Royal Challengers Bengaluru Playoff Scenario: ಪ್ರಸ್ತುತ ಇಂಡಿಯನ್ ಪ್ರೀಮಿಯರ್ ಲೀಗ್ 17 ಸೀಸನ್ ಭರ್ಜರಿಯಾಗಿ ನಡೆಯುತ್ತಿದೆ. ಆದರೆ ರಾಯಲ್ ಚಾಲೆಂಜರ್ಸ್ ಪಾಲಿಗೆ ಮಾತ್ರ ಹೀನಾಯ ಸ್ಥಿತಿಯೇ ಎದುರಾದಂತಿದೆ. ಇದುವರೆಗೆ ಆಡಿರುವ 5 ಪಂದ್ಯಗಳಲ್ಲಿ 4 ರಲ್ಲೂ ಸೋತಿರುವ ಆರ್ ಸಿ ಬಿಗೆ ಪ್ಲೇ ಆಫ್ ಪ್ರವೇಶದ ಹಾದಿ ಕಠಿಣವಾಗುತ್ತಿದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ
ಕಳೆದ ದಿನ ನಡೆದ ರಾಜಸ್ಥಾನ್ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಭರ್ಜರಿ ಶತಕದ ಹೊರತಾಗಿಯೂ ಗೆಲುವಿನ ದಡ ತಲುಪುವಲ್ಲಿ ಆರ್ ಸಿ ಬಿ ಎಡವಿತ್ತು.
ಹೀಗಿರುವಾಗ ಇದುವರೆಗೆ ಆಡಿರುವ 5 ಪಂದ್ಯಗಳಲ್ಲಿ 4 ರಲ್ಲೂ ಸೋತಿರುವ ಆರ್ ಸಿ ಬಿಗೆ ಪ್ಲೇ ಆಫ್ ಪ್ರವೇಶದ ಹಾದಿ ಕಠಿಣವಾಗುತ್ತಿದೆ. ಮತ್ತೊಂದೆಡೆ ಮುಂದೆ ಆರ್ ಸಿ ಬಿ ಪಾಲಿಗೆ 9 ಪಂದ್ಯಗಳು ಮಾತ್ರ ಬಾಕಿ ಉಳಿದಿವೆ.
ಬಾಕಿ ಉಳಿದಿರುವ 9 ಪಂದ್ಯಗಳಲ್ಲಿ ಎಷ್ಟು ಪಂದ್ಯಗಳನ್ನು ಗೆದ್ದರೆ ಆರ್ ಸಿ ಬಿ ಪ್ಲೇ ಆಫ್ ಪ್ರವೇಶಿಸುತ್ತದೆ ಎಂಬುದನ್ನು ಈ ವರದಿಯಲ್ಲಿ ತಿಳಿಯೋಣ,
ಇದುವರೆಗೆ ನಡೆದಿರುವ 5 ಪಂದ್ಯಗಳ ಪೈಕಿ ನಾಲ್ಕರಲ್ಲಿ ಆರ್ ಸಿ ಬಿ ಸೋತಿದೆ. ಜೊತೆಗೆ 1 ಗೆಲುವು ಸಾಧಿಸಿದ್ದು, ಕೇವಲ 2 ಅಂಕಗಳ ಪಡೆದಿರುವ ತಂಡ ಅಂಕಪಟ್ಟಿಯಲ್ಲಿ 8ನೇ ಸ್ಥಾನದಲ್ಲಿದೆ.
ಯಾವುದೇ ತಂಡವಾದರೂ ಪ್ಲೇ ಆಫ್ ಪ್ರವೇಶಿಸಲು ಕನಿಷ್ಠ 8 ಪಂದ್ಯಗಳನ್ನಾದರೂ ಗೆಲ್ಲಲೇಬೇಕು. ಅಂದರೆ ಇಷ್ಟು ಪಂದ್ಯಗಳನ್ನು ಗೆದ್ದರೆ ಒಟ್ಟು 16 ಅಂಕಗಳು ಲಭಿಸುತ್ತವೆ.
ಈಗಾಗಲೇ ಆರ್ ಸಿ ಬಿ ಒಂದು ಪಂದ್ಯದಲ್ಲಿ ಗೆದ್ದಿದ್ದು, ಇನ್ನು 7 ಪಂದ್ಯಗಳನ್ನು ಗೆಲ್ಲಲೇ ಬೇಕು. ಕೇವಲ ಗೆದ್ದರೆ ಸಾಲದು, ನೆಟ್ ರನ್ ರೇಟ್ ಕೂಡ ಉತ್ತಮವಾಗಿ ಕಾಯ್ದುಕೊಂಡರೆ ಪ್ಲೇ ಆಫ್ ಪ್ರವೇಶಿಸಲು ಸಾಧ್ಯ.
ಒಂದು ವೇಳೆ ಇನ್ನುಳಿದರುವ 9 ಪಂದ್ಯಗಳಲ್ಲೂ ಗೆದ್ದರೆ ಯಾವುದೇ ಸಮಸ್ಯೆ ಇಲ್ಲದೆ, ನೇರವಾಗಿ ಪ್ಲೇ ಆಫ್ ಪ್ರವೇಶಿಸಬಹುದು. ಪ್ರಸ್ತುತ ಎಲ್ಲಾ ತಂಡಗಳು ಉತ್ತಮ ಪ್ರದರ್ಶನ ತೋರುತ್ತಿದೆ. ಆದರೆ ಬೆಂಗಳೂರು ತಂಡ ಅಂಕಪಟ್ಟಿಯಲ್ಲಿ ಕೆಳಮುಖವಾಗುತ್ತಿರುವುದು ಅಭಿಮಾನಿಗಳ ಅಸಮಾಧಾನಕ್ಕೆ ಕಾರಣವಾಗಿದೆ.