಗೊರೆ ಬೇರೊಂದಿಲ್ಲ” ಎಂದು ಇಬ್ಬರು ವಿಡಿಯೋ ಹಂಚಿಕೊಂಡಿದ್ದಾರೆ.

ರಾಷ್ಟ್ರೀಯ ಅಂಗ ಮತ್ತು ಅಂಗಾಂಶ ಕಸಿ ಸಂಸ್ಥೆ (NOTTO) ರಿತೇಶ್ ಮತ್ತು ಜೆನಿಲಿಯಾ ಅವರ ಈ ವೀಡಿಯೊವನ್ನು ಹಂಚಿಕೊಂಡಿದ್ದು, ಇಬ್ಬರಿಗೂ ಧನ್ಯವಾದ ಸಲ್ಲಿಸಿ, ಅವರ ನಿರ್ಧಾರವನ್ನು ಶ್ಲಾಘಿಸಿದೆ.

"ಬಾಲಿವುಡ್ ಸ್ಟಾರ್ ಜೋಡಿಗಳಾದ ರಿತೇಶ್ ಮತ್ತು ಜೆನಿಲಿಯಾ ತಮ್ಮ ಅಂಗಾಂಗಗಳನ್ನು ದಾನ ಮಾಡಲು ನಿರ್ಧರಿಸಿದ್ದಾರೆ. ಅವರಿಗೆ ನಾವು ತುಂಬಾ ಕೃತಜ್ಞರಾಗಿರುತ್ತೇವೆ. ಅಂಗಾಂಗ ದಾನದ ಹೆಜ್ಜೆ ಈ ಉದಾತ್ತ ಕಾರ್ಯಕ್ಕೆ ಸೇರಲು ಹೊಸ ಸ್ಫೂರ್ತಿಯಾಗಿದೆ" ಎಂದು NOTTO ಸಂಸ್ಥೆ ಹೇಳಿದೆ.

ಇದನ್ನೂ ಓದಿ: ನಾನು ಶತಕ ಬಾರಿಸಲು ಬಳಸಿದ್ದು ಈ ಕ್ರಿಕೆಟಿಗನ ಬ್ಯಾಟ್: ಯಶಸ್ಸಿನ ರಹಸ್ಯ ಬಿಚ್ಚಿಟ್ಟ ಅಭಿಷೇಕ್ ಶರ್ಮಾ

ರಿತೇಶ್ ಹಲವು ವರ್ಷಗಳ ಹಿಂದೆಯೇ ಅಂಗಾಂಗ ದಾನ ಮಾಡಲು ಬಯಸಿದ್ದರು. ಈ ಕೆಲಸದಲ್ಲಿ ಅವರಿಗೆ ಪತ್ನಿ ಜೆನಿಲಿಯಾ ಬೆಂಬಲ ನೀಡಿದ್ದಾರೆ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ