Sandalwood Actress Arathi Real Life: 70 80ರ ದಶಕದ ಬಹುಬೇಡಿಕೆಯ ನಟಿ ಆರತಿ ತಮ್ಮ ಅಧ್ಬುತ ಅಭಿನಯದ ಮೂಲಕ ಹಲವಾರು ಸಿನಿಮಾಗಳಲ್ಲಿ ನಟಿಸುವ ಅವಕಾಶ ಪಡೆದರು.. ಇವರ ಕನ್ನೋಟದ ಅಭಿನಯಕ್ಕೆ ಮಾರುಹೋಗದವರೇ ಇಲ್ಲ.. ನಟಿ 2005 ಮಿಠಾಯಿ ಮನೆ ಸಿನಿಮಾ ನಿರ್ದೇಶನ ಮಾಡಿ ಸಿನಿರಂಗದಿಂದಲೇ ದೂರ ಸರಿದರು..
ಡಾ. ರಾಜ್‌ಕುಮಾರ್, ಶ್ರೀನಾಥ್, ವಿಷ್ಣುವರ್ಧನ್ ಸೇರಿದಂತೆ ಹಲವಾರು ದೊಡ್ಡ ದೊಡ್ಡ ನಟರೊಂದಿಗೆ ತೆರೆಹಂಚಿಕೊಂಡ ಇವರು ಸಿನಿರಂಗದ ಅಭಿಮಾನಿಗಳ ಕನಸಿನ ಕನ್ಯಯಾಗುವುದರ ಜೊತೆಗೆ ವಿಧಾನಸಭೆ ಸದಸ್ಯರೂ ಆಗಿದ್ದರು..
ನಟಿ ಆರತಿ ಸದ್ಯ ಅಮೇರಿಕಾದಲ್ಲಿ ತಮ್ಮ ಪತಿಯೊಂದಿಗೆ ನೆಲೆಸಿದ್ದಾರೆ ಎನ್ನಲಾಗಿದೆ.. ಇವರಿಗೆ ಯಶಸ್ವಿನಿ, ಪ್ರೀತಿ ಎಂಬ ಇಬ್ಬರು ಹೆಣ್ಣು ಮಕ್ಕಳಿದ್ದಾರೆ.. ಹೆಚ್ಚಾಗಿ ಆಧ್ಯಾತ್ಮಿಕ ನೆಲೆಗೆ ಹೊಂದಿಕೊಂಡು ಜೀವನ ಸಾಗಿಸುತ್ತಾ.. ಬದುಕಲ್ಲಿ ಶಾಂತಿ ನೆಮ್ಮದಿ ಗಳಿಸಿದ್ದಾರೆ ಎಂದು ಹೇಳಲಾಗುತ್ತದೆ.
ಸಾಕಷ್ಟು ಉತ್ತಮ ಸಾಮಾಜಿಕ ಕೆಲಸಗಳನ್ನು ಮಾಡುತ್ತಿರುವ ಇವರು ಹಲವು ಹಳ್ಳಿಗಳನ್ನು ದತ್ತು ಪಡೆದು ಅಲ್ಲಿ ಮೂಲ ಸೌಕರ್ಯ ಒದಗಿಸುವ ಕಾರ್ಯವನ್ನು ಮಾಡುತ್ತಿದ್ದಾರೆ ಎನ್ನಲಾಗಿದೆ..
ಪುಟ್ಟಣ್ಣ ಕಣಗಾಲ್ ಅವರನ್ನು ಮದುವೆಯಾಗಿದ್ದ ಆರತಿ ಕೆಲ ಸಮಯದ ನಂತರ ಅವರಿಂದ ದೂರವಾದರು.. ನಂತರ ಅವರು ಚಂದ್ರಶೇಖರ್ ದೇಸಾಯ್‌ಗೌಡರ್ ಎಂಬವರನ್ನು ವಿವಾಹವಾಗಿ ಅಮೇರಿಕಾದಲ್ಲಿಯೇ ಜೀವನ ನಡೆಸುತ್ತಿದ್ದಾರೆ..
ಸದ್ಯ ಎಲ್ಲ ಮಾದ್ಯಮಗಳಿಂದಲೂ ದೂರವಿರುವ ನಟಿ ಆರತಿ ಸಿನಿರಂಗದವರ ಜೊತೆ ಯಾವುದೇ ಬಾಂಧವ್ಯ ಹೊಂದಿಲ್ಲ ಎನ್ನಲಾಗಿದೆ.. ಆದರೆ ಇವರು ಸಾಮಾಜಿಕ ಸೇವೆಯಲ್ಲಿ ನಿರತರಾಗಿದ್ದಾರೆ ಎನ್ನುವ ಮಾಹಿತಿಯೊಂದಿದೆ..