T20 World Cup 2024: T20 ವಿಶ್ವಕಪ್ 2024 ಗೆದ್ದು ಭಾರತ ಕಲಿಗಳು ಗುರುವಾರ ಮುಂಜಾನೆ ದೆಹಲಿಗೆ ಬಂದಿಳಿದಿದ್ದಾರೆ. ಚಾಣಕ್ಯಪುರಿಯಲ್ಲಿರುವ ITC ಮೌರ್ಯ ಹೋಟೆಲ್ ಭಾರತ ಆಟಗಾರರಿಗೆ ಅದ್ದೂರಿ ಸ್ವಾಗತ ನೀಡಿದೆ. ಟ್ರೋಫಿಯಂತೆ ರೂಪುಗೊಂಡ ಕೇಕ್ ಕಟ್ ಮಾಡುವ ಮೂಲಕ ಸಂಭ್ರಾಮಾಚರಣೆ ಮಾಡಿದೆ.
13 ವರ್ಷಗಳ ದೀರ್ಘ ಹೋರಾಟದ ನಂತರ ಟೀಂ ಇಂಡಿಯಾ ಕಪ್ ಗೆದ್ದು ಭಾರತಕ್ಕೆ ಹಿಂದಿರುಗಿದೆ. ಇದೇ ಖುಷಿಯೊಂದಿಗೆ ITC ಹೋಟೆಲ್ ಆಟಗಾರರೊಂದಿಗೆ ಸಂಭ್ರಾಚರಣೆ ಮಾಡಲು ವಿಶೆಷ ಕೇಕ್ ವಿನ್ಯಾಸಗೊಳಿಸಿದೆ.
ಇನ್ನೂ ಈ ಕೇಕ್ ಅನ್ನು ಟೀಂ ಇಂಡಿಯಾದ ಜೆರ್ಸಿ ಹಾಗೂ ಟ್ರೋಫಿಯಂತಹ ಚಿಕ್ಕ ಚಿಕ್ಕ ಡಿಟೇಲ್ಸ್ ಅನ್ನು ಒಳಗೊಂಡ ಅದ್ಭುತ ಕೇಕ್ ಅನ್ನು ವಿನ್ಸಾಸ ಮಾಡಲಾಗಿದೆ. ಕೇಕ್ ಜೊತೆಗೆ, ರಾಷ್ಟ್ರೀಯ ತ್ರಿವರ್ಣ ಧ್ವಜವನ್ನು ಪ್ರತಿಬಿಂಬಿಸುವ ಸ್ವಾಗತ ಪಾನೀಯಗಳನ್ನು ಕೂಡ ಜೋಡಿಸಲಾಗಿತ್ತು, ಆಟಗಾರರು ಮತ್ತು ಸಹಾಯಕ ಸಿಬ್ಬಂದಿಗೆ ಸಂಭ್ರಮದ ವಾತಾವರಣವನ್ನು ಇವು ಹೆಚ್ಚಿಸಿತು.
ಇದನ್ನೂ ಓದಿ: ನಾಳೆ ಬಾರ್ಬಡೋಸ್ನಿಂದ ಭಾರತಕ್ಕೆ ಮರಳಲಿದ್ದಾರೆ ಬ್ಯೂ ಬಾಯ್ಸ್..!
ಐಟಿಸಿ ಮೌರ್ಯ ಅವರ ಬಾಣಸಿಗ ಶಿವನೀತ್ ಪಹೋಜಾ ಅವರು ಟೀಮ್ ಇಂಡಿಯಾಕ್ಕಾಗಿ ಸಿದ್ಧಪಡಿಸಿದ ವಿಶೇಷ ಕೇಕ್ ಇದಾಗಿತ್ತು. ಐಟಿಸಿ ಮೌರ್ಯ ಕಾರ್ಯನಿರ್ವಾಹಕ ಬಾಣಸಿಗ, ಶಿವನೀತ್ ಪಹೋಜಾ, "ಕೇಕ್ ತಂಡದ ಜೆರ್ಸಿಯ ಬಣ್ಣದಲ್ಲಿದೆ. ಇದರ ಪ್ರಮುಖ ಅಂಶವೆಂದರೆ ಈ ಟ್ರೋಫಿ, ಇದು ನಿಜವಾದ ಟ್ರೋಫಿಯಂತೆ ಕಾಣಿಸಬಹುದು ಆದರೆ ಇದನ್ನು ಚಾಕೊಲೇಟ್ನಿಂದ ಮಾಡಲಾಗಿದೆ ಎಂದು ತಾವು ಮಾಡಿದ ಕೇಕ್ ಬಗ್ಗೆ ಮಾಹಿತಿ ಹಂಚಿಕೊಂಡರು.
ಐಟಿಸಿ ಮೌರ್ಯ ಹೋಟೆಲ್ನಲ್ಲಿ ಅವರ ಅಲ್ಪಾವಧಿಯ ವಾಸ್ತವ್ಯದ ನಂತರ, ಟೀಮ್ ಇಂಡಿಯಾ ದೆಹಲಿಯ ಪ್ರಧಾನಿ ನರೇಂದ್ರ ಮೋದಿ ಅವರ ನಿವಾಸದಲ್ಲಿ ಅವರನ್ನು ಭೇಟಿ ಮಾಡಲು ಸಿದ್ಧವಾಗಿದೆ, ನಂತರ ನಾರಿಮನ್ ಪಾಯಿಂಟ್ನಿಂದ ಐಕಾನಿಕ್ ವಾಂಖೆಡೆ ಸ್ಟೇಡಿಯಂಗೆ ತೆರೆದ ಬಸ್ನಲ್ಲಿ ವಿಜಯೋತ್ಸವದ ಮೆರವಣಿಗೆಗಾಗಿ ಮುಂಬೈಗೆ ಪ್ರಯಾಣಿಸಲಿದೆ.
VIDEO | A cake in the shape of #T20WorldCup trophy is being readied to be cut by Team India players at ITC Maurya Hotel in #Delhi.
(Source: Third Party) pic.twitter.com/B9Ul7nphWV
— Press Trust of India (@PTI_News) July 4, 2024
#WATCH | Preparations underway at ITC Maurya to welcome Men's Indian Cricket Team, after winning the #T20WorldCup2024 trophy.
India defeated South Africa by 7 runs on June 29, in Barbados. pic.twitter.com/y4Ldw1kKVD
— ANI (@ANI) July 4, 2024
#WATCH | Delhi: Executive chef at ITC Maurya, Chef Shivneet Pahoja says, "The cake is in the colour of the Team's jersey. Its highlight is this trophy, it may look like an actual trophy but this is made out of chocolate...This is our welcome to the winning team...We have arranged… https://t.co/W0vwpDrCTZ pic.twitter.com/Hz5C7NPF1T
— ANI (@ANI) July 4, 2024
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.