IND W vs SA W ODI: 2024ರ ಐಸಿಸಿ ಚಾಂಪಿಯನ್ ಶಿಪ್ ಪಂದ್ಯ ಬುಧವಾರ ಜೂನ್, 19 ರಂದು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಿತು. ಉಭಯ ತಂಡಗಳ ಕಾದಾಟದಲ್ಲಿ ಭಾರತ ವನಿತೆಯರ ಪಡೆ ಹರಿಣಗಳ ವಿರುದ್ಧ ಗೆದ್ದು ಬೀಗಿದೆ.
ಮೂರು ಪಂದ್ಯಗಳ ಸರಣಿ ಇದಾಗಿದ್ದು ಈಗಾಗಲೇ ಭಾರತ ತಂಡ 2-0 ಅಂಕಗಳ ಅಂತರದಿಂದ ಮುನ್ನಡೆ ಕಾಯ್ದುಕೊಂಡಿದೆ. ಭಾರತ ತಂಡ ಮೊದಲ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡದ ಆಟಗಾರರ ಬೆವರಿಳಿಸಿ ಭರ್ಜರಿ ಗೆಲುವು ಸಾಧಿಸಿತ್ತು. ಇದೀಗ ಎರಡನೇ ಪಂದ್ಯದಲ್ಲೂ ಎದುರಾಳಿ ತಂಡವನ್ನು ಭಾರತ ವನಿತೆಯರ ಪಡೆ ಮಣಿಸುವಲ್ಲಿ ಯಶಸ್ವಿಯಾಗಿದೆ.
ಬುಧವಾರ ನಡೆದ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡ ಭಾರತ ತಂಡವನ್ನು ಬ್ಯಾಟಿಂಗ್‌ಗೆ ಆಹ್ವಾನಿಸಿತು. ಫೀಲ್ಡ್‌ಗೆ ಎಂಟ್ರಿ ಕೊಟ್ಟ ಸ್ಮೃತಿ ಮಂಧನಾ(136) ಹಾಗೂ ಹರ್ಮನ್ ಪ್ರೀತ್(103) ಜೋಡಿ ಹರಿಣ ಬೌಲರ್‌ಗಳ ಬೆವರಿಳಿಸಿದರು.
ಇದನ್ನೂ ಓದಿ: T20 World cup 2024 Super 8: ದಕ್ಷಿಣ ಆಫ್ರಿಕಾದ ಎದುರು ಮಂಡಿಯೂರಿದ ಅಮೆರಿಕ..!
50 ಓವರ್‌ಗಳ ಪಂದ್ಯದಲ್ಲಿ ಕೇವಲ 3 ವಿಕೆಟ್ ನಷ್ಟಕ್ಕೆ ಭಾರತ ತಂಡ 325 ರನ್ ಕಲೆಹಾಕಿತು. ನಂತರ ಗುರಿ ಬೆನ್ನತ್ತಿದ ದಕ್ಷಿಣ ಆಫ್ರಿಕಾ ತಂಡದ ಆಟಗಾರ್ತಿಯರು ಮೊದಲಿಗೆ ಭಾರಿ ಕಮ್ಮಿ ಮೊತ್ತಕ್ಕೆ ವಿಕೆಟ್ ಒಪ್ಪಿಸಿ ಹೊರ ನಡೆದಿದ್ದರು. ನಂತರ ಕ್ರೀಸ್‌ಗೆ ಎಂಡ್ರಿ ಕೊಟ್ಟ ಮರಿಝನ್ನೆ ಕಪ್ಪ್ ಮತ್ತು ವೂಲ್ವಾರ್ಡ್ ಜೋಡಿ ಉತ್ತಮ ಜೊತೆ ಆಟವಾಡಿದರು. ಈ ಇಬ್ಬರು 170 ಬಾಲ್‌ಗಳನ್ನಾಡಿ 184 ರನ್ ಕಲೆಹಾಕಿದರು. ಕೊನೆಯ ಐದು ಓವರ್‌ಗಳಲ್ಲಿ ದಕ್ಷಿಣ ಆಫ್ರಿಕಾ ತಂಡಕ್ಕೆ 54 ರನ್‌ಗಳು ಬೇಕಾಗಿತ್ತು. ಉತ್ತಮ ಬ್ಯಾಟಿಂಗ್ ಕಂಡುಬಂತಾದರೂ ಹರಿಣ ಪಡೆ 50 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 321 ರನ್ ಗಳಿಸಿ ಭಾರತ ವನಿತೆಯರ ಎದುರು ಮಂಡಿಯೂರಿದರು.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.