ಮಹಾರಾಷ್ಟ್ರ: 162 ಶಾಸಕರ ಬೆಂಬಲ ಪತ್ರವನ್ನು ರಾಜ್ ಭವನಕ್ಕೆ ಹಸ್ತಾಂತರಿಸಿದ NCP-ಶಿವಸೇನೆ-CONG

ರಾಜ್ ಭವನಕ್ಕೆ ಸಲ್ಲಿಸಲಾದ ಪತ್ರದಲ್ಲಿ, ಮೂರು ಪಕ್ಷಗಳು ಪ್ರಸ್ತುತ ಮಹಾರಾಷ್ಟ್ರದ ಸರ್ಕಾರವು ಸಂಖ್ಯಾ ಬಲವನ್ನು ಹೊಂದಿಲ್ಲ ಎಂದು ಹೇಳಿಕೊಂಡಿದ್ದು, ಈ ಸರ್ಕಾರಕ್ಕೆ ಬಹುಮತ ಸಾಬೀತಿಗೆ ಅಗತ್ಯವಾದ ಸಂಖ್ಯಾಬಲವಿಲ್ಲ ಎಂದು ತಿಳಿಸಿದೆ.

Last Updated : Nov 25, 2019, 01:16 PM IST
ಮಹಾರಾಷ್ಟ್ರ: 162 ಶಾಸಕರ ಬೆಂಬಲ ಪತ್ರವನ್ನು ರಾಜ್ ಭವನಕ್ಕೆ ಹಸ್ತಾಂತರಿಸಿದ NCP-ಶಿವಸೇನೆ-CONG title=
Photo courtesy: ANI

ಮುಂಬೈ: ಕಾಂಗ್ರೆಸ್ (Congress), ಎನ್‌ಸಿಪಿ(NCP) ಮತ್ತು ಶಿವಸೇನೆ(Shiv Sena)ಶಾಸಕರ ಬೆಂಬಲ ಪತ್ರಗಳನ್ನು ರಾಜ್ ಭವನಕ್ಕೆ ಹಸ್ತಾಂತರಿಸಿದೆ. ರಾಜ್ ಭವನಕ್ಕೆ ಸಲ್ಲಿಸಲಾದ ಪತ್ರದಲ್ಲಿ, ಮೂರು ಪಕ್ಷಗಳು ಪ್ರಸ್ತುತ ಮಹಾರಾಷ್ಟ್ರದ ಸರ್ಕಾರವು ಸಂಖ್ಯಾ ಬಲವನ್ನು ಹೊಂದಿಲ್ಲ ಎಂದು ಹೇಳಿಕೊಂಡಿದ್ದು, ಈ ಸರ್ಕಾರಕ್ಕೆ ಬಹುಮತ ಸಾಬೀತಿಗೆ ಅಗತ್ಯವಾದ ಸಂಖ್ಯಾಬಲವಿಲ್ಲ ಎಂದು ತಿಳಿಸಿದೆ.

ಸರ್ಕಾರ ರಚಿಸಲು ಅಗತ್ಯವಿರುವ ಸಂಖ್ಯಾಬಲ ನಮಗಿದೆ ಎಂದು ಮೂರು ಪಕ್ಷಗಳು ರಾಜಭವನಕ್ಕೆ ಸಲ್ಲಿಸಿದ ಪತ್ರದಲ್ಲಿ ಉಲ್ಲೇಖಿಸಿವೆ. ಎನ್‌ಸಿಪಿ(NCP) ಮುಖಂಡ ಜಯಂತ್ ಪಾಟೀಲ್ ಮಾತನಾಡಿ, ನಾವು 162 ಶಾಸಕರ ಬೆಂಬಲ ಪತ್ರವನ್ನು ರಾಜ್ ಭವನಕ್ಕೆ  ಹಸ್ತಾಂತರಿಸಿದ್ದೇವೆ. ರಾಜ್ಯಪಾಲ ಭಗತ್ ಸಿಂಗ್ ಕೊಶ್ಯರಿ ಈ ಸಮಯದಲ್ಲಿ ಮುಂಬೈನಲ್ಲಿಲ್ಲ, ಅವರು ಮಧ್ಯಾಹ್ನ 1.30 ರ ಸುಮಾರಿಗೆ ಮುಂಬೈ ತಲುಪಲಿದ್ದಾರೆ ಎಂದರು.

ಗಮನಾರ್ಹವಾಗಿ, ರಾಜ್ಯಪಾಲ ಭಗತ್ ಸಿಂಗ್ ಕೊಶ್ಯರಿ ಅವರು ಶನಿವಾರ ಬೆಳಿಗ್ಗೆ 8 ಗಂಟೆಗೆ ಮತ್ತೆ ಮಹಾರಾಷ್ಟ್ರ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ಬಿಜೆಪಿ ನಾಯಕ ದೇವೇಂದ್ರ ಫಡ್ನವೀಸ್ ಅವರಿಗೆ ಪ್ರಮಾಣ ವಚನ ಬೋಧಿಸಿದರು. ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್ ಅವರ ಸೋದರಳಿಯ ಹಾಗೂ ಬಂಡಾಯ ನಾಯಕ ಅಜಿತ್ ಪವಾರ್ ಸಹ ಉಪಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು. 

Trending News