ನಾನು ಒಂದು ದಿನ ನಿಮ್ಮನ್ನು(ಮಿಥಾಲಿ) ಪುರುಷ ಕ್ರಿಕೆಟ್ ತಂಡದ ಕೋಚ್ ಆಗಿರಲು ಇಚ್ಚಿಸುತ್ತೇನೆ- ಶಾರುಖ್ ಖಾನ್

    

Last Updated : Jan 3, 2018, 04:37 PM IST
  • ನಾನು ಪಂದ್ಯದ ಸಮಯದಲ್ಲಿ ನನ್ನ ಒತ್ತಡದಿಂದ ಹೊರ ಬರಲು ಪುಸ್ತಕಗಳನ್ನು ಓದುತ್ತೇನೆ , ಅದು ನನ್ನನ್ನು ಶಾಂತವಾಗಿರಲು ಮತ್ತು ಉತ್ತಮ ಪ್ರದರ್ಶನವನ್ನು ನೀಡಲು ನನಗೆ ಸಹಾಯ ಮಾಡುತ್ತದೆ.
  • ನಾವು ಮೈದಾನದಲ್ಲಿ ನಮ್ಮ ಅತ್ಯುತ್ತಮ ಪ್ರದರ್ಶನವನ್ನು ನೀಡುತ್ತೇವೆ ಎಂದು ಖಚಿತಪಡಿಸಿಕೊಳ್ಳುವಲ್ಲಿ ಪ್ರತಿಯೊಬ್ಬರಿಗೂ ತಮ್ಮದೇ ಆದ ಮಾರ್ಗಗಳಿರುತ್ತವೆ.
ನಾನು ಒಂದು ದಿನ ನಿಮ್ಮನ್ನು(ಮಿಥಾಲಿ) ಪುರುಷ ಕ್ರಿಕೆಟ್ ತಂಡದ ಕೋಚ್ ಆಗಿರಲು ಇಚ್ಚಿಸುತ್ತೇನೆ-  ಶಾರುಖ್ ಖಾನ್  title=

ನವದೆಹಲಿ: ಭಾರತೀಯ ಮಹಿಳಾ ಕ್ರಿಕೆಟ್ ತಂಡದ ನಾಯಕ ಮಿಥಾಲಿ ರಾಜ್ 2018 ರ ಜನವರಿ 1 ರಂದು ಸೋಮವಾರ ಸ್ಟಾರ್ ಪ್ಲಸ್ನಲ್ಲಿ "ಟಿಇಡಿ ಟಾಕ್ಸ್ ಇಂಡಿಯಾ ನಯಿ ಸೋಚ್" ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಬಾಲಿವುಡ್ ನಟ ಶಾರೂಖ್ ಖಾನ್ ಆಟಗಾರ್ತಿಯನ್ನು ಪ್ರಶಂಸಿಸುತ್ತಾ, "ನಾನು ಒಂದು ದಿನ ಪುರುಷರ ಕ್ರಿಕೆಟ್ ತಂಡದ ತರಬೇತುದಾರನಾಗಿ ನಿಮ್ಮನ್ನು ನೋಡಲು ಬಯಸುತ್ತೇನೆ" ಎಂದು ಹೇಳಿದರು.

ಇದಕ್ಕೆ ಪ್ರತಿಕ್ರಿಯಿಸಿದ ಮಿಥಾಲಿ ರಾಜ್ ನಾನು ಯಾವಾಗಲೂ ನನ್ನಿಂದ ಅತ್ಯುತ್ತಮವಾದುದನ್ನು ನೀಡಲು ಬಯಸುತ್ತೇನೆ ಎಂದರು. ಇನ್ನು ಮುಂದುವರೆದು "ನೀವು ಮೈದಾನದಲ್ಲಿರುವಾಗ, ಪ್ರತಿಯೊಬ್ಬರೂ ಟ್ರೋಫಿಯನ್ನು ಗೆಲ್ಲಲು  ಇಡೀ ತಂಡವನ್ನು ಎದುರು ನೋಡುತ್ತಿರುತ್ತಾರೆ, ಆದ್ದರಿಂದ  ಆಗ ಅದು ಬರಿ ಆಟದ ವಿಷಯವಾಗಿರುವುದಿಲ್ಲ, ನಾವು ಮೈದಾನದಲ್ಲಿ ನಮ್ಮ ಅತ್ಯುತ್ತಮ ಪ್ರದರ್ಶನವನ್ನು  ನೀಡುತ್ತೇವೆ ಎಂದು ಖಚಿತಪಡಿಸಿಕೊಳ್ಳುವಲ್ಲಿ ಪ್ರತಿಯೊಬ್ಬರಿಗೂ ತಮ್ಮದೇ ಆದ ಮಾರ್ಗಗಳಿರುತ್ತವೆ ಎಂದು ಮಿಥಾಲಿ ವಿವರಿಸಿದರು.

ಐಸಿಸಿ ಮಹಿಳಾ ವಿಶ್ವಕಪ್ ಸಮಯದ ಸಂದರ್ಭದಲ್ಲಿ ಮಿಥಾಲಿ ಪುಸ್ತಕ ಓದುತ್ತಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ವೈರಲ್ ಆಗಿತ್ತು, ಈ ಕುರಿತು ಶಾರುಖ್ ಕೇಳಿದಾಗ "ನಾನು ಪಂದ್ಯದ ಸಮಯದಲ್ಲಿ ನನ್ನ ಒತ್ತಡದಿಂದ ಹೊರ ಬರಲು  ಪುಸ್ತಕಗಳನ್ನು ಓದುತ್ತೇನೆ , ಅದು ನನ್ನನ್ನು ಶಾಂತವಾಗಿರಲು ಮತ್ತು ಉತ್ತಮ ಪ್ರದರ್ಶನವನ್ನು ನೀಡಲು ನನಗೆ ಸಹಾಯ ಮಾಡುತ್ತದೆ" ಎಂದು ವಿವರಿಸಿದರು 

Trending News