ನವದೆಹಲಿ: ಇಂದೋರ್ನ ಹೋಲ್ಕರ್ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಬಾಂಗ್ಲಾದೇಶ ವಿರುದ್ಧದ ಆರಂಭಿಕ ಪಂದ್ಯದಲ್ಲಿ ಇನ್ನಿಂಗ್ಸ್ ಮತ್ತು 130 ರನ್ಗಳ ಸಮಗ್ರ ಗೆಲುವಿನ ನಂತರ ಭಾರತದ ಅಂತರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ನ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಅಂಕ ಪಟ್ಟಿಯಲ್ಲಿ ಅಗ್ರಸ್ಥಾನದ ಪ್ರಾಬಲ್ಯ ಮುಂದುವರೆದಿದೆ.
ಈ ಋತುವಿನಲ್ಲಿ ತವರಿನಲ್ಲಿ ನಾಲ್ಕನೇ ನೇರ ಟೆಸ್ಟ್ ಗೆಲುವು ದಾಖಲಿಸುವ ಮೂಲಕ ಭಾರತವು 300 ಅಂಕಗಳನ್ನು ಗಳಿಸಿದೆ. ದಕ್ಷಿಣ ಆಫ್ರಿಕಾ ವಿರುದ್ಧದ ಮೂರು ಟೆಸ್ಟ್ ಪಂದ್ಯಗಳ ಸರಣಿಯಲ್ಲಿ ಮತ್ತು ವೆಸ್ಟ್ ಇಂಡೀಸ್ನಲ್ಲಿ ಎರಡು ಟೆಸ್ಟ್ ಸರಣಿಯಲ್ಲಿ ತಲಾ 120 ಅಂಕಗಳನ್ನು ಭಾರತ ಗಳಿಸಿತ್ತು.
Icc test champions hi belong to us #TeamIndia #INDvBAN pic.twitter.com/DIzPtPn2Bn
— bharat (@2020sulabhanand) November 16, 2019
ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಅಂಕಪಟ್ಟಿಯಲ್ಲಿ ಭಾರತ ತಂಡವು ಇದುವರೆಗೆ ಆಡಿರುವ 6 ಪಂದ್ಯಗಳಲ್ಲಿ ಆರನ್ನೂ ಗೆಲ್ಲುವ ಮೂಲಕ 300 ಅಂಕವನ್ನು ಗಳಿಸಿದೆ. ಇನ್ನೊಂದೆಡೆಗೆ ನ್ಯೂಜಿಲೆಂಡ್ ಹಾಗೂ ಶ್ರೀಲಂಕಾ ತಂಡಗಳು ಕ್ರಮವಾಗಿ ತಲಾ 60 ಅಂಕಗಳನ್ನು ಗಳಿಸುವ ಮೂಲಕ್ 2 ಮತ್ತು 3ನೇ ಸ್ಥಾನದಲ್ಲಿವೆ. ಪಾಕಿಸ್ತಾನ ತಂಡವು ಇದುವರೆಗೂ ಚಾಂಪಿಯನ್ಸ್ಶಿಪ್ ನಲ್ಲಿ ಒಂದು ಪಂದ್ಯವನ್ನು ಆಡಿಲ್ಲ, ಈಗ ಅದು ಆಸ್ಟ್ರೇಲಿಯಾದ ವಿರುದ್ಧದ ಸರಣಿಯಲ್ಲಿ ಆಡಲಿದೆ.