Puttakkana Makkalu Nanjamma: ಸಾರಿಕಾ ರಾಜ್ ಅರಸ್ ಎನ್ನುವ ಹೆಸರೇ ಹೇಳುವಂತೆ ಪುಟ್ಟಕ್ಕನ ಮಕ್ಕಳು ನಂಜಮ್ಮನವರದ್ದು ಅರಸು ಮನೆತನ.. ಪೊಲೀಸ್ ಅಧಿಕಾರಿ ಲಿಂಗರಾಜ್ ಅರಸ್ ಹಾಗೂ ರೇವತಿ ಅರಸ್ ದಂಪತಿಗೆ ಪುತ್ರಿಯಾಗಿ ಜನಿಸಿದ ಇವರು ಬಾಲ್ಯದಲ್ಲಿಯೇ ಕಿರುತೆರೆಗೆ ಕಾಲಿಟ್ಟರು..
ಸಾರಿಕಾ ರಾಜ್ ಅರಸ್ ಎನ್ನುವ ಹೆಸರೇ ಹೇಳುವಂತೆ ಪುಟ್ಟಕ್ಕನ ಮಕ್ಕಳು ನಂಜಮ್ಮನವರದ್ದು ಅರಸು ಮನೆತನ.. ಪೊಲೀಸ್ ಅಧಿಕಾರಿ ಲಿಂಗರಾಜ್ ಅರಸ್ ಹಾಗೂ ರೇವತಿ ಅರಸ್ ದಂಪತಿಗೆ ಪುತ್ರಿಯಾಗಿ ಜನಿಸಿದ ಇವರು ಬಾಲ್ಯದಲ್ಲಿಯೇ ಕಿರುತೆರೆಗೆ ಕಾಲಿಟ್ಟರು..
ಡಿಡಿ ವಾಹಿನಿಯಲ್ಲಿ ಗಂಗಾ ಎನ್ನುವ ಹಿಂದಿ ಧಾರಾವಾಹಿ ಪ್ರಸಾರವಾಗುತ್ತಿರುವ ಸಮಯ.. ಆಗ 8 ವರ್ಷದವರಾಗಿದ್ದ ನಟಿ ಸಾರಿಕಾ ಅದರಲ್ಲಿ ನಟಿಸಿದ್ದಾರೆ.. ಇದೇ ಅವರ ಮೊದಲ ಸಿರೀಯಲ್.. ಇವರ ವೃತ್ತಿ ಬದುಕಿನಲ್ಲಿ ಮೂರು ದಶಕಗಳು ದಾಟಿವೆ.. 400 ಅಧಿಕ ಧಾರವಾಹಿಗಳಲ್ಲಿ ನಟಿಸಿದ್ದಾರೆ..
ನನ್ನರಸಿ ರಾಧೆ, ಪುಟ್ಟಕ್ಕನ ಮಕ್ಕಳು ಹೀಗೆ ಹಲವಾರು ಧಾರವಾಹಿಗಳಲ್ಲಿ ವಿಲನ್ ಪಾತ್ರದ ಮೂಲಕ ಗುರುತಿಸಿಕೊಂಡವರು.. ಯಾವುದೇ ಪಾತ್ರ ಕೊಟ್ಟರು ಅಚ್ಚುಕಟ್ಟಾಗಿ ನಿಭಾಯಿಸುವ ಮಹಾನ್ ಕಲಾವಿದೆ ಇವರು.. ಸಿನಿಮಾ ರಂಗವೇ ನನ್ನ ಜೀವಾಳ ಎಂದು ಹೇಳುವ ಸಾರಿಕಾ ಅವರಿಗೆ ಎಲ್ಲ ಪಾತ್ರಗಳನ್ನು ಮಾಡುವ ಹೆಬ್ಬಯಕೆ ಇದೆ..
8 ವರ್ಷಕ್ಕೆ ಇಂಡಸ್ಟ್ರೀಗೆ ಕಾಲಿಟ್ಟ ಇವರ ಅರ್ಧ ಜೀವನ ಅಲ್ಲಿಯೇ ಕಳೆದಿದೆ.. ಆದರೆ ಇವರ ವೈಯಕ್ತಿಕ ಜೀವನದ ಬಗ್ಗೆ ಹಲವರಿಗೆ ಗೊತ್ತಿಲ್ಲ.. ಸಿನಿರಂಗದಲ್ಲಿ ದೊಡ್ಡ ಹೆಸರು ಮಾಡಿರುವ ಸಾರಿಕಾ ವಿಭಿನ್ನ ಪಾತ್ರಗಳಲ್ಲಿ ಮಿಂಚಿದ್ದಾರೆ..
ಇವರ ವೈವಾಹಿಕ ಜೀವನದ ಬಗ್ಗೆ ಮಾತನಾಡುವುದಾದರೇ ಇವರು ಕನ್ನಡದ ಖ್ಯಾತ ಛಾಯಾಗ್ರಾಹಕ ಮ್ಯಾಥ್ಯುರಾಜನ್ ಅವರನ್ನು ವಿವಾಹವಾದರು.. ದಂಪತಿಗೆ ಒಬ್ಬ ಮಗಳು ಇದ್ದಾಳೆ..