ಮುಖಭಂಗಕ್ಕೊಳಗಾದ ಬಿಜೆಪಿಗೆ ಕಾಂಗ್ರೆಸಿನ 8 ಪ್ರಶ್ನೆಗಳು!

ಮಹಾರಾಷ್ಟ್ರದಲ್ಲಿ ನೀವು ಪ್ರಜಾಪ್ರಭುತ್ವದ ಅಣಕವನ್ನು ಏಕೆ ಮಾಡಿದಿರಿ? ಎಂದು ಕಾಂಗ್ರೆಸ್ ಬಿಜೆಪಿಯನ್ನು ಪ್ರಶ್ನಿಸಿದೆ.

Last Updated : Nov 27, 2019, 07:34 AM IST
ಮುಖಭಂಗಕ್ಕೊಳಗಾದ ಬಿಜೆಪಿಗೆ ಕಾಂಗ್ರೆಸಿನ 8 ಪ್ರಶ್ನೆಗಳು! title=

ನವದೆಹಲಿ: ಎರಡನೇ ಬಾರಿಗೆ ಮಹಾರಾಷ್ಟ್ರದ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ಪೀಕರಿಸಿದ ನಾಲ್ಕೇ ದಿನದಲ್ಲಿ ರಾಜೀನಾಮೆ
ನೀಡಿರುವ ಬಿಜೆಪಿಯ ದೇವೇಂದ್ರ ಫಡ್ನವಿಸ್(Devendra Fadnavis) ಕ್ಷಮೆಯಾಚಿಸಬೇಕೆಂದು ಕಾಂಗ್ರೆಸ್ ಒತ್ತಾಯಿಸಿದೆ. ಜೊತೆಗೆ
ಬಿಜೆಪಿಗೆ ಎಂಟು ಪ್ರಶ್ನೆಗಳನ್ನು ಕೇಳಿದೆ.

ಕಾಂಗ್ರೆಸ್‌ ವಕ್ತಾರ ರಣದೀಪ್ ಸಿಂಗ್ ಸುರ್ಜೆವಾಲಾ(Randeep Sing Surjewala) ಪ್ರಶ್ನೆಗಳನ್ನು ಟ್ವೀಟ್ ಮಾಡಿದ್ದು 'ಪ್ರಜಾಪ್ರಭುತ್ವದ
ಅಪಹರಣ ಮಾಡಿದ ದೇವೇಂದ್ರ ಫಡ್ನವೀಸ್ ಮತ್ತು ಅಜಿತ್ ಪವಾರ್(Ajit Pawar) ಕ್ಷಮೆಯಾಚಿಸಬೇಕು. ಕಾರಣಕರ್ತರಾದ ಪ್ರಧಾನಿ
ನರೇಂದ್ರ ಮೋದಿ(Narendra Modi) ಮತ್ತು ಗೃಹ ಸಚಿವ ಅಮಿತ್ ಷಾ(Amit Shah) ನಮ್ಮ ಪ್ರಶ್ನೆಗಳಿಗೆ ಉತ್ತರಿಸಬೇಕೆಂದು
ಒತ್ತಾಯಿಸಿದ್ದಾರೆ. ಪ್ರಶ್ನೆಗಳು ಕೆಳಗಿನಂತಿವೆ.

1. ಮಹಾರಾಷ್ಟ್ರ(Maharashtra)ದಲ್ಲಿ ನೀವು ಪ್ರಜಾಪ್ರಭುತ್ವದ ಅಣಕವನ್ನು ಏಕೆ ಮಾಡಿದಿರಿ?

2. ನೀವು ರಾಜ್ಯಪಾಲರನ್ನು ಕೈಗೊಂಬೆಯಾಗಿ ಏಕೆ ಬಳಸಿಕೊಂಡಿರಿ?

3. ರಾಷ್ಟ್ರಪತಿಗಳ ಘನತೆಗೆ ನೀವು ನೋವುಂಟು ಮಾಡಿದ್ದು ಏಕೆ?

4. ನೀವು ದೇಶದ ಕ್ಯಾಬಿನೆಟ್ ಅನ್ನು ಪಾರ್ಶ್ವವಾಯುವಿಗೆ ತಳ್ಳಿದ್ದಾದರೂ ಏಕೆ?

5. ಪಕ್ಷಾಂತರ, ಖರೀದಿ ಮತ್ತು ಮಾರಾಟದ ಮೇಲೆ ನಿಮ್ಮ ಬೆತ್ತಲೆ ಉತ್ಸಾಹ ಏಕೆ?

6. ಅಲ್ಪಸಂಖ್ಯಾತ ಬಲದ ಸರ್ಕಾರವಿದ್ದರೂ ಬಹುಮತದ ಸರ್ಕಾರದಂತೆ ನಾಟಕವಾಡಿದ್ದು ಏಕೆ?

7. ಭ್ರಷ್ಟಾಚಾರದ ಪ್ರಕರಣಗಳನ್ನು ನೀವು ಏಕೆ ಹಿಂತೆಗೆದುಕೊಂಡಿರಿ?

8. ನೀವು ಸಂವಿಧಾನವನ್ನು ಏಕೆ ಕಿತ್ತುಹಾಕುತ್ತಿದ್ದೀರಿ?
 

Trending News