ಬೆಂಗಳೂರು: ಇಲ್ಲಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಐಪಿಎಲ್ 2024 ರ ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ 28 ರನ್ ಗಳ ಅಂತರದಲ್ಲಿ ಸೋಲನ್ನು ಅನುಭವಿಸಿದೆ. ಆ ಮೂಲಕ ಟೂರ್ನಿಯಲ್ಲಿ ಆರ್ಸಿಬಿ ತಂಡದ ಸೋಲಿನ ಅಭಿಯಾನ ಮುಂದುವರೆದಿದೆ.
ಟಾಸ್ ಗೆದ್ದು ಮೊದಲು ಫೀಲ್ಡಿಂಗ್ ಆಯ್ದುಕೊಂಡ ಆರ್ಸಿಬಿ ತಂಡವು 181 ರನ್ ಗಳಿಗೆ ಲಕ್ನೋ ತಂಡವನ್ನು ಕಟ್ಟಿ ಹಾಕಿತು.ಇದೆ ವೇಳೆ ಲಕ್ನೋ ತಂಡದ ಪರವಾಗಿ ಸ್ಪೋಟಕ ಬ್ಯಾಟಿಂಗ್ ಪ್ರದರ್ಶನ ನೀಡಿದ ಕ್ವಿಂಟನ್ ಡಿಕಾಕ್ ಕೇವಲ 56 ಎಸೆತಗಳಲ್ಲಿ ಎಂಟು ಬೌಂಡರಿ ಹಾಗೂ ಐದು ಸಿಕ್ಸರ್ ಗಳ ನೆರವಿನಿಂದ 81 ರನ್ ಗಳನ್ನು ಗಳಿಸಿದರು.ಇನ್ನೊಂದೆಡೆಗೆ ಪೂರಣ್ ಕೇವಲ 21 ಎಸೆತಗಳಲ್ಲಿ ಒಂದು ಬೌಂಡರಿ ಹಾಗೂ ಐದು ಸಿಕ್ಸರ್ ಗಳಿಂದ 40 ರನ್ ಗಳಿಸಿ ತಂಡಕ್ಕೆ ನೆರವಾದರು.
A win at home followed by a win away from home for the Lucknow Super Giants! 👏👏
They move to number 4⃣ on the Points Table!
Scorecard ▶️ https://t.co/ZZ42YW8tPz#TATAIPL | #RCBvLSG pic.twitter.com/uc8rWveRim
— IndianPremierLeague (@IPL) April 2, 2024
ಅಂತಿಮವಾಗಿ ಲಕ್ನೋ ತಂಡವು 20 ಓವರ್ ಗಳಲ್ಲಿ ಐದು ವಿಕೆಟ್ ನಷ್ಟಕ್ಕೆ 181 ರನ್ ಗಳಿಸಿತು.
182 ರನ್ ಗಳ ಗೆಲುವಿನ ಗುರಿಯನ್ನು ಬೆನ್ನತ್ತಿದ ಆರ್ಸಿಬಿ ತಂಡವು 19.4 ಓವರ್ ಗಳಲ್ಲಿ 153 ರನ್ ಗಳಿಗೆ ಸರ್ವಪತನ ಕಂಡಿತು.ಆರ್ಸಿಬಿ ಪರವಾಗಿ ಮಹಿಪಾಲ್ ಲೋಮ್ರೋರ್ 33 ರನ್ ಗಳಿಸಿದ್ದೆ ಅಧಿಕ ಮೊತ್ತವಾಗಿತ್ತು. ಇನ್ನೊಂದೆಡೆಗೆ ಲಕ್ನೋ ತಂಡದ ಪರವಾಗಿ ಮಾರಕ ಬೌಲಿಂಗ್ ದಾಳಿ ನಡೆಸಿದ ಮಾಯಾಂಕ್ ಯಾದವ್ ಮೂರು ಹಾಗೂ ನವೀನ್ ಉಲ್ ಹಕ್ ಎರಡು ವಿಕೆಟ್ ಗಳನ್ನು ಕಬಳಿಸಿದರು.ಆ ಮೂಲಕ ಬಲಿಷ್ಠ ಆರ್ಸಿಬಿ ತಂಡದ ಬ್ಯಾಟಿಂಗ್ ಬೆನ್ನೆಲುಬುನ್ನು ಮುರಿಯುವಲ್ಲಿ ಯಶಸ್ವಿಯಾದರು.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=I87DcFM35WY
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.