ಕಂಪ್ಯೂಟರ್ ಬಳಕೆದಾರರೇ ಈ ಕೆಲಸ ಇಂದೇ ಮಾಡಿ..ಇಲ್ಲದಿದ್ದರೆ ಅಪಾಯ ಕಟ್ಟಿಟ್ಟ ಬುತ್ತಿ

ಖ್ಯಾತ ವೆಬ್ ಬ್ರೌಸರ್ FIREFOX ತನ್ನ ಬ್ರೌಸರ್ ನಲ್ಲಿ ಒಂದು ವಿಶೇಷ ಬದಲಾವಣೆ ಮಾಡಿದೆ. US ಸೈಬರ್ ಸೆಕ್ಯೂರಿಟಿ ಅಂಡ್ ಇನ್ಫ್ರಾಸ್ಟ್ರಕ್ಚರ್ ಸೆಕ್ಯೂರಿಟಿ ಏಜೆನ್ಸಿ ಝೀರೋ ಡೇ ವಲ್ನೆರೆಬೇಲಿಟಿ ಅನ್ವಯ ನೀವು ನಿಮ್ಮ ಬ್ರೌಸರ್ ಅನ್ನು ಇಂದೇ ಅಪ್ಡೇಟ್ ಮಾಡಿ ಎಂದು ಸೂಚನೆ ನೀಡಿದೆ.

Last Updated : Jan 10, 2020, 08:38 PM IST
ಕಂಪ್ಯೂಟರ್ ಬಳಕೆದಾರರೇ ಈ ಕೆಲಸ ಇಂದೇ ಮಾಡಿ..ಇಲ್ಲದಿದ್ದರೆ ಅಪಾಯ ಕಟ್ಟಿಟ್ಟ ಬುತ್ತಿ title=

ಒಂದು ವೇಳೆ ನೀವು ಕೂಡ ನಿಮ್ಮ ಡೆಸ್ಕ್ ಟಾಪ್ ಬ್ರೌಸರ್ ಆಗಿ ಮೊಜಿಲ್ಲಾ ಫೈರ್ ಫಾಕ್ಸ್ ಬಳಸುತ್ತಿದ್ದಾರೆ ಎಚ್ಚೆತ್ತುಕೊಳ್ಳಿ ಮತ್ತು ಶೀಘ್ರದಲ್ಲಿಯೇ ನಿಮ್ಮ ಬ್ರೌಸರ್ ಅಪ್ಡೇಟ್ ಮಾಡಿಕೊಳ್ಳಿ. ಒಂದು ವೇಳೆ ಇದನ್ನು ನೀವು ಮಾಡದೆ ಹೋದಲ್ಲಿ ಸೈಬರ್ ಅಟ್ಯಾಕ್ ಮಾಡುವವರು ಸಿಸ್ಟಂ ಮೇಲಿನ ನಿಮ್ಮ ನಿಯಂತ್ರಣ ತಪ್ಪಿಸಲಿದ್ದಾರೆ. ಹೀಗಾಗಿ ಮೊದಲು ನಿಮ್ಮ ಡೆಸ್ಕ್ ಟಾಪ್ ನಲ್ಲಿರುವ ಫೈರ್ ಫಾಕ್ಸ್ ಅನ್ನು ಹೊಚ್ಚ ಹೊಸ 72.0.1 ಆವೃತ್ತಿಗೆ ಅಪ್ಡೇಟ್ ಮಾಡಿ. ಲೈಫ್ ಹ್ಯಾಕರ್ ಪೋರ್ಟಲ್ ನಲ್ಲಿ ಪ್ರಕಟಗೊಂಡ ವರದಿಯೊಂದರ ಪ್ರಕಾರ US ಸೈಬರ್ ಸೆಕ್ಯೂರಿಟಿ ಅಂಡ್ ಇನ್ಫ್ರಾಸ್ಟ್ರಕ್ಚರ್ ಸೆಕ್ಯೂರಿಟಿ ಏಜೆನ್ಸಿ ಝೀರೋ ಡೇ ವಲ್ನೆರೆಬೇಲಿಟಿ ಅನ್ವಯ ನೀವು ನಿಮ್ಮ ಬ್ರೌಸರ್ ಅನ್ನು ಇಂದೇ ಅಪ್ಡೇಟ್ ಮಾಡಿ ಎಂದು ಸೂಚನೆ ನೀಡಿದೆ.

ಕಳೆದ ಮಂಗಳವಾರ ಮೊಜಿಲ್ಲಾ ತನ್ನ ಹೊಸ ಆವೃತ್ತಿಯನ್ನು ಬಿಡುಗಡೆ ಮಾಡಿದೆ. ಈ ಕುರಿತು ಹೇಳಿಕೆ ಬಿಡುಗಡೆ ಮಾಡಿರುವ ಸಂಸ್ಥೆ  ಹ್ಯಾಕರ್ ಗಳು ಈ ಕಾರ್ಯ ನಡೆಸಿದ್ದಾರೆ ಎಂಬುದು ನಮಗೆ ತಿಳಿದುಬಂದಿದೆ ಎಂದು ಹೇಳಿದೆ. ಆದರೆ, ವಿಶ್ವಾದ್ಯಂತ ಎಷ್ಟು ಬಳಕೆದಾರರು ಹ್ಯಾಕರ್ ಗಳ ಬಲೆಗೆ ಬೀಳಲಿದ್ದಾರೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಜೀರೋ ಡೇ ವಲ್ನರೆಬಿಲಿಟಿ ಒಂದು ಸೆಕ್ಯೂರಿಟಿ ವಲ್ನರೆಬಿಲಿಟಿ ಆಗಿದ್ದು, ಇದು ಯಾವುದೇ ಪ್ರಾಡಕ್ಟ್ ಆಗಿರದೆ ದಾಳಿ ನಡೆಸುವವರು ಇದನ್ನು ಭಯಪಡಿಸಲು ಉಪಯೋಗಿಸುತ್ತಾರೆ. 

ಹೀಗೆ ಅಪ್ಡೇಟ್ ಮಾಡಿ
- ಮೊದಲು 'hamburge' ಐಕಾನ್ ನ ಮೇಲೆ ಬಲಭಾಗಕ್ಕೆ ನೀಡಲಾಗಿರುವ ಮೂರು ಡಾಟ್ (...)ಗಳ ಮೇಲೆ ಕ್ಲಿಕ್ಕಿಸಿ.
- ಬಳಿಕ HELP ಗುಂಡಿಯನ್ನು ಕ್ಲಿಕ್ಕಿಸಿ. ವಿಂಡೋಸ್ ಬಳಸುವ ಬಳಕೆದಾರರು ABOUT FIREFOX ಆಯ್ಕೆ ಮಾಡಿ ಇದನ್ನು ಮಾಡಬಹುದು.
- ಒಂದು ವೇಳೆ ನೀವು MAC ಬಳಕೆದಾರರಾಗಿದ್ದಲ್ಲಿ ಮೆನ್ಯು ಬಾರ್ ನಲ್ಲಿ ಕೇವಲ FIREFOX ಮೇಲೆ ಕ್ಲಿಕ್ಕಿಸಿ, ABOUT FIREFOX ಆಯ್ಕೆ ಮಾಡಿ.
- ಇಲ್ಲಿ ಸೂಚಿಸಿರುವುದನ್ನು ಮಾಡಿದ ಬಳಿಕ ನಿಮ್ಮ ಮುಂದೆ RESTART TO UPDATE FIREFOX ಆಯ್ಕೆ ಪ್ರಕಟವಾಗಲಿದೆ. ಅದರ ಮೇಲೆ ಕ್ಲಿಕ್ಕಿಸಿ.

ಸೈಬರ್ ದಾಳಿ ನಡೆಸುವವರು ಯಾವ ರೀತಿಯ ಸಿಸ್ಟಂಗಳನ್ನು ಗುರಿಯಾಗಿಸಲಿದ್ದಾರೆ ಎಂಬುದರ ಕುರಿತು ಮೊಜಿಲ್ಲಾ ಹೆಚ್ಚಿನ ಮಾಹಿತಿ ನೀಡಿಲ್ಲ. 17 ವರ್ಷಗಳಷ್ಟು ಹಳೆಯದಾದ ಈ ಬ್ರೌಸರ್ ವಿಂಡೋಸ್ 7 ಅಥವಾ ಅದಕ್ಕಿಂತ ಹೆಚ್ಚಿನ ಆವೃತ್ತಿಯಲ್ಲಿ, macOS ಹಾಗೂ LINUX ಪ್ಲಾಟ್ಫಾರಂಗಳ ಮೇಲೆ ಲಭ್ಯವಿದೆ. ಮೊಜಿಲ್ಲಾ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ ಹೊಸ ಆವೃತ್ತಿಯ ಲಿಂಕ್ ಮೇಲೆ ಕ್ಲಿಕ್ಕಿಸಲು ಸಂಸ್ಥೆ ಹೇಳಿದೆ. ಇದರಿಂದ ಮಾಲವೇರ್ ಹಾಗೂ ಇತರೆ ಅಪಾಯದಿಂದ ನೀವು ನಿಮ್ಮ ಸಿಸ್ಟಂ ಅನ್ನು ಕಾಪಾಡಬಹುದು.

Trending News