Karnataka Lok Sabha Election Result 2024: ಸದ್ಯ ರಾಜ್ಯದಲ್ಲಿನ 28 ಲೋಕಸಭಾ ಕ್ಷೇತ್ರಗಳ ಮತ ಎಣಿಕೆ ಪ್ರಸ್ತುತ ನಡೆಯುತ್ತಿದೆ.ಎರಡು ಹಂತದಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವು ಇಂಡಿಯಾ ಒಕ್ಕೂಟದ ಮೈತ್ರಿ ಬಲದೊಂದಿಗೆ ಸ್ಪರ್ಧಿಸಿದರೆ ಇನ್ನೊಂದೆಡೆಗೆ ಬಿಜೆಪಿ-ಜೆಡಿಎಸ್ ಎನ್ ಡಿಎ ಮೈತ್ರಿಕೂಟದೊಂದಿಗೆ ಚುನಾವಣೆಯನ್ನು ಎದುರಿಸಿತ್ತು.
ಈ ಬಾರಿ ರಾಜ್ಯದಲ್ಲಿನ ಕಾಂಗ್ರೆಸ್ ಸರ್ಕಾರ ಗ್ಯಾರಂಟಿ ಯೋಜನೆಗಳ ಯಶಸ್ವಿ ಜಾರಿಯ ಆಧಾರದ ಮೇಲೆ ಲೋಕಸಭಾ ಚುನಾವಣೆಯನ್ನು ಎದುರಿಸಿದರೆ, ಇನ್ನೊಂದೆಡೆಗೆ ಬಿಜೆಪಿ-ಜೆಡಿಎಸ್ ಮೈತ್ರಿಕೂಟವು ನರೇಂದ್ರ ಮೋದಿ ಅವರ ಜನಪ್ರಿಯತೆಯನ್ನು ಹೆಚ್ಚಾಗಿ ನೆಚ್ಚಿಕೊಂಡಿದೆ. ಇದರ ನಡುವೆ ಮತದಾರ ಯಾರ ಕೈ ಹಿಡಿಯುತ್ತಾನೆ ಎನ್ನುವುದನ್ನು ತಿಳಿಯಲು ನಾವು ಪೂರ್ಣ ಫಲಿತಾಂಶ ಪ್ರಕಟವಾಗುವರೆಗೆ ಕಾಯಬೇಕಾಗಿದೆ.2019 ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ 25 ಸ್ಥಾನಗಳಲ್ಲಿ ಗೆಲುವು ಸಾಧಿಸಿತ್ತು, ಸ್ವತಂತ್ರ ಅಭ್ಯರ್ಥಿಯಾಗಿ ಗೆಲುವನ್ನು ಸಾಧಿಸಿದ್ದ ಸುಮಲತಾ ನಂತರ ಬಿಜೆಪಿಗೆ ಸೇರ್ಪಡೆಯಾಗಿದ್ದರು. ಇನ್ನೂ ಕಾಂಗ್ರೆಸ್-ಜೆಡಿ (ಎಸ್) ಮೈತ್ರಿಯು ಉಳಿದ ಎರಡು ಸ್ಥಾನಗಳಲ್ಲಿ ತಲಾ ಒಂದರಲ್ಲಿ ಗೆಲುವನ್ನು ಸಾಧಿಸಿದ್ದವು. ಇನ್ನೂ ಮತ ಎಣಿಕೆ ಪ್ರಕ್ರಿಯೆ ನಡೆಯುತ್ತಿದ್ದು ಈ ಚುನಾವಣೆಯಲ್ಲಿ ಯಾರು ವಿಜಯಶಾಲಿಯಾಗುತ್ತಾರೆ ಎಂಬುದನ್ನು ನೋಡಬೇಕಾಗಿದೆ.
ಕರ್ನಾಟಕದ ಲೋಕಸಭಾ ಸಮರದಲ್ಲಿ ಗೆದ್ದಿರುವ ಅಭ್ಯರ್ಥಿಗಳು:
ಕ್ರ.ಸಂ | ಕ್ಷೇತ್ರ | ಬಿಜೆಪಿ + ಜೆಡಿಎಸ್ | ಕಾಂಗ್ರೆಸ್ |
ಫಲಿತಾಂಶ |
1 | ಚಿಕ್ಕೋಡಿ | ಅಣ್ಣಾ ಸಾಹೇಬ್ ಜೊಲ್ಲೆ | ಪ್ರಿಯಾಂಕಾ ಜಾರಕಿಹೊಳಿ | ಕಾಂಗ್ರೆಸ್ ಗೆ ಗೆಲುವು |
2 | ಬೆಳಗಾವಿ | ಜಗದೀಶ್ ಶೆಟ್ಟರ್ |
ಮೃಣಾಳ್ ಹೆಬ್ಬಾಳ್ಕರ್ |
ಬಿಜೆಪಿಗೆ ಗೆಲುವು |
3 | ಬಾಗಲಕೋಟೆ | ಪಿ.ಸಿ.ಗದ್ದಿಗೌಡರ್ | ಸಂಯುಕ್ತಾ ಪಾಟೀಲ್ | ಬಿಜೆಪಿಗೆ ಗೆಲುವು |
4 | ವಿಜಯಪುರ (ಎಸ್‌ಸಿ) |
ರಮೇಶ್ ಜಿಗಜಿಣಗಿ |
ರಾಜು ಅಲಗೂರು | ಬಿಜೆಪಿಗೆ ಗೆಲುವು |
5 | ಕಲುಬರಗಿ (ಎಸ್‌ಸಿ) | ಉಮೇಶ್ ಜಾಧವ್ | ರಾಧಾಕೃಷ್ಣ ದೊಡ್ಮನಿ | ಕಾಂಗ್ರೆಸ್ ಗೆ ಗೆಲುವು |
6 | ರಾಯಚೂರು (ಎಸ್‌ಟಿ) | ರಾಜಾ ಅಮರೇಶ್ವರ ನಾಯಕ್ | ಜಿ. ಕುಮಾರ ನಾಯ್ಕ್ | ಕಾಂಗ್ರೆಸ್ ಗೆ ಗೆಲುವು |
7 | ಬೀದರ್ | ಭಗವಂತ್ ಖೂಬಾ | ಸಾಗರ್ ಖಂಡ್ರೆ | ಕಾಂಗ್ರೆಸ್ ಗೆ ಗೆಲುವು |
8 | ಕೊಪ್ಪಳ | ಡಾ. ಬಸವರಾಜ್ ಕ್ಯಾವಟೂರು | ರಾಜಶೇಖರ್ ಹಿಟ್ನಾಳ್ | ಕಾಂಗ್ರೆಸ್ ಗೆ ಗೆಲುವು |
9 | ಬಳ್ಳಾರಿ (ಎಸ್‌ಟಿ) | ಶ್ರೀರಾಮುಲು | ಇ ತುಕಾರಾಂ | ಕಾಂಗ್ರೆಸ್ ಗೆ ಗೆಲುವು |
10 | ಹಾವೇರಿ | ಬಸವರಾಜ ಬೊಮ್ಮಾಯಿ | ಆನಂದ ಗಡ್ಡದೇವರ ಮಠ | ಬಿಜೆಪಿಗೆ ಗೆಲುವು |
11 | ಧಾರವಾಡ | ಪ್ರಲ್ಹಾದ್ ಜೋಶಿ |
ವಿನೋದ್ ಅಸೂಟಿ |
ಬಿಜೆಪಿಗೆ ಗೆಲುವು |
12 | ಉತ್ತರ ಕನ್ನಡ | ವಿಶ್ವೇಶ್ವರ ಹೆಗಡೆ ಕಾಗೇರಿ | ಅಂಜಲಿ ನಿಂಬಾಳ್ಕರ್ | ಬಿಜೆಪಿಗೆ ಗೆಲುವು |
13 | ದಾವಣಗೆರೆ | ಗಾಯತ್ರಿ ಸಿದ್ಧೇಶ್ವರ್ | ಡಾ ಪ್ರಭಾ ಮಲ್ಲಿಕಾರ್ಜುನ | ಕಾಂಗ್ರೆಸ್ ಗೆ ಗೆಲುವು |
14 | ಶಿವಮೊಗ್ಗ | ಬಿವೈ ರಾಘವೇಂದ್ರ | ಗೀತಾ ಶಿವರಾಜ್‌ಕುಮಾರ್ | ಬಿಜೆಪಿಗೆ ಗೆಲುವು |
15 | ಉಡುಪಿ- ಚಿಕ್ಕಮಗಳೂರು | ಕೋಟ ಶ್ರೀನಿವಾಸ ಪೂಜಾರಿ | ಡಾ. ಜಯಪ್ರಕಾಶ್ ಹೆಗ್ಡೆ | ಬಿಜೆಪಿಗೆ ಗೆಲುವು |
16 | ಹಾಸನ | ಪ್ರಜ್ವಲ್ ರೇವಣ್ಣ | ಶ್ರೇಯಸ್ ಪಟೇಲ್ | ಕಾಂಗ್ರೆಸ್ ಗೆ ಗೆಲುವು |
17 | ದಕ್ಷಿಣ ಕನ್ನಡ | ಕ್ಯಾಪ್ಟನ್ ಬ್ರಿಜೇಶ್ ಚೌಟ | ಪದ್ಮರಾಜ್ | ಬಿಜೆಪಿಗೆ ಗೆಲುವು |
18 |
ಚಿತ್ರದುರ್ಗ (ಎಸ್‌ಸಿ) |
ಎಂ. ಗೋವಿಂದ ಕಾರಜೋಳ |
ಬಿ.ಎನ್. ಚಂದ್ರಪ್ಪ |
ಬಿಜೆಪಿಗೆ ಗೆಲುವು |
19 | ತುಮಕೂರು | ವಿ.ಸೋಮಣ್ಣ | ಎಸ್ ಪಿ ಮುದ್ದಹನುಮೇಗೌಡ | ಬಿಜೆಪಿಗೆ ಗೆಲುವು |
20 | ಮಂಡ್ಯ | ಹೆಚ್ ಡಿ ಕುಮಾರಸ್ವಾಮಿ | ಸ್ಟಾರ್ ಚಂದ್ರು | ಬಿಜೆಪಿ-ಜೆಡಿಎಸ್ ಗೆ ಗೆಲುವು |
21 | ಮೈಸೂರು | ಯದುವೀರ್ ಒಡೆಯರ್ | ಎಂ ಲಕ್ಷ್ಮಣ್ | ಬಿಜೆಪಿಗೆ ಗೆಲುವು |
22 | ಚಾಮರಾಜನಗರ (ಎಸ್‌ಸಿ) | ಎಸ್ ಬಾಲರಾಜ್ | ಸುನಿಲ್ ಬೋಸ್ | ಕಾಂಗ್ರೆಸ್ ಗೆ ಗೆಲುವು |
23 | ಬೆಂಗಳೂರು ಗ್ರಾಮಾಂತರ | ಡಾ. ಸಿ.ಎಎನ್ ಮಂಜುನಾಥ | ಡಿ ಕೆ ಸುರೇಶ್ | ಬಿಜೆಪಿ-ಜೆಡಿಎಸ್ ಗೆ ಗೆಲುವು |
24 | ಬೆಂಗಳೂರು ಉತ್ತರ | ಶೋಭಾ ಕರಂದ್ಲಾಜೆ | ಪ್ರೊ.ರಾಜೀವ್ ಗೌಡ | ಬಿಜೆಪಿಗೆ ಗೆಲುವು |
25 | ಬೆಂಗಳೂರು ಸೆಂಟ್ರಲ್ | ಪಿ.ಸಿ. ಮೋಹನ್ | ಮನ್ಸೂರ್ ಅಲಿ ಖಾನ್ | ಬಿಜೆಪಿಗೆ ಗೆಲುವು |
26 | ಬೆಂಗಳೂರು ದಕ್ಷಿಣ | ತೇಜಸ್ವಿ ಸೂರ್ಯ | ಸೌಮ್ಯಾ ರೆಡ್ಡಿ | ಬಿಜೆಪಿಗೆ ಗೆಲುವು |
27 | ಚಿಕ್ಕಬಳ್ಳಾಪುರ | ಡಾ.ಕೆ.ಸುಧಾಕರ್ | ರಕ್ಷಾ ರಾಮಯ್ಯ | ಬಿಜೆಪಿಗೆ ಗೆಲುವು |
28 | ಕೋಲಾರ | ಆರ್‌ಸಿ ಮಲ್ಲೇಶ್ ಬಾಬು | ಕೆ ವಿ ಗೌತಮ್ | ಬಿಜೆಪಿಗೆ ಗೆಲುವು |
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ