ಸುರಕ್ಷಿತ ಸ್ಮಾರಕಗಳ ಬಳಿ ಕಟ್ಟಡ ನಿರ್ಮಾಣ: ನೂತನ ಮಸೂದೆಗೆ ಮುಂದಾದ ಕೇಂದ್ರ ಸರ್ಕಾರ

    

Last Updated : Jan 3, 2018, 03:55 PM IST
  • ಪುರಾತನ ಸ್ಮಾರಕಗಳು ಮತ್ತು ಪುರಾತತ್ತ್ವ ಶಾಸ್ತ್ರದ ತಾಣಗಳು ಮತ್ತು ಅವಶೇಷಗಳು (ತಿದ್ದುಪಡಿ) ಮಸೂದೆ, 2017 ರಲ್ಲಿ "ನಿಷೇಧಿತ ಪ್ರದೇಶಗಳಲ್ಲಿ" ಕಟ್ಟಡ ನಿರ್ಮಾಣವನ್ನು ನಿಷೇಧಿಸುವ ಕಾಯಿದೆಗೆ ತಿದ್ದುಪಡಿ ಮಾಡಿದೆ.
  • ಈ ಮಸೂದೆ ಅಡಿಯಲ್ಲಿ ಸಾರ್ವಜನಿಕ ಅಥವಾ ದೇಶದ ಹಿತಾಸಕ್ತಿಗೆ ಪೂರಕವಾಗಿದ್ದರೆ ಮಾತ್ರ ಆ ಯೋಜನೆಗಳನ್ನು ಸರ್ಕಾರವು ಪುರಸ್ಕರಿಸುತ್ತದೆ.
ಸುರಕ್ಷಿತ ಸ್ಮಾರಕಗಳ ಬಳಿ ಕಟ್ಟಡ ನಿರ್ಮಾಣ: ನೂತನ ಮಸೂದೆಗೆ ಮುಂದಾದ ಕೇಂದ್ರ ಸರ್ಕಾರ  title=

ನವದೆಹಲಿ: ಪುರಾತನ ಮತ್ತು ಸಂರಕ್ಷಿತ ಸ್ಮಾರಕಗಳ 100 ಮೀಟರ್ ಆವರಣದಲ್ಲಿ ನೂತನ ಕಟ್ಟಡ ನಿರ್ಮಾಣಕ್ಕೆ ಅನುಮತಿ ನೀಡುವ ಮಸೂದೆಗೆ ಮಂಗಳವಾರ  ಲೋಕಸಭೆಯಲ್ಲಿ ಅಂಗಿಕರಿಸಲಾಯಿತು.

ಪುರಾತನ ಸ್ಮಾರಕಗಳು ಮತ್ತು ಪುರಾತತ್ತ್ವ ಶಾಸ್ತ್ರದ ತಾಣಗಳು ಮತ್ತು ಅವಶೇಷಗಳು (ತಿದ್ದುಪಡಿ) ಮಸೂದೆ, 2017 ರಲ್ಲಿ "ನಿಷೇಧಿತ ಪ್ರದೇಶಗಳಲ್ಲಿ" ಕಟ್ಟಡ ನಿರ್ಮಾಣವನ್ನು ನಿಷೇಧಿಸುವ  ಕಾಯಿದೆಗೆ ತಿದ್ದುಪಡಿ ಮಾಡಿದೆ - ಇದು ಸ್ಮಾರಕದ ಸುತ್ತಲೂ 100 ಮೀಟರ ಆವರಣದಲ್ಲಿ ಯಾವುದೇ ರೀತಿಯ ಕಟ್ಟಡ ಕಟ್ಟುವುದನ್ನು ಅದು ನಿಷೇಧಿಸುತ್ತದೆ. ಪ್ರಸ್ತಾವಿತ ತಿದ್ದುಪಡಿಯು "ನಿಷೇಧಿತ ಪ್ರದೇಶಗಳಲ್ಲಿ" ಸಾರ್ವಜನಿಕ ಉದ್ದೇಶಕ್ಕಾಗಿ ನಾಗರಿಕ ನಿರ್ಮಾಣವನ್ನು ಸರ್ಕಾರದ ಅಧಿಕೃತ ಅನುಮತಿಯ ನಂತರ ಕಟ್ಟಡ ನಿರ್ಮಾಣ ಮಾಡಲು ಅವಕಾಶ ನೀಡುತ್ತದೆ.  

ಸಾರ್ವಜನಿಕ ಸುರಕ್ಷತೆ ಮತ್ತು ಭದ್ರತೆಗೆ ಅಗತ್ಯವಾದ  ಮೂಲಸೌಕರ್ಯದ ನಿರ್ಮಾಣವನ್ನು ಒಳಗೊಂಡಿರುವ ಸಾರ್ವಜನಿಕ ಕಟ್ಟಡ ನಿರ್ಮಾಣವನ್ನು ಸಂರಕ್ಷಿತ ಸ್ಮಾರಕದ  ಪುರಾತತ್ತ್ವ ಮತ್ತು ಪರಂಪರೆ ಪರಿಣಾಮವನ್ನು  ಪರಿಗಣಿಸಿದ ನಂತರ ಮಾತ್ರ ಕಟ್ಟಡಕ್ಕೆ ಅನುಮತಿಸಲಾಗುವುದು ಎಂದು ಮಸೂದೆ ತಿಳಿಸುತ್ತದೆ.

ಈ ಮಸೂದೆ ಅಡಿಯಲ್ಲಿ ಸಾರ್ವಜನಿಕ ಅಥವಾ ದೇಶದ ಹಿತಾಸಕ್ತಿಗೆ ಪೂರಕವಾಗಿದ್ದರೆ  ಮಾತ್ರ ಆ ಯೋಜನೆಗಳನ್ನು ಸರ್ಕಾರವು ಪುರಸ್ಕರಿಸುತ್ತದೆ.ಯಾವುದೇ ಕಾರಣಕ್ಕೂ ಅದು ಖಾಸಗಿ ವ್ಯಕ್ತಿಗಳಿಗೆ ಅವಕಾಶವನ್ನು ನೀಡುವುದಿಲ್ಲ  ಎಂದು ಸಂಸ್ಕೃತಿ ಸಚಿವ ಮಹೇಶ್ ಶರ್ಮಾ ಲೋಕಸಭೆಯಲ್ಲಿ  ತಿಳಿಸಿದರು.

Trending News