50 ವರ್ಷ ಮೇಲ್ಪಟ್ಟ ನೌಕರರಿಗಾಗಿ VRS ಸ್ಕೀಮ್ ಆರಂಭಿಸಿದ BSNL

ಈ ವಿಷಯಕ್ಕೆ ಸಂಬಂಧಿಸಿದಂತೆ ಕೇಂದ್ರ ಸಂವಹನ ಸಚಿವ ರವಿಶಂಕರ್ ಪ್ರಸಾದ್ ಅವರು ಗುರುವಾರ ರಾಜ್ಯಸಭೆಯಲ್ಲಿ ಲಿಖಿತ ಉತ್ತರ ನೀಡಿದ್ದಾರೆ ಎಂದು ವರದಿಯಾಗಿದೆ.

Last Updated : Nov 22, 2019, 03:19 PM IST
50 ವರ್ಷ ಮೇಲ್ಪಟ್ಟ ನೌಕರರಿಗಾಗಿ VRS ಸ್ಕೀಮ್ ಆರಂಭಿಸಿದ BSNL title=

ನವದೆಹಲಿ: ನಷ್ಟವನ್ನು ಎದುರಿಸುತ್ತಿರುವ ಕೇಂದ್ರ ಸರ್ಕಾರಿ ಉದ್ಯಮ ಕಂಪನಿ ಭಾರತ್ ಸಂಚಾರ್ ನಿಗಮ್ ಲಿಮಿಟೆಡ್ (BSNL) ತನ್ನ ಉದ್ಯೋಗಿಗಳನ್ನು ಶೀಘ್ರದಲ್ಲೇ ನಿವೃತ್ತಿ ಹೊಂದಲು VRS ಯೋಜನೆ (ಸ್ವಯಂಪ್ರೇರಿತ ನಿವೃತ್ತಿ ಯೋಜನೆ) ತಂದಿದೆ. ವೆಚ್ಚವನ್ನು ಕಡಿಮೆ ಮಾಡಲು ಬಿಎಸ್‌ಎನ್‌ಎಲ್ ಸಿಬ್ಬಂದಿ ಈ ಯೋಜನೆಯನ್ನು ತಂದಿದ್ದಾರೆ ಎಂದು ವರದಿಯಾಗಿದೆ. ಬಿಎಸ್‌ಎನ್‌ಎಲ್‌ನ ಈ ಕೊಡುಗೆಗಳು 50 ವರ್ಷಕ್ಕಿಂತ ಮೇಲ್ಪಟ್ಟ ಉದ್ಯೋಗಿಗಳಿಗೆ ಎಂದು ಹೇಳಲಾಗುತ್ತಿದೆ. ಈ ಯೋಜನೆ ನವೆಂಬರ್ 4 ರಿಂದ ಪ್ರಾರಂಭವಾಗಿದ್ದು, ಅದಕ್ಕೆ ಅರ್ಜಿ ಸಲ್ಲಿಸಬೇಕಾದ ಯಾವುದೇ ಉದ್ಯೋಗಿ ಡಿಸೆಂಬರ್ 3 ರವರೆಗೆ ತನ್ನ ಇಲಾಖೆಗೆ ಮಾಹಿತಿ ನೀಡಬಹುದು ಎಂದು ವರದಿ ತಿಳಿಸಿದೆ.

ಈ ವಿಷಯಕ್ಕೆ ಸಂಬಂಧಿಸಿದಂತೆ ಕೇಂದ್ರ ಸಂವಹನ ಸಚಿವ ರವಿಶಂಕರ್ ಪ್ರಸಾದ್ ಅವರು ಗುರುವಾರ ರಾಜ್ಯಸಭೆಯಲ್ಲಿ ಲಿಖಿತ ಉತ್ತರ ನೀಡಿದ್ದಾರೆ ಎಂದು ವರದಿಯಾಗಿದೆ.

ಆರ್ಥಿಕ ಬಿಕ್ಕಟ್ಟು ಎದುರಿಸುತ್ತಿರುವ ಬಿಎಸ್‌ಎನ್‌ಎಲ್ ಮತ್ತು ಎಂಟಿಎನ್‌ಎಲ್ ಪುನರ್ ರಚನೆಗೊಳಿಸುವಿಕೆಗೆ ಸಂಪುಟ ಅನುಮೋದನೆ ದೊರೆತಿದೆ. ಮೂಲಗಳಿಂದ ಲಭಿಸಿರುವ ಮಾಹಿತಿ ಪ್ರಕಾರ ಕೇಂದ್ರ ಸರ್ಕಾರ ಎರಡೂ ಕಂಪನಿಗಳಿಗೆ ಸುಮಾರು 14 ಸಾವಿರ ಕೋಟಿ ರೂಪಾಯಿಗಳನ್ನು ನೀಡಲಿದೆ. ಇದರಲ್ಲಿ 10 ಸಾವಿರ ಕೋಟಿ ರೂಪಾಯಿಗಳನ್ನು ಬಿಎಸ್‌ಎನ್‌ಎಲ್‌ಗೆ, 4 ಸಾವಿರ ಕೋಟಿ ರೂಪಾಯಿಗಳನ್ನು ಎಂಟಿಎನ್‌ಎಲ್‌ಗೆ ನೀಡಲಾಗುವುದು. ಉದ್ಯೋಗಿಗಳಿಗೆ VRS ನೀಡಲು ಈ ನಿಧಿಯನ್ನು ಬಳಸಲಾಗುತ್ತದೆ ಎನ್ನಲಾಗಿದೆ.

ಬಿಎಸ್ಎನ್ಎಲ್ ಮತ್ತು ಎಂಟಿಎನ್ಎಲ್ ಉದ್ಯೋಗಿಗಳಿಗಾಗಿ ಸರ್ಕಾರವು ಆಕರ್ಷಕ VRS ಯೋಜನೆಯನ್ನು ರೂಪಿಸುತ್ತಿದೆ ಎಂದು ಮೂಲಗಳು ತಿಳಿಸಿವೆ. ಆದರೆ, ಯಾವ ಆಧಾರದ ಮೇಲೆ ವಿಆರ್‌ಎಸ್ ನೀಡಲಾಗುವುದು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಸಾರ್ವಜನಿಕ ವಲಯದ ಟೆಲಿಕಾಂ ಕಂಪನಿಗಳಾದ ಬಿಎಸ್‌ಎನ್‌ಎಲ್ ಮತ್ತು ಎಂಟಿಎನ್‌ಎಲ್ ಕಳೆದ ಕೆಲ ತಿಂಗಳುಗಳಿಂದ ಎರಡೂ ಕಂಪನಿಗಳು ತಮ್ಮ ನೌಕರರ ಸಂಬಳವನ್ನು ಕೇವಲ ಪಾವತಿಸುತ್ತಿಲ್ಲ. ಈ ಎರಡೂ ಕಂಪನಿಗಳು ನಿರಂತರವಾಗಿ ನಷ್ಟವನ್ನು ಅನುಭವಿಸುತ್ತಿವೆ ಎಂಬುದು ಗಮನಾರ್ಹ. 
 

Trending News