Rohit Sharma Net Worth: ರೋಹಿತ್ ಶರ್ಮಾ ಅವರನ್ನು ಹಿಟ್ ಮ್ಯಾನ್ ಎಂದೇ ಕರೆಯಲಾಗುತ್ತದೆ. ತನ್ನ ಪರಿಶ್ರಮದಿಂದಲೇ ಈ ಸ್ಥಾನಕ್ಕೆ ಬಂದಿರುವ ರೋಹಿತ್ ಅನೇಕ ಯುವಕರಿಗೆ ಮಾದರಿಯಾಗಿದ್ದಾರೆ. ನಾವಿಂದು ಈ ವರದಿಯಲ್ಲಿ ರೋಹಿತ್ ಶರ್ಮಾ ಆಸ್ತಿ ಬಗ್ಗೆ ಒಂದಿಷ್ಟು ಮಾಹಿತಿಯನ್ನು ನೀಡಲಿದ್ದೇವೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿv
ರೋಹಿತ್ ಶರ್ಮಾ ಪ್ರಸ್ತುತ ಟೀಮ್ ಇಂಡಿಯಾದ ನಾಯಕರಾಗಿದ್ದು, ಬಿಸಿಸಿಐ ಎ+ ವಿಭಾಗದಲ್ಲಿ ಇದ್ದಾರೆ. ಇದಕ್ಕಾಗಿ ಮಂಡಳಿಯು ರೋಹಿತ್’ಗೆ ವಾರ್ಷಿಕ 7 ಕೋಟಿ ರೂ.ಗಳನ್ನು ವೇತನವಾಗಿ ನೀಡುತ್ತದೆ. ಇದಲ್ಲದೇ ಮಂಡಳಿಯಿಂದ ಪಂದ್ಯ ಶುಲ್ಕವಾಗಿ 15 ಲಕ್ಷ ರೂ, ಜೊತೆಗೆ ಏಕದಿನ ಪಂದ್ಯ ಆಡಲು 6 ಲಕ್ಷ ಹಾಗೂ ಟಿ-20 ಪಂದ್ಯಕ್ಕೆ 3 ಲಕ್ಷ ರೂ ನೀಡುತ್ತದೆ.
ರೋಹಿತ್ ಶರ್ಮಾ ಮುಂಬೈ ಇಂಡಿಯನ್ಸ್ ತಂಡದ ನಾಯಕರಾಗಿಲ್ಲದಿದ್ದರೂ ಫ್ರಾಂಚೈಸಿ 16 ಕೋಟಿ ರೂ. ನೀಡುತ್ತದೆ. ವರದಿಗಳ ಪ್ರಕಾರ ರೋಹಿತ್ ಐಪಿಎಲ್’ನಲ್ಲಿ ಇದುವರೆಗೆ 178 ಕೋಟಿ ರೂ. ಗಳಿಕೆ ಮಾಡಿದ್ದಾರೆ.
ಇನ್ನು ರೋಹಿತ್ ಶರ್ಮಾ ಅವರ ಅಭಿಮಾನಿಗಳ ಸಂಖ್ಯೆ ಅದ್ಭುತವಾಗಿದೆ. Instagram ನಲ್ಲಿ 37.9 ಮಿಲಿಯನ್ ಫಾಲೋವರ್ಸ್ ಹೊಂದಿರುವ ಅವರು, ಒಂದು ಪೋಸ್ಟ್’ಗೆ 75 ಲಕ್ಷ ರೂ. ಪಡೆಯುತ್ತಾರೆ.
ರೋಹಿತ್ ಶರ್ಮಾ ಜಾಹೀರಾತಿನಿಂದಲೂ ಸಾಕಷ್ಟು ಸಂಪಾದಿಸುತ್ತಾರೆ. ಪ್ರಸ್ತುತ ಸುಮಾರು 28 ಬ್ರಾಂಡ್’ಗಳೊಂದಿಗೆ ಸಂಬಂಧ ಹೊಂದಿದ್ದಾರೆ. ಇದು ಜಿಯೋ ಸಿನಿಮಾ, ಮ್ಯಾಕ್ಸ್ ಲೈಫ್ ಇನ್ಶೂರೆನ್ಸ್, ಗೊಯಿಬಿಬೋ, ಸಿಯೆಟ್ ಟೈರ್, ಹಬ್ಲೋಟ್, ಉಷಾ, ಒಪ್ಪೋ, ಹೈಲ್ಯಾಂಡರ್’ನಂತಹ ದೊಡ್ಡ ಕಂಪನಿಗಳನ್ನು ಒಳಗೊಂಡಿದೆ. ವರದಿಗಳ ಪ್ರಕಾರ, ರೋಹಿತ್ ಪ್ರತಿ ಜಾಹೀರಾತಿಗೆ ಸರಾಸರಿ 5 ಕೋಟಿ ರೂ. ಪಡೆಯುತ್ತಾರೆ,
ರೋಹಿತ್ ಶರ್ಮಾ ಮುಂಬೈನ ಐಷಾರಾಮಿ ಮನೆಯಲ್ಲಿ ವಾಸಿಸುತ್ತಿದ್ದು, ಸುಮಾರು 30 ಕೋಟಿ ರೂ. ಮೌಲ್ಯದ್ದಾಗಿದೆ. ಈ ಫ್ಲಾಟ್ ತುಂಬಾ ದುಬಾರಿಯಾಗಲು ಕಾರಣವೆಂದರೆ ಅರಬ್ಬಿ ಸಮುದ್ರದ 270 ಡಿಗ್ರಿ ನೋಟ ಇಲ್ಲಿದೆ. ಇದಲ್ಲದೇ ರೋಹಿತ್ ಹೈದರಾಬಾದ್ ನಲ್ಲಿ 5 ಕೋಟಿ ಮೌಲ್ಯದ ಮನೆಯನ್ನೂ ಖರೀದಿಸಿದ್ದಾರೆ.
ರೋಹಿತ್ ಶರ್ಮಾ ನಿವ್ವಳ ಮೌಲ್ಯ ಸುಮಾರು 214 ಕೋಟಿ ರೂ. ಇನ್ನು ಒಟ್ಟು ಆದಾಯದಲ್ಲಿ ವಿರಾಟ್ ಕೊಹ್ಲಿ ಸಮವಿಲ್ಲದಿದ್ದರೂ, ಬಿಸಿಸಿಐ ಆದಾಯದ ವಿಚಾರದಲ್ಲಿ ವಿರಾಟ್’ಗಿಂತ ಹೆಚ್ಚೇ ಸಂಪಾದನೆ ಮಾಡುತ್ತಾರೆ ಶರ್ಮಾ.