Health Benefits of Star Anise: ಚಕ್ರಮೊಗ್ಗು ಅಥವಾ ಸ್ಟಾರ್ ಹೂವಿನ ಸೇವನೆಯಿಂದ ನೀವು ಹಲವಾರು ಆರೋಗ್ಯಕರ ಪ್ರಯೋಜನ ಪಡೆಯುತ್ತೀರಿ. ಇದರ ಸೇವನೆಯಿಂದ ಜೀರ್ಣಕ್ರಿಯೆ ಸುಧಾರಣೆಯಾಗುತ್ತದೆ.
Health Benefits of Star Anise: ಭಾರತೀಯ ಅಡುಗೆಮನೆಯಲ್ಲಿ ನೀವು ಹಲವಾರು ವಿಧದ ಮಸಾಲೆ ಪದಾರ್ಥಗಳನ್ನು ನೋಡಿಯೇ ಇರುತ್ತೀರಿ. ಚಕ್ಕೆ, ಲವಂಗ, ಏಲಕ್ಕಿ, ಕಾಳುಮೆಣಸು, ದಾಲ್ಚಿನಿ, ಸೋಂಪು ಹೀಗೆ ಹಲವಾರು ಮಸಾಲೆ ಪದಾರ್ಥಗಳಿರುತ್ತವೆ. ಇವುಗಳ ಜೊತೆಗೆ ಚಕ್ರಮೊಗ್ಗು ಅಥವಾ ಸ್ಟಾರ್ ಹೂವು ಎಂದು ಕರೆಯುವ ಮಸಾಲೆ ಪದಾರ್ಥದ ಬಗ್ಗೆ ಅನೇಕರಿಗೆ ಗೊತ್ತಿರುವುದಿಲ್ಲ. ಇದನ್ನು ಅಡುಗೆಯ ರುಚಿಗೆ ಬಳಸುತ್ತಾರೆ ಅಂತಾ ಅಷ್ಟೇ ಅಂದುಕೊಂಡಿರುತ್ತಾರೆ. ಆದರೆ ಈ ಮಸಾಲೆ ಪದಾರ್ಥವನ್ನು ಸೇವಿಸುವುದರಿಂದ ನೀವು ಹಲವಾರು ಆರೋಗ್ಯಕರ ಪ್ರಯೋಜನ ಪಡೆಯಬಹುದು.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ಚಕ್ರಮೊಗ್ಗನ್ನು ಏಲಕ್ಕಿ, ಬೇ ಎಲೆ, ಶುಂಠಿ, ದಾಲ್ಚಿನಿ, ಮೆಣಸು ಮುಂತಾದ ಮಸಾಲೆ ಪದಾರ್ಥದೊಂದಿಗೆ ಮಿಶ್ರಣ ಅಡುಗೆ ಮಾಡಬಹುದು.
ಚಕ್ರಮೊಗ್ಗು ಅಥವಾ ಸ್ಟಾರ್ ಹೂವಿನ ಸೇವನೆಯಿಂದ ನೀವು ಹಲವಾರು ಆರೋಗ್ಯಕರ ಪ್ರಯೋಜನ ಪಡೆಯುತ್ತೀರಿ. ಇದರ ಸೇವನೆಯಿಂದ ಜೀರ್ಣಕ್ರಿಯೆ ಸುಧಾರಣೆಯಾಗುತ್ತದೆ.
ಚಕ್ರಮೊಗ್ಗು ಸೇವನೆಯಿಂದ ಅಜೀರ್ಣ ಸಮಸ್ಯೆ ಕಡಿಮೆಯಾಗುತ್ತದೆ. ಇದು ಚಯಾಪಚಯವನ್ನು ಉತ್ತಮಪಡಿಸುತ್ತದೆ.
ಚಕ್ರಮೊಗ್ಗು ಶಿಲೀಂದ್ರ ಸೋಂಕಿನ ವಿರುದ್ಧ ಹೋರಾಡುತ್ತದೆ. ಇದು ಹಲವಾರು ಕಾಯಿಲೆಗಳಿಂದ ನಿಮಗೆ ರಕ್ಷಣೆ ನೀಡುತ್ತದೆ.
ಚಕ್ರಮೊಗ್ಗು ಜಂತು ಹುಳುಗಳನ್ನು ಕೊಲ್ಲುತ್ತದೆ. ಇದು ನಿದ್ರಾಜನಕ ಗುಣವನ್ನು ಹೊಂದಿದ್ದು, ಶೀತದಿಂದಲೂ ನಿಮಗೆ ಪರಿಹಾರವನ್ನು ನೀಡುತ್ತದೆ.