ಶಿವಮೊಗ್ಗ: ನಗರದ ಹಲವು ರಸ್ತೆಗಳು ಹೆಚ್ಚಾಗಿ ಹಳ್ಳ-ಗುಂಡಿಗಳಿಂದ ತುಂಬಿವೆ ಎಂದು ಆರೋಪಿಸಿರುವ ವಿದ್ಯಾರ್ಥಿ ಸಂಘಟನೆಯ ಸದಸ್ಯರು ಶುಕ್ರವಾರ ಶಿವಮೊಗ್ಗದಲ್ಲಿನ ರಸ್ತೆ ಪರಿಸ್ಥಿತಿಗಳ ವಿರುದ್ಧ ಗುಂಡಿಗಳಲ್ಲಿ ಸಸಿಗಳನ್ನು ನೆಡುವ ಮೂಲಕ ಪ್ರತಿಭಟನೆ ನಡೆಸಿದರು.
ಶುಕ್ರವಾರ ರಸ್ತೆ ಗುಂಡಿಗಳಲ್ಲಿ ಸಸಿ ನೆಟ್ಟು, ತಮ್ಮ ಕೈಯಲ್ಲಿ ಫಲಕಗಳನ್ನು ಹಿಡಿದುಕೊಂಡು ರಾಜ್ಯದಲ್ಲಿ ಬಿಜೆಪಿ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದ ವಿದ್ಯಾರ್ಥಿಗಳು, ಶೀಘ್ರವೇ ಈ ಸಮಸ್ಯೆಗೆ ಪರಿಹಾರ ನೀಡುವಂತೆ ಒತ್ತಾಯಿಸಿದ್ದಾರೆ.
Karnataka: Members of Vidyarthi Sanghatane, a student organisation, staged protest against 'poor road conditions' in Shivamogga by planting saplings in potholes. (25.10.19) pic.twitter.com/zbQQFRGPh9
— ANI (@ANI) October 25, 2019
ನಾಲ್ಕು ಬಾರಿ ಮುಖ್ಯಮಂತ್ರಿಯಾಗಿ ಆಯ್ಕೆಯಾಗಿರುವ ಬಿ.ಎಸ್.ಯಡಿಯುರಪ್ಪ, ಮೂರು ಬಾರಿ ಸಂಸದರಾಗಿರುವ ಬಿ.ವೈ. ರಾಘವೇಂದ್ರ(ಬಿಎಸ್ವೈ ಪುತ್ರ) ಮತ್ತು ಎರಡು ಖಾತೆಗಳನ್ನು ಹೊಂದಿರುವ ಹಿರಿಯ ಸಚಿವ ಕೆ.ಎಸ್.ಈಶ್ವರಪ್ಪ ಅವರು ಶಿವಮೊಗ್ಗ ಮೂಲದವರೇ. ಆದರೂ ನಮ್ಮ ಜಿಲ್ಲೆಯಲ್ಲಿ ರಸ್ತೆ ಗುಂಡಿಗಳ ಸಮಸ್ಯೆ ಪರಿಹಾರಕ್ಕೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ವಿದ್ಯಾರ್ಥಿಗಳು ಆರೋಪಿಸಿದ್ದಾರೆ.
ಜಿಲ್ಲೆಯ ಜನರು ಪ್ರತಿದಿನ ಈ ಬೀದಿಗಳಲ್ಲಿ ಸಂಚರಿಸಲು ಹೆಣಗಾಡುತ್ತಿದ್ದಾರೆ ಎಂದು ವಿದ್ಯಾಸಂಘಟನೆ ಅಧ್ಯಕ್ಷ ವಿನಯ್ ರಾಜವತ್ ಹೇಳಿದ್ದಾರೆ.
"ಯಾವುದೇ ಪಕ್ಷವಾಗಿರಲಿ, ಈ ಪ್ರದೇಶದ ಬೆಳವಣಿಗೆಗೆ ಕ್ರಮ ಕೈಗೊಳ್ಳದ ಕಾರಣ ಇಂದು ನಾವು ಬೀದಿಗಿಳಿಯಬೇಕಾಗಿದೆ. ರಸ್ತೆ ಗುಂಡಿಗಳನ್ನು ಸರಿಪಡಿಸುವುದು ಸೇರಿದಂತೆ ಇತರ ಸಮಸ್ಯೆಗಳನ್ನು ಪರಿಹರಿಸುವಂತೆ ನಾನು ನನ್ನ ರಕ್ತದಲ್ಲಿ ಪತ್ರ ಬರೆದಿದ್ದೇನೆ". ಆದರೂ ಯಾರೂ ಸೂಕ್ತವಾಗಿ ಸ್ಪಂದಿಸಿಲ್ಲ ಎಂದು ಅವರು ಹೇಳಿದ್ದಾರೆ.
ಸುದ್ದಿಸಂಸ್ಥೆ ಎಎನ್ಐಯೊಂದಿಗೆ ಮಾತನಾಡಿದ ವಿದ್ಯಾರ್ಥಿಯೊಬ್ಬರು, “ಯಡಿಯೂರಪ್ಪ ನೇತೃತ್ವದ ಸರ್ಕಾರವು ಅಭಿವೃದ್ಧಿಯ ಬಗ್ಗೆ ಕಾಳಜಿ ವಹಿಸುತ್ತಿಲ್ಲ” ಎಂದು ವಿದ್ಯಾರ್ಥಿ ಸಂಘಟನೆಯು ಅಕ್ರೋಶ ವ್ಯಕ್ತಪಡಿಸಿದೆ.